'ಗುಣಾತ್ಮಕ ಶಿಕ್ಷಣದಿಂದ ಮಕ್ಕಳ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ
ಲೋಕದರ್ಶನ ವರದಿ
ಬೈಲಹೊಂಗಲ 14: ಗುಣಾತ್ಮಕ ಶಿಕ್ಷಣದಿಂದ ಮಕ್ಕಳ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ ಅಡಕಿ ಹೇಳಿದರು.
ಅವರು ತಾಲೂಕಿನ ನಯಾನಗರ ಸಕರ್ಾರಿ ಉನ್ನತೀಕರಿಸಿದ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳು ರಾಷ್ಟ್ರೀಯ ವಿದ್ಯಾಥರ್ಿ ವೇತನ ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಗೊಂಡ ನಿಮಿತ್ಯ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಶಾಲೆಯ ಎಲ್ಲ ಗುರು ಹಾಗೂ ಗುರುಮಾತೆಯರ ಶ್ರಮದ ಫಲವಾಗಿ ಇಂದು ಮಕ್ಕಳು ಸಾಧನೆ ಮಾಡಲು ಸಾಧ್ಯವಾಗಿದೆ ಗುರುಬಳಗ ಇದಕ್ಕೆ ತೃಪ್ತಿ ಪಡದೆ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ಹೊರತರಲು ಪ್ರಯತ್ನಿಸಬೇಕೆಂದು ಹೇಳಿದರು.
ವಿದ್ಯಾಥರ್ಿಗಳಾದ ಅನುಶ್ರೀ ಗಾಣಿಗೇರ 109, ವಿವೇಕ ನಲವಡೆ 89, ಅನುರಾಧಾ ಸೂರ್ಯವಂಶಿ 88, ಅರ್ಚನಾ ಸೂರ್ಯವಂಶಿ 85, ಸೃಷ್ಠಿ ದಾಸರ 77, ಅಭಿಷೇಕ ಬಿರಾಜನವರ 77 ಅಂಕ ಪಡೆದ ವಿದ್ಯಾಥರ್ಿಗಳು ಪದವಿ ಪೂರ್ವ ಶಿಕ್ಷಣದವರೆಗೆ ಮಾಸಿಕ ರೂ.1000/- ಶಿಷ್ಯವೇತನ ಪಡೆಯಲಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ.ಮಾರ್ಗದರ್ಶಕ ನಾರಾಯಣ ನಲವಡೆ, ಗಣಪತಿ ಬಾಗಲೆ, ಚೇತನ ಸಾಲಿಮಠ, ಪಿ.ಬಿ ಮಂತ್ರೋಪಕರ, ಡಿ.ಬಿ ಕುಂಕೂರ, ವ್ಹಿ.ಪಿ ಹಿರೇಮಠ ಇದ್ದರು.