ರಕ್ತದಾನದಿಂದ ಆರೋಗ್ಯ ವೃದ್ಧಿ: ಡಾ. ಮಾನೆ

ಲೋಕದರ್ಶನ ವರದಿ

ಬೆಳಗಾವಿ 14: ಆರೋಗ್ಯವಂತ ವ್ಯಕ್ತಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಕ್ಯಾನ್ಸರ್, ಹೃದಯಾಘಾತ, ಪಾಶ್ರ್ವವಾಯು ಅಪಾಯದಿಂದ ದೂರವಾಗಬಹುದು ಎಂದು ಕೆಎಲ್ಇಎಸ್ನ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ. ವಿಠ್ಠಲ ಮಾನೆ ಹೇಳಿದರು.

ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ ಕೆಎಲ್ಇಎಸ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಬ್ವ ವ್ಯಕ್ತಿ ಒಂದು ಬಾರಿ ರಕ್ತದಾನ ಮಾಡಿದಾಗ ಮೂರು ಜೀವಗಳಿಗೆ ಮರುಜೀವ ನೀಡಬಹುದಾಗಿದೆ. ಜತೆಗೆ ಆರೋಗ್ಯ ವೃದ್ಧಿ ಸಾಧ್ಯವಾಗಲಿದೆ ಎಂದರು.

ಪ್ರೇಮಿಗಳ ದಿನಾಚರಣೆ ಮುನ್ನಾದಿನ ನಡೆದ ಶಿಬಿರದಲ್ಲಿ ಮಾತನಾಡದ ಪ್ರಾಚಾರ್ಯ ಡಾ. ಕೆ.ಜಿ. ವಿಶ್ವನಾಥ್, ರಕ್ತದಾನ ಮಾಡುವುದು ಸ್ಫೂತರ್ಿದಾಯಕ, ಶ್ರೇಷ್ಠ ಕರ್ತವ್ಯವಾಗಿದೆ ಎಂದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳು ಮಾಡಿದ ರಕ್ತದಾನದಿಂದ 167 ಬಾಟಲ್ ರಕ್ತ ಸಂಗ್ರಹಿಸಲಾಯಿತು. ಡಾ. ದೇವರಾಜ್ ಸಕರ್ಾರ, ಪ್ರೊ. ಲಕ್ಷ್ಮೀ ಬೃಂಗಿ, ಪ್ರೊ. ವಿರೇಶಕುಮಾರ ಮಠದ, ಪ್ರೊ. ಸಿದ್ಧಲಿಂಗಯ್ಯ ಎಂ. ಚತ್ರದಮಠ, ಪ್ರೊ. ನಾಗರಾಜ ಐಹೊಳಿ, ಪ್ರೊ. ಪಸಲಾ ನರೇಶ ಮತ್ತಿತರರು ಉಪಸ್ಥಿತರಿದ್ದರು. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಚ್. ಕುಲಕಣರ್ಿ ಸ್ವಾಗತಿಸಿದರು. ಪ್ರೊ. ಶುಭಾ ಬಾರವಾನಿ, ಡಾ. ತಮಾಲಿಕಾ ಚೌಧರಿ ನಿರೂಪಿಸಿದರು. ಪ್ರೊ. ವಿನೋದ ಎಸ್. ಪಾಟೀಲ ವಂದಿಸಿದರು.