‘ದೇವರ ದಾಸಿಮಯ್ಯ’ ನವರ ಜಯಂತಿ

Birth anniversary of 'Devara Dasimayya'

‘ದೇವರ ದಾಸಿಮಯ್ಯ’ ನವರ ಜಯಂತಿ  

ಬ್ಯಾಡಗಿ  05; ಶಿವನೆ  ಜಗತ್ತನ್ನೇ ವ್ಯಾಪಿಸಿಕೊಂಡಂತೆ, ಜಗತ್ತೇ ಶಿವನ ರೂಪ ಎಂಬ ನಿಲುವಿನೊಂದಿಗೆ, “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನವಯ್ಯ ಎಂದೆನ್ನುವ ದಾಸಿಮಯ್ಯನಲ್ಲಿ ಈ ಲೋಕವನ್ನು ನೋಡುವ ಕ್ರಮ ಹೊಸತನದಿಂದ ಕೂಡಿದೆ. ಅವರ ವಚನಗಳು ಇಂದಿಗೂ ಪ್ರಸ್ತುತ ಎಂದು ಗ್ರೇಡ್ 2 ತಹಶೀಲ್ದಾರ ಮಂಜುಳಾ ನಾಯಕ  ಹೇಳಿದರು.ಅವರು ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡ ‘ದೇವರ ದಾಸಿಮಯ್ಯ’ ನವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.ಕಾಯಕತತ್ವ ಪ್ರಚುರಪಡಿಸಿದ ಹನ್ನೆರಡನೇ ಶತಮಾನದ ಶರಣರು ಸಾಮಾಜಿಕ ಪಿಡುಗು ತೊಲಗಿಸಲು ಶ್ರಮಿಸಿದರು. ವಚನಕಾರ ದೇವರದಾಸಿಮಯ್ಯ ತಮ್ಮ ವೈಚಾರಿಕ ನಿಲುವಿನೊಂದಿಗೆ ಎಲ್ಲರ ಗಮನ ಸೆಳೆಯುತ್ತಿದ್ದರು ಎಂದರುಈ ಸಂದರ್ಭದಲ್ಲಿ  ವಸಂತ ಕುಂಚುರ.ಬಿ.ಆರೊ.ಹೊತ್ತಿಗೌಡರ.ಡಾ.ಎಸ್ ಜಿ ಮುದ್ದಣ್ಣನವರ.ಬಿ.ಎಸ್‌.ಮಾಳಗಿ.ನಾರಾಯಣ ಮಾಗಳದ.ಎ.ಎಸ್ ಜನಿವಾರದ.ಪಿ.ಟಿ.ಲಕ್ಕಣ್ಣನವರ.ಸಸಮಾಜದ ಭಾಂದವರು ತಾಲ್ಲೂಕಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು