ಮುನವಳ್ಳಿ 23: ಮಾನವ ಹುಟ್ಟಿದ್ದು ಸಾಯಲಿಕ್ಕೆ, ಸತ್ತಿದ್ದು ಹುಟ್ಟಲಿಕ್ಕೆ ಈ ಭವ ಬಂಧನ ತಪ್ಪಿಸಲು ಫಲಾಪೇಕ್ಷೆ ಇಲ್ಲದ ಸೇವೆ ಹಾಗೂ ಅಗೋಚರ ಶಕ್ತಿಯ ಕುರಿತು ಚಿಂತನ ಮಾಡುವುದು ಅವಶ್ಯವಾಗಿದೆ. ಜಗತ್ತಿನಲ್ಲಿ ಹೆಚ್ಚೆಚ್ಚು ಪ್ರಕಟಣೆ ಕಾಣುತ್ತಿರುವ ಧರ್ಮ ಗ್ರಂಥಗಳು ಧರ್ಮ ಪ್ರಸಾರಕ್ಕಾಗಿ ಪ್ರಕಟಿಸಿದರೆ ಭಗವದ್ಗೀತೆಯನ್ನು ಜೀವನದ ಮರ್ಮವನ್ನು ಅರಿಯಲು ಪ್ರಕಟಣೆ ಮಾಡಲಾಗುತ್ತದೆ ಎಂದು ಶಿಂದೋಗಿ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಸೋಮಶೇಖರ ಮಠದ ಸಭಾಭವನದಲ್ಲಿ ಜರುಗಿದ ಭಗವದ್ಗೀತಾ ಜಯಂತಿ ಉತ್ಸವದ 19ನೇ ವಾಷರ್ಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಪ್ರವಚನಕಾರಾಗಿ ಆಗಮಿಸಿದ ಸವದತ್ತಿಯ ದಂಡಪಾಣಿ ದೀಕ್ಷಿತ ಸ್ವಾಮೀಜಿ ಮಾತನಾಡುತ್ತ ಮಾನವ ಜನ್ಮ ಸಾರ್ಥಕವಾಗಲು ಗುರುಕಾರುಣ್ಯವಾಗಬೇಕು. ಅಹಂ ತೊರೆದಾಗ ಮಾತ್ರ ನಮ್ಮನ್ನು ನಾವು ಅರಿತುಕೊಳ್ಳಬಹುದು ಎಂದರು.
ದಿವ್ಯ ಸಾನಿಧ್ಯ ವಹಿಸಿದ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿ ಪರಿಹಾರ ಸಿಗುತ್ತದೆ. ಮಾನವ ಸಂಸ್ಕಾರದಿಂದ ಸಂಸ್ಕೃತಿ, ಸಂಸ್ಕೃತಿಯಿಂದ ಧರ್ಮ ಮಾರ್ಗದಲ್ಲೂ ನಡೆಯಲು ಸಾಧ್ಯವಿದೆ ಎಂದರು. ಬಸಯ್ಯ ಅಷ್ಟಗಿಮಠ ಅಧ್ಯಕ್ಷತೆ ವಹಿಸಿದ್ದರು.
ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೀರಯ್ಯಾ ಶಾಸ್ತ್ರಿಗಳು ಸನ್ಮಾನ ಸ್ವೀಕರಿಸಿ ಮಾತನಾಡುತ್ತ ದೇವರಲ್ಲಿ ನಾವು ನಮ್ಮ ಗುರಿಯ ಬಗ್ಗೆ ಸಂಕಲ್ಪ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಭಗವದ್ಗೀತಾ ಕಂಠಪಾಠ ಸ್ಪಧರ್ೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿ.ಎಸ್.ಯಕ್ಕುಂಡಿ, ಪ್ರಾಯೋಜಕತ್ವ ವಹಿಸಿದ ಬಸವರಾಜ ಬಡಿಗೇರ (ಶಹಾಪೂರ), ಭಗವದ್ಗೀತಾ ಜಯಂತಿ ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.