ಮತದಾರ ಜಾಗೃತಿಗಾಗಿ ಶಿಕ್ಷಕರಿಂದ ಬೈಕ್ ರ್ಯಾಲಿ

ಧಾರವಾಡ 12: ಧಾರವಾಡ ಶಹರ  ಹಾಗೂ ಗ್ರಾಮೀಣ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಂದ ಇಂದು ಸಂಜೆ ಬೈಕ್ ರ್ಯಾಲಿ ಮೂಲಕ ಮತದಾರ ಜಾಗೃತಿ ಮೂಡಿಸಲಾಯಿತು.

ಡಾ.ಮಲ್ಲಿಕಾಜರ್ುನ ಮನಸೂರ ಕಲಾಭವನದ ಆವರಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಬಿ.ಸಿ.ಸತೀಶ ಅವರು ಶಿಕ್ಷಕರೊಂದಿಗೆ ಬೈಕ್ ಚಲಾಯಿಸಿ, ರ್ಯಾಲಿಯಲ್ಲಿ ಪಾಲ್ಗೊಂಡರು.

  ರ್ಯಾಲಿಯು ಸುಭಾಷ ರಸ್ತೆ ಮಾಕರ್ೇಟ್, ಹಳೇ ಡಿ.ಎಸ್.ಪಿ.ವೃತ್ತ, ಸಪ್ತಾಪೂರ ಬಾವಿ,  ಕನರ್ಾಟಕ ಕಾಲೇಜು, ಪ್ರಧಾನ ಅಂಚೆ ಕಚೇರಿ, ಕೋರ್ಟ ವೃತ್ತದ ಮೂಲಕ ಕಲಾಭವನಕ್ಕೆ ಬಂದು ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ.ಖಾಜಿ, ವಿದ್ಯಾ ನಾಡಿಗೇರ, ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಂ. ಶೇಖ್, ಜಿ.ಎನ್. ನಂದನ್ ಹಾಗೂ ಇತರರು ಪಾಲ್ಗೊಂಡಿದ್ದರು. ಕಲಾ ತಂಡದ ಸದಸ್ಯರುಗಳಾದ ಎಫ್.ಬಿ. ಕಣವಿ, ಸಿ.ಎಂ. ಕೆಂಗಾರ, ಭಾರತಿ ಮನ್ನಿಕೇರಿ, ವ್ಹಿ.ಎನ್. ಕೀತರ್ಿವತಿ, ಜೆ.ಎಂ. ಗಾಮನಗಟ್ಟಿ, ಬಿ.ಎನ್. ಗೊರವರ, ಜಿ.ಟಿ. ದೊಡಮನಿ, ಎಂ.ಆರ್. ಪಾಲ್ತಿ, ಪ್ರಮಿಳಾ ಜಕ್ಕಣ್ಣವರ, ಮಂಜುನಾಥ ಮದ್ನೂರ ಹಾಗೂ ಡಾ. ರಾಮು ಮೂಲಗಿ ಜಾನಪದ ಗೀತೆಗಳ ಮೂಲಕ ಮತದಾನ ಜಾಗೃತಿ ಮಾಡಿದರು.

ಸುಮಾರು 250ಕ್ಕೂ ಹೆಚ್ಚು ಬೈಕ್ಗಳ ಮೂಲಕ ಶಿಕ್ಷಕರು ಸಂಚರಿಸಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಿದರು.