ಹುಟ್ಟು ಹಬ್ಬ ಆಚರಣೆ: ಸಂಗನಕಲ್ಲು ಬಾಷಾ ಮಕ್ಕಳಿಗೆ ಶಾಲಾ ಸಾಮಗ್ರಿ ಹಂಚಿಕೆ

Birthday celebration: Distribution of school supplies to children of Sanganakallu Basha

ಹುಟ್ಟು ಹಬ್ಬ ಆಚರಣೆ: ಸಂಗನಕಲ್ಲು ಬಾಷಾ ಮಕ್ಕಳಿಗೆ ಶಾಲಾ ಸಾಮಗ್ರಿ ಹಂಚಿಕೆ

ಬಳ್ಳಾರಿ : ಆಪ್ತಮಿತ್ರ ಎಂದೇ ಚಿರಪರಿಚಿತರಾಗಿರುವ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಸಂಗನಕಲ್ಲು ಬಾಷಾ ಅವರು ತಮ್ಮ ಹುಟ್ಟು ಹಬ್ಬವನ್ನು ಶಾಲಾ ಮಕ್ಕಳೊಂದಿಗೆ ಆಚರಿಸಿಕೊಂಡರು. ಗ್ರಾಮದ ರವೀಂದ್ರನಾಥ್ ಕೇಟಿ ಇಂಟರ್ನ್ಯಾಷನಲ್ ಶಾಲೆ, ಸಿಂದವಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಹುಟ್ಟುಹಬ್ಬದ ನೆಪದಲ್ಲಿ ಪರೀಕ್ಷಾ ಅಟ್ಟೆ, ಪುಸ್ತಕಗಳು, ಪೆನ್ಸಿಲ್ ಕಿಟ್, ಹಾಗೂ ಸಿಹಿ ಹಂಚುವ ಮೂಲಕ ಆಚರಿಸಿಕೊಂಡರು.  

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ರಾಮೇಶ್ವರ​‍್ಪ,  ಕನ್ನಡ ಗೆಳೆಯರ ಬಳಗ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಪ್ಗಲ್ ಚಂದ್ರಶೇಖರ್ ಆಚಾರ್,  ಅಪ್ಪು ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ  ಜೆಪಿ ಮಂಜುನಾಥ್, ಅಪ್ಪು ಸೇವಾ ಸಮಿತಿ ಜಿಲ್ಲಾಧ್ಯಕ್ಷ ರವಿ, ಶರಣ, ಡಾ. ವಿಷ್ಣು ಸೇನಾ ಸಮಿತಿ ಜಿಲ್ಲಾ ಉಪಾಧ್ಯಕ್ಷ, ಆಪ್ತರಕ್ಷಕ ಉದಯ್ ಕುಮಾರ್, ಮೇಘ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಸಂಘದ ಸಂಗನಕಲ್  ಬಿ,ನಾಗರಾಜು, ರವೀಂದ್ರನಾಥ್ ಕೆಟಿ ಇಂಟರ್ನ್ಯಾಷನಲ್ ಮುಖ್ಯಗುರು ಮಧು, ಶಿಕ್ಷಕರುಗಳು ಗಣರಾಜ್ಯೋತ್ಸವದ ಈ ಶುಭದಿನದಂದು ಆಪ್ತಮಿತ್ರ ಬಾಷಾ ಅವರಿಗೆ ಅಭಿನಂದನೆ ಸಲ್ಲಿಸಿದರು.