ಬೈಲಹೊಂಗಲದಲ್ಲಿ ಭಗವಾನ ಮಹಾವೀರರ 2617 ನೇ ಜನ್ಮ ಕಲ್ಯಾಣಕ ಸಮಾರಂಭ

ಬೈಲಹೊಂಗಲ 18: ಭಗವಾನ ಮಹಾವೀರರ ಸಂದೇಶ ವಿಶ್ವಕ್ಕೆ ಮಾದರಿಯಾಗಿದ್ದು ಅವರ ಪಾಲನೆಗಳು ಪ್ರತಿಯೊಬ್ಬರಲ್ಲೂ ಮೂಡಬೇಕೆಂದು ಹುಕ್ಕೇರಿಯ ಸಾರಾಪೂರದ ಸಕರ್ಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಸಹ ಶಿಕ್ಷಕ ಬಾಹುಬಲಿ ಹಂದೂರ ಹೇಳಿದರು. 

   ಅವರು ಪಟ್ಟಣದ ಜವಳಿಕೂಟದ ಮಲ್ಲಿಕಾಜರ್ುನ ಕಲ್ಯಾಣ ಮಂಟಪದಲ್ಲಿ ಬುಧವಾರ ಮಹಾವೀರ ಯುವಕ ಸಂಘದ ಆಶ್ರಯದಲ್ಲಿ ಆಯೋಜಿಸಿದ ಭಗವಾನ ಮಹಾವೀರರ 2617 ನೇ ಜನ್ಮ ಕಲ್ಯಾಣಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಐತಿಹಾಸಿಕ ಮಹಾಪುರುಷರಾದ ಭಗವಾನ ಮಹಾವೀರರು ವ್ಯಕ್ತಿ ಹಾಗೂ ವಿಚಾರ ಸ್ವಾತಂತ್ಯ್ರೆಕ್ಕೆ ಧಾಮರ್ಿಕ ತಳಹದಿ ಹಾಕಿ ಸಮಾನತೆಯ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಅಹಿಂಸಾ ತತ್ವ ಭೋದಿಸಿದ ಅವರ ನಡೆ-ನುಡಿಯನ್ನು ಯುವಕರು ಮೈಗೊಡಿಸಿಕೊಂಡು ಸಾಗಬೇಕಲ್ಲದೆ ಜ್ಞಾನವು ಜೀವನದ ಸರ್ವಸ್ವವಾಗಬೇಕಾಗಿದೆ ಎಂದರು. 

    ಸಭೆಯ ಅಧ್ಯಕ್ಷತೆ ವಹಿಸಿದ ಬೆಳವಡಿಯ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆಯ ಉಪಾಧ್ಯಕ್ಷ ಪಾರೀಸಪ್ಪ ಭಾವಿ ಮಾತನಾಡಿ, ಜೈನ್ ಧರ್ಮದ ಅನುಯಾಯಿಗಳು ಸಾತ್ವಿಕತೆಯ ಪ್ರತಿಬಿಂಬವಾಗಿದ್ದು ಸಕರ್ಾರದಿಂದ ಈ ಸಮಾಜಕ್ಕೆ ಹೆಚ್ಚೆಚ್ಚು ಪ್ರಯೋಜನಗಳು ಸಿಗಬೇಕಾಗಿವೆ. ಸಮಗ್ರ ಜಗದ ನೆಮ್ಮದಿಯನ್ನು ಬಯಸುವ ಈ ಧರ್ಮದಲ್ಲಿ 24 ತೀರ್ಥಂಕರರು ಆಗಿ ಹೋಗಿದ್ದು 24 ಘಂಟೆಯ ಸಮಯದ ಪಾಲನೆಯನ್ನು ಇದು ತಿಳಿಸುತ್ತದೆ. ಆದ್ದರಿಂದ ಮನುಷ್ಯ ತತ್ವಾಧಾರಿತ ಬದುಕು ಸಾಗಿಸಬೇಕೆಂದರು. 

   ಮಹಾವೀರ ಯುವಕ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಅನೂಪ ಇಂಚಲ, ಉಪಾಧ್ಯಕ್ಷ ಡಾ.ಸುರೇಂದ್ರ ಕಲಘಟಗಿ, ಲಾಲಚಂದ ಗೂಗಡ, ಜಿ.ಪಂ.ಸದಸ್ಯ ಅನೀಲ ಮೇಕಲಮಡರ್ಿ,  ಪ್ರದಾನ ಕಾರ್ಯದಶರ್ಿ ಬಸವರಾಜ ದೋತ್ರದ, ಸಂಚಾಲಕ ಸುದರ್ಶನ ಉಪಾಧ್ಯ, ಖಂಜಾಂಚಿ ಅಜೀತ ರಾಜಣ್ಣವರ, ಸದಸ್ಯರಾದ ದೀರಜ ರಾವನವರ, ವಿನೋದ ಹಣ್ಣಕೇರಿ, ಪ್ರವೀಣ ರಂಗೊಳ್ಳಿ, ಅಜೀತ್ ಮುತ್ತೆಣ್ಣವರ, ಬಾಹುಬಲಿ ಬೋಗಾರ, ಶ್ರೈಣಿಕ ಬಸ್ತವಾಡ, ಬಾಹುಬಲಿ ಹಣಬರಹಟ್ಟಿ, ಧನರಾಜ ಭಂಡಾರಿ, ಸಹಜಾನಂದ ಬೋಗಾರ ಇದ್ದರು.

   ರಾಜು ಹಣಬರಹಟ್ಟಿ ಸ್ವಾಗತಿಸಿದರು. ಮಂಜುಳಾ ದೋತ್ರದ ನಿರೂಪಿಸಿದರು. ಸುವರ್ಣ ಉಪಾಧ್ಯ ವಂದಿಸಿದರು. 

      ಅಧಿಕ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಮುಂಜಾನೆ ಶ್ರೀ ಮಹಾವೀರರ ಭಾವಚಿತ್ರಕ್ಕೆ ವಿಶೇಷ ಪೂಜೆ, ಪ್ರಾರ್ಥನೆ, ಅಭಿಷೇಕ, ಅಷ್ಟಕಾ ಪೂಜೆ, ಸಹಸ್ರ ನಾಮಾವಳಿಯನ್ನು ಅರ್ಚಕ ಶಾಂತಿನಾಥ ಉಪಾಧ್ಯ ನೆರವೇರಿಸಿಕೊಟ್ಟರು. ಪುರಸಭೆಯಿಂದ ಜವಳಿಕೂಟದ ಶ್ರೀ ಮಲ್ಲಿಕಾಜರ್ುನ ಕಲ್ಯಾಣ ಮಂಟಪದವರೆಗೆ ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆಯು ಪಟ್ಟಣದ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ನಂತರ ಅನ್ನ ಪ್ರಸಾದ ಜರುಗಿತು.