ಕುಮಟಾ 16: ಪಟ್ಟಣದ ಮಣಕಿ ಮೈದಾನಲ್ಲಿ ಏಪ್ರಿಲ್ 18 ರಂದು ಗುರುವಾರ ಮಧ್ಯಾಹ್ನ 11 ಗಂಟೆಗೆ ಮೈತ್ರಿ ಪಕ್ಷದ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಗಮಿಸುತ್ತಿದ್ದಾರೆ ಎಂದು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ತಿಳಿಸಿದರು.
ಅವರು ಮಂಗಳವಾರ ಪಕ್ಷದ ಕಾಯರ್ಾಲಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಪ್ರಚಾರ ಸಭೆಗೆ ಕರಾವಳಿ ಭಾಗದ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ತಾಲೂಕಿನಾದ್ಯಂತ ಪ್ರಚಾರ ಕಾರ್ಯ ತುರುಸಿನಿಂದ ನಡೆಯುತ್ತಿದ್ದು, ಮತದಾರರು ಮೈತ್ರಿ ಪಕ್ಷದ ಪರ ಉತ್ತಮ ಪ್ರತಿಕ್ರಿಯೆ ತೋರುತ್ತಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ಏ 17 ರಂದು ಬುಧವಾರ 4 ಗಂಟೆಗೆ ಸರಿಯಾಗಿ ನಾಮಧಾರಿ ಸಭಾಭವನದಲ್ಲಿ ಮೈತ್ರಿಪಕ್ಷದ ಸಭೆ ಹಮ್ಮಿಕೊಂಡಿದ್ದು, ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆಯವರು ಆಗಮಿಸಲಿದ್ದಾರೆ. ಈ ಸಭೆಗೆ ಎರಡೂ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕು ಎಂದು ವಿನಂತಿಸಿದರು. ಅಲ್ಲದೇ ಸತ್ಯ, ಧರ್ಮ, ನ್ಯಾಯ, ನೀತಿ ಎಂಬ ನಾಟಕದ ಮಾತುಗಳನ್ನಾಡುವ ಅನಂತಕುಮಾರ ಹೆಗಡೆ ತಮಗೆ ನೀಡುವ 80.000 ಕೋಟಿ ರೂ. ಅನುದಾನವನ್ನು ಎಲ್ಲಿ ಬಳಸಿದ್ದಾರೆ. ಯಾವ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ದತ್ತು ಪಡೆದಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು. ಜೆಡಿಎಸ್ ಯುವ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ ಹಾಗೂ ಆರ್ ಎಚ್ ನಾಯ್ಕ ಮಾತನಾಡಿ, ಪಕ್ಷದ ಕಾರ್ಯಕರ್ತರು ಆನಂದ ಅಸ್ನೋಟಿಕರ್ರವರ ಗೆಲುವಿಗೆ ಎಲ್ಲರೂ ಒಂದಾಗಿ ಶ್ರಮಿಸಬೇಕು. ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸದ ಅನಂತಕುಮಾರ ಹೆಗಡೆಯವರನ್ನು ಸೋಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯ ಮತದಾರರು ಮೈತ್ರಿ ಪಕ್ಷದ ಪರ ಒಲವು ತೋರಲು ಅನಂತಕುಮಾರ ಹೆಗಡೆಯವರ ಶೂನ್ಯ ಸಾಧನೆಯೇ ಕಾರಣ. ಎಂದರು. ಸುದ್ಧಿಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದಶರ್ಿ ಗಜು ನಾಯ್ಕ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ್, ಜೆಡಿಎಸ್ ತಾಲೂಕಾಧ್ಯಕ್ಷ ಮಂಜುನಾಥ ಪಟಗಾರ, ಪುರಸಭಾ ಮಾಜಿ ಅಧ್ಯಕ್ಷ ಮಧುಸೂದನ ಶೇಟ್, ಪುರಸಭೆ ಸದಸ್ಯ ಎಂ ಟಿ ನಾಯ್ಕ, ಕಿರಣ ಕಾಮತ, ತಾರಾ ಗೌಡ, ಸುರೇಖಾ ವಾರೇಕರ್, ವೀಣಾ ನಾಯಕ ತಲಗೇರಿ, ಸತೀಶ ಚಂದಾವರ್, ರವಿ ಗೌಡ ಹಟ್ಟಿಕೇರಿ, ಸಿ ಜಿ ಹೆಗಡೆ, ಸಚೀನ ನಾಯ್ಕ, ಮೈಕಲ್, ಎನ್ ಆರ್ ಮುಕ್ರಿ, ಸುಬ್ಬಯ್ಯ ನಾಯ್ಕ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.