ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಧ್ಯಕ್ಷ ಎನ್‌.ತಿಪ್ಪೇಸ್ವಾಮಿ ಅವರಿಂದ ಭೂಮಿ ಪೂಜೆ

Bhoomi Puja by President N. Thippeswamy for various development works

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಧ್ಯಕ್ಷ ಎನ್‌.ತಿಪ್ಪೇಸ್ವಾಮಿ ಅವರಿಂದ ಭೂಮಿ ಪೂಜೆ 

ಬಳ್ಳಾರಿ 03: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎನ್‌.ತಿಪ್ಪೇಸ್ವಾಮಿ ಅವರು ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಯ ಮುಂಭಾಗ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಾಹಕರ ಮಧ್ಯಸ್ಥಿಕೆ ಕೇಂದ್ರ ಮತ್ತು ಕಚೇರಿಯ ಮೊದಲನೇ ಮಹಡಿ ಕಟ್ಟಡ ನಿರ್ಮಾಣ ಸೇರಿದಂತೆ ಒಟ್ಟು ರೂ.53.82 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. 

ಈ ವೇಳೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಶಶಿಕಲಾ ಮಾರ್ಲಾ, ಹಿರಿಯ ವಕೀಲರಾದ ಹೆಚ್‌.ಎಂ.ಅಂಕಲಯ್ಯ, ಬಿ.ವೆಂಕಟೇಶ್ವರ ಪ್ರಸಾದ್, ಮಲ್ಲಿಕಾರ್ಜುನ, ಪಿ.ಸತ್ಯ ನಾರಾಯಣ ಸೇರಿದಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಭೂಸೇನಾ ನಿಗಮದ ಸಿಬ್ಬಂದಿಗಳು ಇದ್ದರು.