ಬೆಳಗಾವಿ 26: ನಗರದ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಮಂಗಳವಾರ ಕ್ಯಾನ್ಸರ್ ಜಾಗೃತಿ ಕಾಯರ್ಾಗಾರ ನಡೆಯಿತು. ಮಹಾವಿದ್ಯಾಲಯದ ವಿದ್ಯಾಥರ್ಿ ವಿಭಾಗ, ಎಂಜಿನಿಯರಿಂಗ್ನಲ್ಲಿ ಮಹಿಳೆಯರು, ಯುಎಸ್ಎ ನ ಐಇಇಇ ಸಂಯುಕ್ತಾಶ್ರಯದಲ್ಲಿ ನಡೆದ ಕಾಯರ್ಾಗಾರದ ಮುಖ್ಯ ಅತಿಥಿಯಾಗಿದ್ದ ಡಾ. ರೇಣು ಪಟ್ಟಣಶೆಟ್ಟಿ ಮಾತನಾಡಿ, ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ಗೆ ಕಾರಣಗಳು, ಪರಿಹಾರೋಪಾಯಗಳು, ಮುಂಜಾಗೃತಿ, ಪತ್ತೆ ಹಚ್ಚುವಿಕೆ ಕುರಿತು ವಿವರಣೆ ನೀಡಿದರು. ಡಾ. ಕೃಪಾ ಆರ್. ರಾಸನೆ, ಸಂಯೋಜಕಿ ಪ್ರೊ. ಸುಸ್ಮಾ ಯು. ಕಾಮತ್, ಪ್ರೊ. ಜುಹಿ ಸುಬೇದಾರ, ತನುಜಾ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.