ಹುಟ್ಟು ಹಬ್ಬಆಚರಣೆ ಬದುಕಿನ ಸ್ಪೂರ್ತಿದಾಯಕ ಜೀವನಕ್ಕೆ ನಾಂದಿ : ಮ್ಯಾಗೇರಿ
ಶಿಗ್ಗಾವಿ 31 :ಹುಟ್ಟು ಹಬ್ಬ ಆಚರಣೆ ಎಂದರೆ ಬದುಕಿನ ಸ್ಪೂರ್ತಿದಾಯಕ ಜೀವನಕ್ಕೆ ನಾಂದಿ ಎಂದು ನಿಕಟ ಪೂರ್ವ ವಾಯುವ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಅವರು ಹೇಳಿದರು.
ನಿಕಟ ಪೂರ್ವ ಮುಖ್ಯಮಂತ್ರಿ ಮತ್ತು ಸಂಸದ ಅಭಿವೃದ್ಧಿಯ ಹರಿಕಾರ ಬಸವರಾಜ ಬೊಮ್ಮಾಯಿ ಅವರ 65ನೇ ಹುಟ್ಟು ಹಬ್ಬವನ್ನು ನಗರದ ಮೃತ್ಯುಂಜಯ ವೃದ್ಧಾಶ್ರಮದ ವೃದ್ಧರೊಂದಿಗೆ ಸಿಹಿ ಹಾಲು ಹಣ್ಣು ವಿತರಿಸಿ ಸಿಹಿ ಕೇಕ್‌ಕಟ್ ಮಾಡುವ ಮೂಲಕ ಆಚರಿಸಿ ಮಾತನಾಡಿದ ಅವರು ಜನುಮದಿನ ನಮ್ಮೆಲ್ಲರಿಗೂ ಬದುಕಿನದಾರಿ ಮತ್ತು ಜೀವನದಗುರಿ ಕಲಿಸುತ್ತದೆ ಮುಗ್ದವ್ರದ್ದರ ಮುಖದಲ್ಲಿರುವ ಮಂದಹಾಸ ನಗು ಮತ್ತು ಅವರ ಅನುಭವದ ತೇಜಸ್ವಿನಲ್ಲಿ ನಾವು ನಿಜವಾದ ಕೈಲಾಸವನ್ನು ಕಂಡಿದ್ದೇವೆ. ಬದುಕಿನಲ್ಲಿಗುರು ಹಿರಿಯರನ್ನು ಅಂದ ಅನಾಥರನ್ನು ನಿರ್ಗತಿಗರನ್ನು ಅಸಹಾಯಕರನ್ನು ವೃದ್ದರನ್ನು ಕಂಡೊಡೆ ಗೌರವಿಸಿ ಪ್ರೀತಿಯಿಂದ ಅವರ ಮಾತು ಮತ್ತು ಅನುಭವಗಳನ್ನು ಅರಿಯಬೇಕಾಗಿದೆ ಬಸವರಾಜ ಬೊಮ್ಮಾಯಿಅವರ ಹುಟ್ಟುಹಬ್ಬಆಚರಣಿಯೊಂದಿಗೆ ಹಿರಿಯ ವೃದ್ದರಲ್ಲಿ ಇರತಕ್ಕಂತಹ ಅನುಭವದ ಬೆಳಕು ನಮ್ಮ ಬದುಕಿಗೆದಾರಿ ದೀಪವಾಯಿತು ಎಂದರು.
ಈ ಸಂದರ್ಭದಲಿ ್ಲಕೆಎಂಎಫ್ ಉಪಾಧ್ಯಕ್ಷ ಬಸನಗೌಡ್ರ ಮೇಲಿನಮನಿ ಲಿಂಬನಗೌಡ್ರ ಪಾಟೀಲ, ಪ್ರಥಮ ದರ್ಜೆಗುತ್ತಿಗೆದಾರ ಮಂಜುನಾಥಕಾರಡಗಿ, ವಿಜಯ ಕಳ್ಳಿಮನಿ, ಪ್ರಶಾಂತ್ ಬಡ್ಡಿ, ಮುತ್ತುಎಲಿಗಾರ, ಮಂಜುನಾಥ್ ಮಿರ್ಜಿ, ಮಾದೇವ ಹಡಪದ, ಪಕ್ಕೀರಗೌಡ್ರ ಪಾಟೀಲ, ಸಂತೋಷದೊಡ್ಡಮನಿ, ಕೃಷ್ಣ ಬಂಡಿವಡ್ಡರ, ಸಂತೋಷ್‌ಕಟ್ಟಿಮನಿ ಸೇರಿದಂತೆಇನ್ನೂ ಅನೇಕ ಮುಖಂಡರು ಪದಾಧಿಕಾರಿಗಳು ಅಭಿಮಾನಿಗಳು ಉಪಸ್ಥಿತರಿದ್ದರು.