ರಕ್ತದಾನ ಮತ್ತು ಉಚಿತ ನೇತ್ರ, ಆರೋಗ್ಯ ತಪಾಸಣಾ ಶಿಬಿರ
ಧಾರವಾಡ 18 : ಹೋರಾಟಗಾರ, ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ 48 ನೇ ಜನ್ಮದಿನದ ಅಂಗವಾಗಿ ಶನಿವಾರ ರಕ್ತದಾನ ಮತ್ತು ಉಚಿತ ನೇತ್ರ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಸವರಾಜ ಕೊರವರ ಗೆಳೆಯರು ದೊಡ್ಡ ನಾಯಕನ ಕೊಪ್ಪದ ಸಂಪಿಗೆ ನಗರ ರಸ್ತೆಯಲ್ಲಿನ ಬೇಂದ್ರೆನಗರ ಕ್ರಾಸ್ ನಲ್ಲಿ ಆಯೋಜಿಸಿದ್ದ ಶಿಬಿರವನ್ನು ನವನಗರದ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಐ ಬಡ್ಡಿ ಕಣ್ಣಿನ ಸಂಸ್ಥೆಯ ವತಿಯಿಂದ ಜರುಗಿದ ಶಿಬಿರದಲ್ಲಿ 100 ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
*ಅಂಗಾಂಗ ದಾನ:* ನಂತರ 55 ಜನರು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿಬಸವರಾಜ ಕೊರವರ ಸಹಿತ 51 ಜನರು ಸ್ವಯಂ ಪ್ರೇರಣೆಯಿಂದ ಅಂಗಾಂಗ ದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ಭಾಗವಹಿಸಿದರು.ಡಾ.ಉಮೇಶ ಹಳ್ಳಿಕೇರಿ, ಡಾ.ಮಹಾಂತೇಶ ವೀರಾಪೂರ, ದಯಾನಂದ ಸಾಧನಿ, ಮನೋಜ ನಾಯಕ, ಶ್ರೀಕಾಂತ ಕುಂಬಾರ, ರೂಪಾ ಕಲ್ಲೆಕ್ಕನವರ, ಯಾಸ್ಮೀನ್ ದೊಡ್ಡಮನಿ, ಸಾಯಿ ದರ್ಶನ, ಅನಿಕೇತ ಇತರರು ಶಿಬಿರ ನಡೆಸಿಕೊಟ್ಟರು.ರಾಘವೇಂದ್ರ ಶೆಟ್ಟಿ, ವಿನಾಯಕ ಸಬಕಾಳೆ,ಹುಲಿಗೆಪ್ಪ ಶಿರಬಡಗಿ, ಪ್ರವೀಣ ತಿಬೇಲಿ ಇನ್ನಿತರರು ಶಿಬಿರದ ಯಶಸ್ವಿಗೆ ಶ್ರಮಿಸಿದರು.
*ಸಾಮಗ್ರಿ ವಿತರಣೆ:*ಬಸವರಾಜ ಕೊರವರ ಜನ್ಮದಿನದ ಅಂಗವಾಗಿ ಅಭಿಮಾನಿಗಳು ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಗ್ರಾಮದಸರಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ 1000 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಿದರು.ನವೀನ ಪ್ಯಾಟಿ, ಬಸವರಾಜ ಹೆಬ್ಬಾಳ,ರಾಕೇಶ ಇಚ್ಚಂಗಿ, ಸುಜಯ ಕೊರವರ, ಸುಶೀಲವ್ವ ಸಾಲಿ, ಈರಣ್ಣ ಭೂಮಣ್ಣವರ, ಚಂದ್ರು ಸುಣಗಾರ ಮುಂತಾದವರು ಈ ಸಂದರ್ಭದಲ್ಲಿದ್ದರು.