ಡಾ.ರವಿ ಗುಂಜೀಕರವರಿಗೆ ಅಭಿನಂದನೆ ಕಾರ್ಯಕ್ರಮ ಗ್ರಂಥ ಬಿಡುಗಡೆ
ಗದಗ 10: ಒಬ್ಬ ನೌಕರನಾಗಿ ನೌಕರರ ನಾಡಿ ಮಿಡಿತ ಅರಿತ ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ರವಿ ಎಲ್ ಗುಂಜೀಕರ ಇವರು ಸಂಘಜೀವಿ ಹೋರಾಟಗಾರರಾಗಿರುತ್ತಾರೆ. ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾಗಿದ್ದು, 2025 ಎಪ್ರೀಲ್ 30 ರಂದು ಸೇವಾ ನಿವೃತ್ತಿಯಾಗುತ್ತಿದ್ದು, ಅವರ ಕುರಿತಾಗಿ ಅಭಿಮಾನಿ ಬಳಗದವರಿಂದ ಅಭಿನಂದನಾ ಗ್ರಂಥ ಪ್ರಕಟಿಸುವ ಉದ್ದೇಶ ಹೊಂದಲಾಗಿದೆ ಎಂದು ಹಿರಿಯ ಸಾಹಿತಿ ಐ ಕೆ ಕಮ್ಮಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿಯೊಬ್ಬ ಸರಕಾರಿ ನೌಕರರ ಜಟಿಲವಾದ ಸಮಸ್ಯೆಗಳಿಗೆ ಸ್ಪಂದಿಸಿ ಬಗೆ ಹರಿಸುತ್ತ ಬಂದಿದ್ದು, ಅವರ ಸೇವಾ ಮನೋಭಾವನೆಯಿಂದ ಉನ್ನತ ಹುದ್ದೆಗಳನ್ನ ಅಲಂಕರಿಸುತ್ತಾರೆ.ಸರಕಾರಿ ನೌಕರರ ಸುಮಾರು 70 ಇಲಾಖೆಗಳಲ್ಲಿ ಬರುವಂತಹ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಜನ ಮೆಚ್ಚುಗೆಯನ್ನ ಹೊಂದಿರುವುದಾಗಿ, ಡಾ.ರವಿ ಎಲ್ ಗುಂಜೀಕರ ಅಭಿಮಾನಿ ಬಳಗ ಸಂಘದ ಅಧ್ಯಕ್ಷರಾದ ಅರುಣಕುಮಾರ ಹಾಗೂ ಅಭಿನಂದನಾ ಗ್ರಂಥದ ಸಂಪಾದಕರಾದ ಹಿರಿಯ ಸಾಹಿತಿ ಐ ಕೆ ಕಮ್ಮಾರ ಹೇಳಿದರು.
ಸ್ನೇಹಜೀವಿಯಾಗಿ ಸರಕಾರಿ ನೌಕರರ ಬೇಕು ಬೇಡಗಳಿಗೆ ಸ್ಪಂದಿಸಿ ಹೋರಾಟ ಮಾಡುವ ಮೂಲಕ ನ್ಯಾಯ ಒದಗಿಸಿದ್ದಾರೆ. ಅವರ ಅನುಪಮ ಸೇವೆ ಮತ್ತು ಸಾಧನೆಗಳ ಹೆಜ್ಜೆಯ ಗುರುತುಗಳನ್ನು ಪ್ರಚಾರ ಪಡಿಸುವ ಸದುದ್ದೇಶದಿಂದ ಅಭಿನಂದನಾ ಗ್ರಂಥ ಹೊರ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.ಇವರು ನಿರ್ದೇಶಕರಾಗಿ, ಸಂಘಟನಾ ಕಾರ್ಯವನ್ನ 1998 ರಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಮತ್ತು 2013ರಿಂದ ಮೂರು ಅವಧಿಗಳ ಕಾಲ ಜಿಲ್ಲಾ ಅಧ್ಯಕ್ಷರಾಗಿ ಕೇಂದ್ರ ಸಂಘದ ಉಪಾಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಸಲ್ಲಿಸಿದ ಅವರ ನಿಸ್ವಾರ್ಥ ಸೇವೆ, ನೌಕರರ ಕುರಿತಾದ ಗುಂಜೀಕರ ರವರ ಹೃದಯ ಮಿಡಿತ ಅವರ ಮಾತೃ ಹೃದಯಕ್ಕೆ ಸಾಕ್ಷಿಯಾಗಿದೆ.
ನೌಕರ ಬಾಂಧವರ ಸುಖದುಖದಲ್ಲಿನ ಅವರ ಸಹಾಯ ಹಸ್ತ ಪ್ರಶಂಸನೀಯವಾಗಿದ್ದು, 2025 ಮೇ ಮೊದಲ ವಾರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ. ಈ ಅಭೂತಪೂರ್ವ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಚಿತ್ರದುರ್ಗದ ಶ್ರೀ ಮ ನಿ ಪ್ರ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಹಾಗೂ ಮಣಕವಾಡದ ಶ್ರೀ ಮ ನಿ ಪ್ರ ಅಭಿನವ ಮೃತ್ಯಂಜಯ ಮಹಾಸ್ವಾಮಿಗಳು, ಕಪೋತಗಿರಿಯ ಪರಮ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು, ಸೊರಟೂರಿನ ಪರಮ ಪೂಜ್ಯ ಶ್ರೀಗಳು ಗದಗಿನ ವಿರೇಶ್ವರ ಮಠದ ಪರಮಪೂಜ್ಯರಾದ ಕಲ್ಲಯ್ಯಜ್ಜನವರು ಉಪಸ್ಥಿತರಿರುವುದಾಗಿ ಹೇಳಿದರು.
ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಕರ್ನಾಟಕ ಸರ್ಕಾರದ ಪ್ರವಾಸೋಧ್ಯಮ ಮತ್ತು ಕಾನೂನು ಶಾಸನ ರಚನೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಕೆ ಪಾಟೀಲ, ಹಾವೇರಿ-ಗದಗ ಲೋಕಸಭಾ ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್ ವಿ ಸಂಕನೂರ, ಮಾಜಿ ಶಾಸಕರು ಹಿರಿಯ ರಾಜಕಾರಣಿ ಡಿ ಆರ್ ಪಾಟೀಲ, ರಾಜ್ಯ ಮತ್ತು ಜಿಲ್ಲಾ ಹಂತದ ಅಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ, ರಾಜ್ಯ ಘಟಕದ ಪದಾಧಿಕಾರಿಗಳು ಭಾಗವಹಿಸುವುದಾಗಿ ಅಭಿಮಾನಿ ಬಳಗದ ಅಧ್ಯಕ್ಷರಾದ ಅರುಣಕುಮಾರ ಚವ್ಹಾಣ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಡಾ.ಪ್ರಹ್ಲಾದ ಗೆಜ್ಜಿ ಮಾತನಾಡಿ ನಿಲಯ ಮೇಲ್ವಿಚಾರಕರಾಗಿ ಸೇವೆಗೆ ಪಾದಾರೆ್ಣ ಮಾಡಿ ಸುಮಾರು 40 ವರ್ಷಗಳ ಕಾಲ ಅಮೋಘ ಸೇವೆ ಸಲ್ಲಿಸಿದ ಡಾ.ರವಿ ಎಲ್ ಗುಂಜೀಕರ ರವರು 1999 ರಲ್ಲಿ ಸಂಘಕ್ಕೆ ನಿರ್ದೇಶಕರಾಗಿ ನಂತರದಲ್ಲಿ 3 ಅವಧಿಗೆ ಸರಕಾರಿ ನೌಕರ ಸಂಘದ ಗದಗ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯ ಸಂಘದಲ್ಲಿ ಉಪಾಧ್ಯಕ್ಷರಾಗಿ ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದು, ಇವರು ಸರಕಾರಿ ಸಂಘ ಮತ್ತು ಸಾಮಾಜಿಕ ಹಾಗೂ ಸಮಾಜ ಸೇವೆ ಸಲ್ಲಿಸಿದಕ್ಕೆ ಈ ಅಭಿನಂದನಾ ಕಾರ್ಯಕ್ರಮ ದೊಂದಿಗೆ ಗ್ರಂಥ ಬಿಡುಗಡೆ ಹಮ್ಮಿಕೊಂಡಿದೆ. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 60 ಜನ ಸಾಧಕರಿಗೆ ಸನ್ಮಾನ ಕಾರ್ಯವು ಜರುಗುವುದು. ಜೊತೆಗೆ 60 ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪ್ರಹ್ಲಾದ ಗೆಜ್ಜಿ ತಿಳಿಸಿದರು. ಪ್ರತಿಕಾ ಗೋಷ್ಠಿಯಲ್ಲಿ ವಿಶ್ವನಾಥ ಕಮ್ಮಾರ, ಡಾ. ಬಸವರಾಜ ಬಳ್ಳಾರಿ, ಡಾ.ಮಾರುತಿ ಹಾರೂಗೇರಿ, ಡಾ. ಆರ್ ಎಚ್ ಜಂಗಣವಾರಿ, ಮಲ್ಲಿಕಾರ್ಜುನ ಹನಸಿ, ಸಿದ್ದಲಿಂಗೇಶ್ವರ ಸಜ್ಜನಶೆಟ್ಟರ , ಡಾ. ಎಸ್ ಆರ್ ಹಿರೇಮಠ, ಎಂ ಎಂ ಹಿರೇಮಠ, ಆರ್ ಎಂ ನಿಮನಾಯ್ಕರ,ಡಾ.ಶಿವಪ್ಪ ಕುರಿ, ಮಂಜುನಾಥ ಮಾನೆ,ಭೋವಿ ಸಮಾಜದ ಗದಗ ಜಿಲ್ಲಾಧ್ಯಕ್ಷ ಎಚ್ ವಾಯ್ ಸಂದಕದ,ಕೆ ಎಫ್ ಹಳ್ಯಾಳ, ಕರೀಮಸಾಬ ಸುಣಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.