ಡಿ.21 ರಂದು ಬೆಟಗೇರಿ ಮಾರುತಿ ದೇವರ ಕಾರ್ತಿಕೋತ್ಸವ
ಬೆಟಗೇರಿ 19 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಿ.21 ರಂದು ನಡೆಯಲಿವೆ.
ಡಿ.21 ರಂದು ಬೆಳಿಗ್ಗೆ 7ಗಂಟೆಗೆ ಇಲ್ಲಿಯ ಮಾರುತಿ ದೇವರ ಗದ್ದುಗೆಗೆ ಮಹಾಭಿಷೇಕ ಮಹಾಪೂಜೆ, ಎಲೆ ಪೂಜೆ ಕಾರ್ಯಕ್ರಮ, ಪುರ ಜನರಿಂದ ಪೂಜೆ, ನೈವೇದ್ಯ ಸಮರೆ್ಣ, ಸಾಯಂಕಾಲ 6ಗಂಟೆಗೆ ಸ್ಥಳೀಯ ಕರಡಿ ಮಜಲು ಮೇಳ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಾಯಿ ಹಾರಿಸುವದು, ಸಿಹಿ ಹಂಚುವದು, ಕಾರ್ತಿಕ ದೀಪೋತ್ಸವ, ಮದ್ದು ಹಾರಿಸುವದು, ರಾತ್ರಿ 9 ಗಂಟೆಗೆ ಬಿಲಕುಂದಿ ವಿ.ಬಿ.ಮೆಲೋಡಿಸ್ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆದ ಬಳಿಕ ಪ್ರಸಕ್ತ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮ ಸಮಾರೊಪಗೊಳ್ಳಲಿದೆ.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳ ಸಾನಿಧ್ಯ ವಹಿಸಲಿದ್ದಾರೆ. ಗಣ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಮಾರುತಿ ದೇವರ ಭಕ್ತರು ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಮಾರುತಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.