ಉಡುಪಿ 17: ಕರಾವಳಿಯಲ್ಲಿ ಹೆಚ್ಚು ಮೆಚ್ಚುಗೆ ಪಡೆದಿರುವ ಜಾನಪದ ಕಲೆ ಯಕ್ಷಗಾನದ ಈಗಿನ ಗುಣಮಟ್ಟ ಹಿಂದಿನ ಕಾಲಕ್ಕಿಂತ ಕಳಪೆಯಾಗಿದ್ದು ಕಲೆಯ ಸಂಪ್ರದಾಯಬದ್ದತೆ ಕಳೆದು ಹೋಗಿದೆ ಎಂಬ ಭಾವನೆ ಬಿಟ್ಟು ಈಗಿನ ಯಕ್ಷಗಾನವೇ ಉತ್ತಮವಾಗಿದ್ದು ಹೊಸತನದಿಂದ ಯಕ್ಷಗಾನವನ್ನು ಇನ್ನಷ್ಟು ಪ್ರಗತಿಗೊಳಿಸಿ ವಿಶ್ವಮಟ್ಟಕ್ಕೇರಿಸಿ ಕನರ್ಾಟಕದ ಕೀತರ್ಿಯನ್ನು ಹೆಚ್ಚಿಸಬೇಕೆಂದು ದೆಹಲಿ ಕನ್ನಡಿಗ, ತುಳುವೆರ್ ಪತ್ರಿಕೆಗಳ ಸಂಪಾದಕ, ಯಕ್ಷಗಾನ ವಿದ್ವಾಂಸ ಬಾ.ಸಾಮಗ ಅವರು ಕರೆ ನೀಡಿದರು.
ಅವರು ಶ್ರೀ ವಿಷ್ಣುಮೂತರ್ಿ ಯಕ್ಷಗಾನ ಕಲಾ ಸಂಘವು ಡಿ.15ರಂದು ಉಡುಪಿ ಸಮೀಪದ ಕೆಳಾರ್ಕಳಬೆಟ್ಟಿನಲ್ಲಿ ಏರ್ಪಡಿಸಿದ್ದ 11ನೇ ವಾಷರ್ಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಸಂಗೀತ, ನೃತ್ಯ, ವೇಷಭೂಷಣ, ಅರ್ಥಗಾರಿಕೆಯನ್ನೊಳಗೊಂಡ ಯಕ್ಷಗಾನದಲ್ಲಿ ಹಲವು ಬಾರಿ ಹೊಸತನಗಳ ಪ್ರಯೋಗ ನಡೆದಾಗ ಮೆಚ್ಚುಗೆ ಪಡೆದು ಕಲೆಯ ವಿಸ್ತಾರ ಸಾಧ್ಯವಾಗಿದೆ ಎಂದ ಸಾಮಗ ಅವರು ಸಂಪ್ರದಾಯದ ಚೌಕಟ್ಟಿನಲ್ಲೆ ಕಲೆ ಬೆಳೆಸಬೇಕೆಂದರೂ ಆ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದ್ದರಿಂದ ಬದಲಾದ ಸಮಾಜಕ್ಕೆ ಹೊಂದಿಕೊಂಡು ಇತರ ಉತ್ತಮ ಕಲೆಗಳ ಒಳ್ಳೆಯ ಅಂಶಗಳನ್ನು ಸೇರಿಸಿಕೊಂಡ ಭಾಷಾ ಬಂಧನದಿಂದ ಮುಕ್ತಗೊಳಿಸಿದರೆ ಯಕ್ಷಗಾನ ವಿಶ್ವಮಟ್ಟದ ಅಗ್ರಗಣ್ಯ ಕಲೆಯಾಗುವುದರಲ್ಲಿ ಸಂಶಯವಿಲ್ಲವೆಂದರು. ಕಲಾವಿದರ ಆಥರ್ಿಕ ಜೀವನಮಟ್ಟ ಸುಧಾರಿಸಿ 50ಕ್ಕೂ ಹೆಚ್ಚು ಮೇಳಗಳು ಯಕ್ಷಗಾನ ಪ್ರದಶರ್ಿಸಲು ಹೊಸತನವೇ ಕಾರಣವೆಂದ ಸಾಮಗ ಅವರು ವಿಮಶರ್ೆಯ ಗೊಂದಲಗಳಿಂದ ಯಕ್ಷಗಾನದ ಮುನ್ನಡೆಯ ಹಾದಿ ತಪ್ಪಿಸಬಾರದೆಂದರು.
ಗುರು ಬಡಾನಿಡಿಯೂರು ಕೇಶವ ರಾವ್ ಅವರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಯಕ್ಷಗಾನಕ್ಕೀಗ ಅಭೂತಪೂರ್ವ ಬೆಂಬಲ ದೊರಕಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ದಯಾನಂದ ಶೆಟ್ಟಿ, ವಿಷ್ಣುಮೂತರ್ಿ ದೇವಸ್ಥಾನದ ಅಧ್ಯಕ್ಷ ಕೆ.ಸದಾನಂದ ನಾಯ್ಕ, ಕಾರ್ಯದಶರ್ಿ ಎಸ್.ಜಯರಾಮಯ್ಯ, ಕಲಾವಿದರಾದ ಎಂ.ಕೆ. ಸುಕುಮಾರ ಶೆಟ್ಟಿ, ತೋನ್ಸೆ ಜಯಂತ ಕುಮಾರ್, ಕರುಣಾಕರ ಶೆಟ್ಟಿ, ರತ್ನಾಕರ ಆಚಾರ್ಯ, ಮೋಹನ ಭಟ್, ಉಪಸ್ಥಿತರಿದ್ದರು. ರವಿನಂದನ ಭಟ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ಶಿವಪಂಚಾಕ್ಷರಿ ಮಹಾತ್ಮೆ, ಶನೀಶ್ವರ ಮಹಾತ್ಮೆ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಯಿತು.