ರೈತ ಮುಪ್ಪಿನಾರ್ಯ ದುಳೆಹೊಳಿಗೆ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ
ಹಾವೇರಿ 30 : ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಇತ್ತೀಚೆಗೆ ಜರುಗಿದ 'ತೋಟಗಾರಿಕೆ ಮೇಳ-2024” ರಲ್ಲಿ 2024-25 ನೇ ಸಾಲಿನ ಹಾವೇರಿ ಜಿಲ್ಲೆಯ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿಯನ್ನು ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ಪ್ರಗತಿ ಪರ ರೈತ ಮುಪ್ಪಿನಾರ್ಯ ಮುದ್ಲಿಂಗಪ್ಪ ದುಳೆಹೊಳಿ ಅವರಿಗೆ ನೀಡಿ ಗೌರವಿಸಲಾಗಿದೆ.
ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಪಡೆದ ಮುಪ್ಪಿನಾರ್ಯ ಮುದ್ಲಿಂಗಪ್ಪ ದುಳೆಹೊಳಿಯವರು ಕೃಷಿ/ತೋಟಗಾರಿಕೆಯಲ್ಲಿ ತಂತ್ರಜ್ಞಾನ ಹಾಗೂ ತಾಂತ್ರಿಕತೆಗಳ ವಿಶೇಷತೆಗಳನ್ನು ಅಳವಡಿಸಿಕೊಂಡು ಉತ್ತಮ ತಳಿಯ ಟೊಮ್ಯಾಟೊ, ಹಾಗಲಕಾಯಿ, ಬದನೆಕಾಯಿ ಇತ್ಯಾದಿ ತರಕಾರಿಗಳನ್ನು ಸುಧಾರಿತ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಬೆಳೆದು, ವರ್ಗಿಕರಣ ಮಾಡಿ ಸ್ಥಳಿಯ ಹಾಗೂ ನಗರ ಮಾರುಕಟ್ಟೆ (ಒಠಜ, ಖಜಟಚಿಟಿಛಿಜ) ಗಳಿಗೆ ನೇರವಾಗಿ ಮಾರಾಟ ಮಾಡುವ ಮೂಲಕ ಮಧ್ಯವರ್ತಿಗಳಿಂದ ಆಗುವ ನಷ್ಟವನ್ನು ತಡೆದು ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ.ತೋಟಗಾರಿಕೆ ಬೆಳೆಗಳೊಂದಿಗೆ ಉಪಕಸುಬಾಗಿ ವೈಜ್ಞಾನಿಕ ಟೊಮ್ಯಾಟೊ ಹಾಗೂ ಹಾಗಲಕಾಯಿ ಬೆಳೆಗಳ ಬೀಜೋತ್ಪಾದನೆಯನ್ನು ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.ಅಡಿಕೆ ಬೆಳೆಯಲ್ಲಿ ಅಂತರ ಬೆಳೆಯಾಗಿ ಪೇರಲ ಹಾಗೂ ಬಾಳೆ ಬೆಳೆಯನ್ನು ಬೆಳೆಯುತ್ತಿದ್ದಾರೆ ಜೊತೆಗೆ ತೆಂಗು, ತೊಗರೆ, ಸೋಯಾಬಿನ್, ಗೋವಿನ ಜೋಳ ಬೆಳೆಯಿಂದ ಅಧಿಕ ಲಾಭ ಗಳಿಸಿರುತ್ತಾರೆ.ಸಾವಯವ ಕೃಷಿ ಪದ್ದತಿ, ಎರೆಹುಳು ಗೊಬ್ಬರ ತಯಾರಿಕೆ, ಜೈವಿಕ ಪೀಡೆನಾಶಕಗಳ ಬಳಕೆ, ಸಮಗ್ರ ಪೀಡೆ ನಿರ್ವಹಣಾ ಪದ್ದತಿಗಳನ್ನು ಅಳವಡಿಸಿಕೊಂಡು ರೋಗ ಹಾಗೂ ಕೀಟಗಳ ನಿರ್ವಹಣೆಯನ್ನು ಸಮರ್ಕವಾಗಿ ಕೈಗೊಂಡಿರುತ್ತಾರೆ.ಸಾಂಪ್ರದಾಯಿಕ ಬೇಸಾಯ ಪದ್ಧತಿಗಳೊಂದಿಗೆ ಆಧುನಿಕ ಯಾಂತ್ರಿಕೃತ ಕೃಷಿ ಪರಿಕರಗಳಾದ ಟ್ರ್ಯಾಕ್ಟರ್‌ಗಳು ಹಾಗೂ ಟ್ರ್ಯಾಕ್ಟರ್ ಚಾಲಿತ ಬೇಸಾಯ ಯಂತ್ರಗಳು, ಬೀಜ ಬಿತ್ತನೆಯ ಯಂತ್ರ, ಮೇವು ಕತ್ತರಿಸುವ ಯಂತ್ರ, ಕಸ ಮಲ್ಚಿಂಗ್ ಮಾಡುವ ಯಂತ್ರೋಪಕರಣಗಳು ಹಾಗೂ ಸರಕು ಸಾಗಾಣಿಕೆ ವಾಹನವನ್ನು ಕೃಷಿ ಚಟುವಟಿಕೆಗಳಿಗಾಗಿ ಬಳಸಿಕೊಂಡು ಕಾರ್ಮಿಕರ ಸಮಸ್ಯೆಯನ್ನು ಉತ್ತಮವಾಗಿ ನಿಭಾಯಿಸುತ್ತಾ ಬಂದಿರುತ್ತಾರೆ.
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಹಾಗೂ ಬಸಿಗಾಲುವೆಗಳನ್ನು ನಿರ್ಮಿಸಿ ನೀರಿನ ಸದ್ಬಳಕೆ ಹಾಗೂ ರೋಗ ಮತ್ತು ಕೀಟಗಳ ಸಮಸ್ಯೆಯಾಗದಂತೆ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ.ಕೃಷಿ ಹಾಗೂ ತೋಟಗಾರಿಕೆಯೊಂದಿಗೆ ಹೈನುಗಾರಿಕೆಯನ್ನು ಸಹ ಮಾಡುತ್ತಿದ್ದು ನಿರಂತರ ಆದಾಯದೊಂದಿಗೆ ನಿವ್ವಳ ಲಾಭ ಗಳಿಸುತ್ತಿದ್ದಾರೆ ಎಂದು ದೇವಿಹೊಸೂರ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.