ಲೋಕದರ್ಶನವರದಿ
ಧಾರವಾಡ27 : ನಮ್ಮ ಸಂಸ್ಥೆಯ ಹಾಗೂ ಹೊಂಬೆಳಕು ಫೌಂಡೇಷನ್ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ ನೇತೃತ್ವದಲ್ಲಿ, ಹುತಾತ್ಮ ಯೋಧರ ತ್ಯಾಗ ಬಲಿದಾನಗಳ ಸ್ಮರಣಾರ್ಥವಾಗಿ, ಹೊಂಬೆಳಕು ಫೌಂಡೇಷನ್, ಸಂಕಲ್ಪ ಯುವ ವೇದಿಕೆ ಹಾಗೂ ಸಾಯಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ತಹಸೀಲ್ದಾರ ಕಛೇರಿ ರಸ್ತೆ, ಧಾರವಾಡ ಸಹಯೋಗದೊಂದಿಗೆ ರಕ್ತ ದಾನ ಶಿಬಿರವನ್ನು ಫೆ.26ರಂದು ರೋಟರಿ ರಕ್ತ ಭಂಡಾರ, ಜರ್ಮನ್ ಹಾಸ್ಪಿಟಲ್, ಧಾರವಾಡದಲ್ಲಿ ಏರ್ಪಡಿಸಲಾಗಿತ್ತು.
ಹೊಂಬೆಳಕು ಫೌಂಡೇಶನ್ ಕಾರ್ಯದಶರ್ಿಗಳಾದ ನಾಗರಾಜ ಶಿರೂರ, ಉಪನ್ಯಾಸಕರಾದ ಪ್ರೊ ವಿನಾಯಕ ರಗಟಿ, ಪ್ರೊ ಬಾಪುಸಾಬ ಮೊರಂಕರ ಹಾಗೂ ಮಂಜುನಾಥ ಹೂಗಾರ ಮತ್ತು ಕಾಲೇಜಿನ ವಿದ್ಯಾಥರ್ಿ ಕುಮಾರ ಪುನೀತ ಗೋಗಿ ಹಾಗೂ ಇತರರು ರಕ್ತದಾನ ಮಾಡಿದರು ಹಾಗೂ ಈ ಶಿಬಿರದ ಅಂಗವಾಗಿ ಫೌಂಡೇಶನ್ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ನಮ್ಮ ಕಾಲೇಜಿನ ಎಲ್ಲಾ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.