ಕಾಗವಾಡ 29: ನನ್ನ ಮಗಳಿಗೆ ಭಾರತ ಸಕರ್ಾರದ "ಬೇಟಿ ಬಚಾವೊ, ಬೇಟಿ ಪಡಾವೊ" ಈ ಯೋಜನೆಯಡಿಯಲ್ಲಿ 2 ಲಕ್ಷ ರೂ. ದೊರೆಯುತ್ತಿದೆ. ಇದನ್ನು ಯಾರೋಬ್ಬ ಅಜರ್ಿ ಸೃಷ್ಠಿಸಿದ್ದು, ಅನೇಕ ಮಹಿಳೆಯರು ತನ್ನ ಮಗಳಿಗಾಗಿ ಇಡಿ ದಿನ ಪೋಸ್ಟ್ ಎದುರು ನಿಂತು ದಿಲ್ಲಿ ಸಕರ್ಾರಕ್ಕೆ ಅಜರ್ಿ ಸಲ್ಲಿಸಲು ಮುಂದಾಗಿದ್ದಾರೆ. ಇದನ್ನು ಕಂಡು ಕಾಗವಾಡ ತಾಲೂಕಾ ಮಟ್ಟದ ಬಿಜೆಪಿ ಪಕ್ಷದ ಕಾರ್ಯದಶರ್ಿ ಅನೀಲ ನಾವಿಲಗೇರ ಸಮೇತ ಕಾರ್ಯಕರ್ತರು ಮೊಸ ಹೋಗುತ್ತಿರುವ ಮಹಿಳಾ ಕುಟುಂಬಗಳಿಗೆ ಮಾಹಿತಿ ನೀಡಿ ಎಚ್ಚರಿಕೆ ಮೂಡಿಸಿದರು.
ಶನಿವಾರ ರಂದು ಉಗಾರ ಖುರ್ದ ಕೇಂದ್ರ ಅಂಚೆ ಕಚೇರಿಗೆ ಆಗಮಿಸಿ ಅನೇಕ ಮಹಿಳೆಯರು "ಬೇಟಿ ಬಚಾವೊ, ಬೇಟಿ ಪಡಾವೊ" ಅಜರ್ಿಗಳನ್ನು ಸ್ಪೀಡ್ಪೊಸ್ಟ್ ಮುಖಾಂತರ ಹೊಸ ದೆಹಲಿಯ ಬಾಲ ವಿಕಾಸ ಮಂತ್ರಾಲಯಕ್ಕೆ ಸಲ್ಲಿಸುತ್ತಿರುವದನ್ನು ಕಂಡು ಬಂತು.
ಕೇಂದ್ರ ಸಕರ್ಾರ "ಬೇಟಿ ಬಚಾವೊ, ಬೇಟಿ ಪಡಾವೊ" ಈ ಯೋಜನೆ ಜಾರಿಗೆಯಿದೆ. ಆದರೆ, 8 ರಿಂದ 32 ವರ್ಷದ ಬಾಲಿಕೆಯರಿಗೆ, ಯುವತಿಯರಿಗೆ 2 ಲಕ್ಷ ರೂ. ಅವರ ಖಾತೆಗೆ ಜಮಾಮಾಡಲಾಗುವು ಎಂದು ಎಲ್ಲಿಯೂ ಘೋಷಣೆ ಮಾಡಿಲ್ಲಾ. ಅಥವಾ ಹೇಳಿಕೆ ನೀಡಿಲ್ಲಾ. ಆದರೂ, ಕೆಲ ಸಮಾಜ ಕಂಟಕರು ಸುಳ್ಳು ಅಜರ್ಿಗಳು ಸೃಷ್ಠಿಸಿ ಪೊಸ್ಟ್ ಇಲಾಖೆಯಿಂದ ಕೇಂದ್ರ ಸಕರ್ಾರಕ್ಕೆ ಅಜರ್ಿ ಸಲ್ಲಿಸಲು ಹೇಳಿದ್ದಾರೆ.
ಒಬ್ಬರ ಬಾಯಿಂದ ಇನ್ನೊಬ್ಬರು ಕೇಳಿಕೊಂಡು ಉಗಾರ, ಉಗಾರ ಬುದ್ರುಕ, ಕುಸನಾಳ, ಮೊಳವಾಡ, ಶೇಡಬಾಳ, ಕಾಗವಾಡ, ಮಂಗಸೂಳಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿಯ ದಿನನಿತ್ಯ ಕುಲಿಮಾಡುವ ಮಹಿಳೆಯರು ತಮ್ಮ ಮಕ್ಕಳಿಗೆ ಸಕರ್ಾರದಿಂದ 2 ಲಕ್ಷ ರೂ. ಹಣ ಲಭ್ಯವಾಗಲಿವೆ. ಈ ಆಸೆಯಿಂದ ಶಾಲೆಯಲ್ಲಿ ಓದುತ್ತಿರುವ, ಓದಿದನ್ನು ಬಿಟ್ಟಿರುವ ಬಾಲಿಕೆಯ ಕುಟುಂಬದವರು ಶಾಲೆಯಿಂದ ಬೋನಾಫೈಡ್ ದಾಖಲೆ ತೆಗೆದುಕೊಂಡು ಅಲ್ಲಿಗೆ ಹಣ ನೀಡಿದ ನಂತರ ಅಜರ್ಿ, ಅದರ ಜತೆಗೆ ಇನ್ನೂಳಿದ ದಾಖಲೆಗಳು ಝೆರಾಕ್ಸ್ ಪ್ರತಿಗಳು ಲಗತಿಸಿ ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ, ಚುನಾಯಿತ ಸದಸ್ಯರ ಸಹಿ ತೆಗೆದುಕೊಂಡು ಅಂಚೆ ಕಚೇರಿಯಲ್ಲಿ 50 ರೂ. ವೆಚ್ಚಮಾಡಿ ಸ್ಪೀಡ್ಪೋಸ್ಟ್ ಮುಖಾಂತರ ಅಜರ್ಿಗಳು ಸಲ್ಲಿಸುತ್ತಿದ್ದಾರೆ.
ದಿನನಿತ್ಯ ಕೂಲಿ ಮಾಡುವ ಮಹಿಳೆಯರು ದಾಖಲೆ ಸಂಗ್ರಹಿಸಲು 2-3 ದಿನ ಕೂಲಿ ತಪ್ಪಿಸಿ ದಾಖಲೆಗಳು ಸಂಗ್ರಹಿಸಿ ಅಜರ್ಿ ಸಲ್ಲಿಸಲು ಅಂಚೆ ಕಚೇರಿಗಳ ಮುಂದೆ ನಾಲ್ಕಾರು ಗಂಟೆಗಳು ಕಾಯ್ದು ಪೋಸ್ಟ್ ಮಾಡುತ್ತಿದ್ದಾರೆ. ದಿನನಿತ್ಯ ಅಂಚೆ ಕಚೇರಿಗಳಲ್ಲಿ ಸುಮಾರು 300 ಸ್ಪೀಡ್ಪೋಸ್ಟ್ ಅಜರ್ಿ ಸಲ್ಲಿಸುತ್ತಿದ್ದಾರೆ. ಅಂಚೆ ಕಚೇರಿಗಳಲ್ಲಿ ಕಳೆದ ಅನೇಕ ದಿನಗಳಿಂದ ಯಾವುದೇ ಟಪಾಲಗಳು ಕಳುಹಿಸುತ್ತಿಲ್ಲಾ. ಆದರೆ, ಕಳೇದ ಕೆಲ ದಿನಗಳಿಂದ ಕಾಲ ಬದಲಾಗಿದೆ. ಮೊಸ ಹೋಗುತ್ತಿರುವ ಮುಗ್ಧ ಮಹಿಳೆಯರಿಗೆ ಮಾಹಿತಿ ನೀಡಿ ಎಚ್ಚರಿಕೆ ನೀಡುವ ಪ್ರಯತ್ನ ಯುವಕರು ಮಾಡಿದರು.
ಬಿಜೆಪಿ ಪಕ್ಷದ ಜನರನ್ ಸೆಕ್ರೆಟ್ರಿ ಅನೀಲ ನಾವಿಲಗೇರ, ಯೊಗೇಶ ಕುಂಬಾರ, ಕರವೇ ಕಾರ್ಯಕರ್ತರಾದ ರಾಜೇಶ ದಾನೋಳಿ, ರಾಘವೇಂದ್ರ ಜಾಯಗೊಂಡೆ, ಅರುಣ ಜಾಯಗೊಂಡೆ, ಸೇರಿದಂತೆ ಅನೇಕ ಯುವಕರು ಅಂಚಿ ಕಚೇರಿಗಳ ಮುಂದೆ ನಿಂತು ಮಾಹಿತಿ ನೀಡಿದರು. ಅಂಚಿ ಕಚೇರಿಯ ಅಧಿಕಾರಿಗಳಿಗೆ ಜನರಿಗೆ ಒಳ್ಳೆ ಮಾಹಿತಿ ನೀಡಿ ಇಂತಹ ಟಪಾಲಗಳನ್ನು ತೆಗೆದುಕೊಳ್ಳಬೇಡಿ ಎಂದು ವಿನಂತಿಸಿದರು.