ಧಾರವಾಡ 26: ಧಾರವಾಡದಲ್ಲಿ ಕಳೆದ 20 ತಿಂಗಳ ಅವಧಿಯ ಸೇವೆ ಅತ್ಯಂತ ತೃಪ್ತಿ ನೀಡಿದೆ. ಶಿಕ್ಷಣ,ಆರೋಗ್ಯ,ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇರಿ ಎಲ್ಲ ಇಲಾಖೆಗಳು ಒಗ್ಗೂಡಿ ಇನ್ನೂ ಸಾಕಷ್ಟು ಕೆಲಸ ಮಾಡಲು ಸಾಧ್ಯವಿದೆ ಎಂದು ಜಿ.ಪಂ.ನಿರ್ಗಮಿತ ಸಿಇಓ ಸ್ನೇಹಲ್ ರಾಯಮಾನೆ ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಸಂಜೆ ಏರ್ಪಡಿಲಾಗಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾಕಾಶಿ ಎಂಬ ಹಿರಿಮೆ ಹೊಂದಿರುವ ಧಾರವಾಡ ಜಿಲ್ಲೆಗೆ ನಾಡಿನಲ್ಲಿ ವಿಶೇಷ ಸ್ಥಾನವಿದೆ. ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿದೆ.ಧಾರವಾಡದಿಂದ ಉತ್ತಮ ನೆನಪುಗಳನ್ನು ಕೊಂಡೊಯ್ಯುತ್ತಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೂತನ ಸಿಇಓ ಡಾ.ಬಿ.ಸಿ.ಸತೀಶ ಮಾತನಾಡಿ, ಎಲ್ಲರನ್ನೂ ಪದೇ ಪದೇ ಕರೆಯಿಸಿಕೊಳ್ಳುವ ಗುಣ ಧಾರವಾಡಕ್ಕೆ ಇದೆ. ಸ್ನೇಹಲ್ ಅವರು ಈ ಜಿಲ್ಲೆಯಲ್ಲಿ ಉತ್ತಮ ತಂಡ ಕಟ್ಟಿದ್ದಾರೆ, ಎಲ್ಲರೂ ಸೇರಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯೋಣ ಎಂದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ,ಜಿ.ಪಂ.ಉಪಕಾರ್ಯದಶರ್ಿ ಶಂಕರ್ ಜಿ.ಕೊರವರ್, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿವರ್ಾಹಕ ಇಂಜಿನಿಯರ್ ಮನೋಹರ ಮಂಡೋಲಿ,ಜಿ.ಪಂ.ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಗಿರಿಧರ ಕುಕನೂರ, ಪಿಡಿಓ ಜಗದೀಶ ಹಡಪದ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದರ್ೇಶಕ ಎನ್.ಮುನಿರಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ಎಂ.ದೊಡ್ಡಮನಿ, ಡಿಮ್ಹಾನ್ಸ್ ಆಡಳಿತಾಧಿಕಾರಿ ಶಾರದಾ ಕೋಲಕಾರ, ಪಿಡಿಓ ಬೀಡಿಕರ್, ರೇಷ್ಮೆ ಉಪನಿದರ್ೇಶಕ ಎಸ್.ಜಿ.ದಾನಿ, ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಡೊಳ್ಳಿನ , ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿಗಳಾದ ಕಂದಕೂರ , ಎಸ್. ಎಸ್. ಕಾದ್ರೋಳಿ ,ತಾ.ಪಂ.ಸಹಾಯಕ ನಿದರ್ೇಶಕ ಪ್ರಶಾಂತ ಮತ್ತಿತರ ಅಧಿಕಾರಿಗಳು ಮಾತನಾಡಿದರು. ಪದ್ಮಶ್ರೀ ಸಂಗೀತ ವಿದ್ಯಾಲಯದ ವಿದ್ಯಾಥರ್ಿಗಳು ಪ್ರಾಥರ್ಿಸಿದರು,ಜಿಲ್ಲಾ ಆಯುಷ್ ಅಧಿಕಾರಿ ಡಾ.ಜೆ.ಟಿ.ಪವಾರ್ ಸ್ವಾಗತಿಸಿದರು,ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ನಿರೂಪಿಸಿದರು.