ಗದಗ 11: ಜಿಲ್ಲೆಯಲ್ಲಿ ಮೊನ್ನೆತಾನೆ 80 ವರ್ಷದ ಒಬ್ಬಳು ವೃದ್ದೆ ಮೃತಪಟ್ಟಿರುವುದರಿಂದ ಜಿಲ್ಲೆಯ ಲಕ್ಷ್ಮೇಶ್ವರ ನಗರದ ಪ್ರಮುಖ ಬೀದಿಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸುವ ಹಿನ್ನೆಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಮುಂದಿರುವ ಪ್ರಮುಖ ರಸ್ತೆಯಾದ ಸಿಗ್ಲಿ, ದೊಡ್ಡೂರ ಮಾರ್ಗದ ರಸ್ತೆ ಸಂಪೂರ್ಣವಾಗಿ ನಾಲ್ಕು ಚಕ್ರದ ವಾಹನ ಹಾಗೂ ಇತರ ಟ್ರಕ್ಗಳಿಗೆ ಅವಕಾಶ ಇಲ್ಲದಂತಾಗಿದೆ ಜನರ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಪೊಲೀಸ್ ತೆಗೆದು ಕೊಂಡಿರುವ ನಿಧರ್ಾರದಿಂದ ಜನರು ಇನ್ನು ಮುಂದೆ ಆದರೂ ಮನೆ ಬಿಟ್ಟು ಬರದೆ ಕೊರೊನಾ ಬಗ್ಗೆ ಜಾಗೃತಿ ಹೊಂದಲು ಈ ರೀತಿಯ ವ್ಯವಸ್ಥೆಯನ್ನು ನಗರದ ಪ್ರಮುಖ ರಸ್ತೆಗಳಿಗೆ ಮಾಡುವ ಉದ್ದೇಶ ಹೊಂದಿದೆ ಎಂದು ಪೋಲಿಸ ಇಲಾಖೆ ತಿಳಿಸಿದೆ.