ಲೋಕದರ್ಶನ ವರದಿ
ಯಲಬುಗರ್ಾ 20: ವಿದ್ಯಾಥರ್ಿಗಳು, ತಾವು ಬರೆದಿರುವ ಅಕ್ಷರಗಳು ತಪ್ಪಾದರೆ ಅವುಗಳನ್ನು ತಿದ್ದಿ, ತಿಡಿ, ಅವುಗಳನ್ನು ತಿದ್ದಿಕೊಳ್ಳಬಹುದು ಆದರೆ ವಿದ್ಯಾಥರ್ಿಗಳ ಬದುಕು ತಪ್ಪಾದರೆ ತಿದ್ದುವುದು ಬಲು ಕಷ್ಟದ ಕೇಲಸವಾಗಿದೆ ಆದ್ದರಿಂದ ತಮ್ಮ ಜೀವನದಲ್ಲಿ ತಪ್ಪಾಗಲಾರದಂತೆ ಜಾಗೃತಿ ವಹಿಸುವದು ಮುಖ್ಯವಾದದು ಎಂದು ಸಾಹಿತಿ ಶರಣಬಸಪ್ಪ ಕೆ. ದಾನಕೈ ಅವರು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಹೊಸಳ್ಳಿಯಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರ ಹುಟ್ಟುಹಬ್ಬದ ಅಂಗವಾಗಿ ಮತ್ತು ವಸತಿ ಶಾಲೆಯ ಮಕ್ಕಳ ಹುಟ್ಟುಹಬ್ಬದ ನಿಮಿತ್ಯವಾಗಿ ನ. 17 ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಡಿತ ಜವಾಹರಲಾಲ್ ನೆಹರು ಅವರು ಭಾರತದ ಪ್ರಥಮ ಪ್ರಧಾನಿಯಾಗಿ, ಸಾಹಿತಿಯಾಗಿ ಅಮೋಘ ಸೇವೆ ಸಲ್ಲಿಸಿ 1955 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ ಇವರ ಸಮಗ್ರ ಇತಿಹಾಸವನ್ನು ಅರಿತುಕೊಳ್ಳಬೇಕಾದರೆ ಮಕ್ಕಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಹಿತಿ ಶರಣಬಸಪ್ಪ ದಾನಕೈ ಹೇಳಿದರು.
ಶಾಲಾ ಸಂಸತ್ತಿನ ಪದಾಧಿಕಾರಿ ವಿದ್ಯಾಥರ್ಿಗಳಾದ ಕು. ಅಂಬುಜಾ ಚೂರಿ, ಸವಿತಾ ತಳವಾರ, ನೇತ್ರಾ ಚವ್ಹಾಣ, ಶಿವಲೀಲಾ ಬಳ್ಳಾರಿ, ಆತ್ಮರೂಪಿಣಿ ಜೋಗಿನ, ಅಕ್ಷತಾ ಹಳ್ಳಿ, ಅಂಬಿಕಾ ವಡ್ಡರ, ಅನ್ನಪೂರ್ಣ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರೀನ್ಸಿಪಾಲರಾದ ವಿ.ಬಿ. ಹನುಮಶೇಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ವಿವಿಧ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿತ್ತು ವೀಜೇತರೆಲ್ಲರಿಗೂ ಬಹುಮಾನಗಳನ್ನು ವಿತರಿಸಲಾಗಿತು.
ಈ ಸಮಯದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕರಾದ ದ್ಯಾಮಪ್ಪ ಪೂಜಾರ, ನರಸಿಂಹರಡ್ಡಿ ಟಿ, ಪುರುಷೋತ್ತಮ ಪೂಜಾರ, ಪ್ರವೀಣ ಕುಮಾರ ವಿ. ಫಾತೀಮಾ ಬೇಟಗೇರಿ, ಮಂಜುಳಾ ನರೇಂದ್ರ, ಶಿವಲೀಲಾ ಜಕ್ಕಲಿ, ಶಾಂತವೀರಯ್ಯ ಎನ್, ಮಲ್ಲಿಕಾಜರ್ುನ ಅಂಗಡಿ, ಎಫ್.ಡಿ.ಎ ರವೀಂದ್ರ ಎಂ ಇತರರು ಭಾಗವಹಿಸಿದ್ದರು.