ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಬಿಸಿಯೂಟ ನೌಕರರು ಪ್ರತಿಭಟನೆ

Bisyuta employees protest demanding salary increase

ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಬಿಸಿಯೂಟ ನೌಕರರು ಪ್ರತಿಭಟನೆ

ಹೂವಿನಹಡಗಲಿ 18 :  ಬಿಸಿಯೂಟ ನೌಕರರ ವೇತನ  ಬಜೆಟ್ ನಲ್ಲಿ ಹೆಚ್ಚಾಳ   ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಎಐಟಿಯುಸಿ)  ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರು ನಗರದಲ್ಲಿ ಶನಿವಾರ  ಪ್ರತಿಭಟನೆ ನಡೆಸಿದರು  ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯರಾದ ಹಲಗಿ ಸುರೇಶ ಮಾತನಾಡಿ. 23ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸೇರಿದಂತೆ ಅಡುಗೆ ಕೆಲಸ ಮಾಡುವ ತಯಾರಕರಿಗೆ ಕೇವಲ 3600ಮಾತ್ರ ವೇತನ ನಿಡುತ್ತಿದ್ದು. ಕೂಡಲೇಬಜೆಟ್ ನಲ್ಲಿ ವೇತನ ಹೆಚ್ಚಾಳ ಮಾಡಬೇಕು ಎಂದು ಅವರು  1972ರ ಕಾರ್ಮಿಕ ಕಾಯ್ದೆಯಂತೆ ನಿವೃತ್ತಿ ಹೊಂದುವ ಎಲ್ಲಾ ಬಿಸಿಯೂಟ ತಯಾರಕರಿಗೆ ಉಪಧನ ಗ್ರಾಚೋಟಿ ಜಾರಿಗೋಳಿಸಬೇಕೆಂದು ಆಗ್ರಹಿಸಿದರು.ಹಾಗೂ ಬಿಸಿಯೂಟ ತಯಾರಕ ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಹೆಚ್ ಅನುಸೂಯ ಮ್ಮ ಮಾತನಾಡಿದರು. ದೇವಕ್ಕ.ಹಾಲಮ್ಮ.ಸುನಾಂದ..ನೀಲಮ್ಮ. ಬಿ.ಕೊಟ್ರಮ್ಮ.ಸಂಗನಬಸಮ್ಮ.ಅಂಜಿನಮ್ಮ..ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಡಿ.ಮುಕ್ಕುಂದಗೌಡ.ರೇಣುಕಾ.ಮತ್ತು ನೂರಾರು ಮಹಿಳೆಯರು ಭಾಗವಹಿಸಿ ತಹಶೀಲ್ದಾರ್ ಇಲಾಖೆಯ ಅಧಿಕಾರಿ ಮೇಟಿ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು