ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ನೂತನ ಅಧ್ಯಕ್ಷರಾಗಿ ಸಿ.ಎ.ಚನ್ನಪ್ಪ ನೇಮಕ
ಕಂಪ್ಲಿ 07: ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಕಂಪ್ಲಿ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಕಂಪ್ಲಿ ನಿವಾಸಿ ಸಿ.ಎ.ಚನ್ನಪ್ಪ ನೇಮಕಗೊಂಡಿದ್ದಾರೆ. ರಾಜ್ಯಾಧ್ಯಕ್ಷ ಡಾ.ಕೋದಂಡರಾಮ್ ಆರ್ ಅವರು ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರಕ್ಕೆ ಸಿ.ಎ.ಚನ್ನಪ್ಪ ಇವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅದೇಶಿಸಿ, ತಕ್ಷಣದಿಂದಲೇ ಅಧ್ಯಕ್ಷ ಸ್ಥಾನದ ತಮ್ಮ ಜವಾಬ್ದಾರಿವಹಿಸಿಕೊಂಡು ಕಂಪ್ಲಿ, ಕುರುಗೋಡು ತಾಲೂಕು ಒಳಗೊಂಡಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ಸಕ್ರಿಯವಾಗಿ ಕೆಲಸ ಮಾಡಲು ಮತ್ತು ಬಡ, ಮಧ್ಯಮ ವರ್ಗದ ಹಾಗೂ ಹಿಂದುಳಿದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಹೋರಾಟ, ಚಳುವಳಿ ಮೂಲಕ ಸಲ್ಲಿಸಬೇಕು.
ಸೇನೆಯ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು, ಬಾಬಾ ಸಾಹೇಬ್ ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ರಾಜ್ಯದಲ್ಲಿ ಅನೇಕ ಸಾಮಾಜಿಕ ಚಳುವಳಿಗಳನ್ನು ಮಾಡಿಕೊಂಡು ಬರುತ್ತಿದೆ. ಈ ಸಾಮಾಜಿಕ ಚಳುವಳಿ ಹಾಗೂ ಹೋರಾಟಗಳನ್ನು ಬಳ್ಳಾರಿ ಜಿಲ್ಲೆಯಲ್ಲಿ ಮಾಡಲು ಹಾಗೂ ನಮ್ಮ ಜೊತೆ ಕೈಜೋಡಿಸಲು ಕಂಪ್ಲಿ ಕ್ಷೇತ್ರಕ್ಕೆ ಸಿ.ಎ.ಚನ್ನಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು, ಕ್ಷೇತ್ರದಲ್ಲಿ ಸಂಘಟನೆ ಬಲಪಡಿಸುವ ಜತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಹೋರಾಟದ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಸಂಘಟನೆಯ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ, ಸಂಘಟನೆಯಿಂದ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಆನಂದಕುಮಾರ್ ಎಂ, ರಾಜ್ಯ ಕಾರ್ಯದರ್ಶಿಗಳಾದ ರಾಮಚಂದ್ರ ಕೆ,ರಾಜೇಂದ್ರ ಬಾಬು, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ವೈಎಸ್ಕೆ, ರಾಜ್ಯ ಮಹಿಳಾ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಗಾಯಿತ್ರಿ ವರ್ತೂರು, ಬೆಂಗಳೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಬೆಂಗಳೂರು ಜಿಲ್ಲಾ ಕಾರ್ಯಧ್ಯಕ್ಷ ಶಿವಕುಮಾರ್ ಚಿತ್ರದುರ್ಗ, ದಕ್ಷಿಣ ತಾಲೂಕು ಅಧ್ಯಕ್ಷ ಮಂಜುನಾಥ ಎನ್, ಜಿಲ್ಲಾ ಅಲ್ಪಸಂಖ್ಯಾತರ ಘಟಕ ಗೌರವಾಧ್ಯಕ್ಷ ಮೊಹಮ್ಮದ್ ಮೋಹಸಿನ್, ಜಿಲ್ಲಾಧ್ಯಕ್ಷ ಸಾಧಿಕ್ (ಸೀಮೆಣ್ಣೆ), ಜಿಲ್ಲಾ ಉಪಾಧ್ಯಕ್ಷ ಸಿಕಂದರ್, ಹಿರಿಯೂರು ತಾಲೂಕು ಅಧ್ಯಕ್ಷರ ರಾಘವೇಂದ್ರ ಆರ್ ಹೊಳಲ್ಕೆರೆ, ತಾಲೂಕು ಅಧ್ಯಕ್ಷ ತಿಪ್ಪೇಶ್ ಕೆ.ಎನ್. ಹಿರಿಯೂರು, ತಾಲೂಕು ಎಸ್ ಟಿ ಘಟಕ ತಾಲೂಕು ಅಧ್ಯಕ್ಷ ರಂಗಸ್ವಾಮಿ, ತಾಲೂಕು ಉಪಾಧ್ಯಕ್ಷ ಲಕ್ಷ್ಮಣ್ ರಾವ್, ಅಲ್ಪಸಂಖ್ಯಾತರ ಘಟಕ ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಗೀತಮ್ಮ, ಬೆಂಗಳೂರು ದಕ್ಷಿಣ ಅಧ್ಯಕ್ಷ ಪುಟ್ಟೇನಹಳ್ಳಿ ಮಂಜುನಾಥ್. ಬೆಂಗಳೂರು ಪೂರ್ವ ಅಧ್ಯಕ್ಷ ರಾಕೇಶ್ ಇದ್ದರು.