ಇಷ್ಟಲಿಂಗ ಪೂಜೆಯಿಂದ ಸಂಕಷ್ಡಗಳು ದೂರಾಗುತ್ತವೆ ಮಾನಸಿಕ ನೆಮ್ಮದಿ ಮತ್ತು ಸಮಾಧಾನಕ್ಕೆ ನಿತ್ಯ
ಅಥಣಿ 27 : ಇಷ್ಟಲಿಂಗ ಪೂಜೆಯಿಂದ ಸಂಕಷ್ಡಗಳು ದೂರಾಗುತ್ತವೆ, ಮಾನಸಿಕ ನೆಮ್ಮದಿ ಮತ್ತು ಸಮಾಧಾನಕ್ಕೆ ನಿತ್ಯ ಇಷ್ಟಲಿಂಗ ಪೂಜೆ ರೂಢಿಸಿಕೊಳ್ಳಿ ಎಂದು ಗುರುಮಠ ಕಲ್ಲದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಗಚ್ಚಿನ ಮಠದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ಸಹಜ ಶಿವಯೋಗದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಭಕ್ತಿ ಭಾವ ಕೇವಲ ಮಹಾ ಶಿವರಾತ್ರಿ ದಿನಕ್ಕಷ್ಟೇ ಸೀಮಿತಗೊಳಿಸದೇ ನಿತ್ಯವೂ ಭಕ್ತಿ ಭಾವದ ಜೊತೆಗೆ ಶಿವಸ್ಮರಣೆ ಮಾಡಬೇಕು ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬಿಗ್ ಬಾಸ್ ಸ್ಪರ್ಧಿಗಳಾದ ಗೋಲ್ಡ ಸುರೇಶ್ ಮತ್ತು ಎಸ್.ಆರ್.ಧನರಾಜ ಮಾತನಾಡಿ ಇಷ್ಟಲಿಂಗ ಪೂಜೆ ನಿರಂತರವಾಗಿ ಮಾಡುವುದರಿಂದ ನಮ್ಮಲ್ಲಿ ಗುಣಾತ್ಮಕ ಅಂಶಗಳು ಜಾಗೃತಗೊಳ್ಳುತ್ತವೆ ಎಂದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಶಿವಯೋಗ ಸಾಧನೆಗೆ ಇಷ್ಟಲಿಂಗ ಪೂಜೆ ಉತ್ತಮ ಮಾರ್ಗವಾಗಿದೆ ಎಂದ ಸಹಜ ಶಿವಯೋಗ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಸಾಮಾನ್ಯನೂ ಕೂಡ ಭಕ್ತಿಯೋಗ ತಲುಪಬಹುದು ಎಂದರು. ಪಲ್ಲಕ್ಕಿ ಉತ್ಸವ- ಮಹಾ ಶಿವರಾತ್ರಿ ಅಂಗವಾಗಿ ಮುರುಘೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಮಹಾ ಅಭಿಷೇಕ ಜರುಗಿತು ನಂತರ ಬಸವ ತತ್ವ ಷಟಸ್ಥಲ್ ಧ್ವಜಾ ರೋಹಣ ನೆರವೇರಿಸಲಾಯಿತು. ಶಿವಶರಣರ ವಚನ ಗ್ರಂಥ ಶಿವಯೋಗಿ ಮುರುಘೇಂದ್ರ ಸ್ವಾಮೀಗಳ ಭಾವಚಿತ್ರ ಇಟ್ಟ ಪಲ್ಲಕ್ಕಿಯನ್ನು ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ಸಿದ್ಧಬಸವ ಕಬೀರ ಸ್ವಾಮೀಜಿ ಮಲ್ಲಿಕಾರ್ಜುನ ಸ್ವಾಮೀಜಿ ವೀರೇಶ್ವರ ದೇವರು ಶಿವಕುಮಾರ ಸವದಿ ರಾಜು ಬಿಳ್ಳೂರ ಬಾಬು ಗಲಗಲಿ ಚಂದ್ರಶೇಖರ ಯಲ್ಲಟ್ಟಿ, ಚಂದ್ರಶೇಖರ ಯಲ್ಲಟ್ಟಿ ಧರೆಪ್ಪ ಠಕ್ಕಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.