ಲೋಕದರ್ಶನ ವರದಿ
ಬೆಳಗಾವಿ 04: ಬೇಂದ್ರೆಯವರಿಗೂ ಶಂ.ಬಾ. ರವರಿಗೂ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ತುಂಬ ಭಾವನಾತ್ಮಕವಾಗಿ ಸ್ಪಂದಿಸುತ್ತಿತ್ತ ಬೇಂದ್ರೆಯವರ ಮನಸ್ಥಿತಿಗೂ ತುಂಬ ವೈಜ್ಞಾನಿಕವಾಗಿ ಸ್ಪಂದಿಸುತ್ತಿದ್ದ ಶಂ.ಬಾ.ರವರ ಮನಸ್ಥಿತಿಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ಇಬ್ಬರ ನಡುವೆ ಧ್ವೇಷ, ಸಿಟ್ಟು ಅಂತಾ ಅಲ್ಲಾ ಎಂದು ಮಹೇಶ ಕಾಲೇಜ್ ಪ್ರಾಚಾರ್ಯರಾದ ಮಂಜುನಾಥ ವಿ. ಭಟ್ ಇಂದಿಲ್ಲಿ ಹೇಳಿದರು.
ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನವರು ಇದೇ. ದಿ. 3 ಮಂಗಳವಾರದಂದು ನಗರದ ಸಾಹಿತ್ಯಭವನದಲ್ಲಿ 'ಶಂ. ಬಾ. ಜೋಶಿ ಸಂಸ್ಮರಣೆ ಮತ್ತು ಚುಟುಕು ಕವಿಗೋಷ್ಠಿ' ಯನ್ನು ಹಮ್ಮಿಕೊಂಡಿದ್ದರು. 'ಶಂ.ಬಾ. ಜೋಶಿ ಬದುಕು ಬರಹ' ಕುರಿತು ಉಪನ್ಯಾಸ ನೀಡುತ್ತ ಮಂಜುನಾಥ ಭಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಶಂ.ಬಾ. ಅವರ ಬದುಕಿನ ಕುರಿತು ಮಾತನಾಡುತ್ತ ಭಟ್ ಅವರು, ಬರೆದು ಬದುಕಬೇಕೆಂದು ಹಠ ತೊಟ್ಟವರು ಒಬ್ಬರು ಅನಕೃ ಇನ್ನೊಬ್ಬರು ಶಂ. ಬಾ. ಜೋಶಿಯವರು. ಕಾದಂಬರಿಗಳು ತುಂಬ ಪ್ರಚಾರದಲ್ಲಿದ್ದ ಕಾಲದಲ್ಲಿ ಸಂಶೋಧನೆಯ ಪುಸ್ತಕಗಳನ್ನು ಬರೆದು ಬದುಕುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕೆಲವೊಂದನ್ನು ಕೃತಿಗಳನ್ನು ಬರೆಯುವಷ್ಟರಲ್ಲಿ ಬದುಕಲು ಹಣದ ಅವಶ್ಯಕತೆಯತ್ತ ಯೋಚಿಸಿದ ಶಂ.ಬಾ, ಅವರು ಕನರ್ಾಟಕ ಹಾಸ್ಕೂಲದಲ್ಲಿ ಶಿಕ್ಷಕರಾಗಿ ಸೇರಿಕೊಳ್ಳುತ್ತಾರೆ. ಮುಂದೆ ವಿದ್ಯಾರಣ್ಯ ಹಾಸ್ಕೂಲಕ್ಕೆ ಸೇರಿದ ಅವರು ನಿವೃತ್ತಿಯವರೆಗೂ ಅಲ್ಲಿಯೇ ಸೇವೆ ಸಲ್ಲಿಸುತ್ತಾರೆ ಎಂದು ಹೇಳಿದರು. ಸಾಹಿತ್ಯ ಕುರಿತು ಮಾತನಾಡುತ್ತ ಭಟ್ ಅವರು ಶಂ.ಬಾ.ರವರು 38 ಕೃತಿಗಳನ್ನು ಬರೆದಿದ್ದಾರೆ. ಶಂ.ಬಾ. ರವರ ಕೃತಿಗಳನ್ನು ಅಥರ್ೈಸಿಕೊಳ್ಳುವುದು ತುಂಬ ಕಷ್ಟದ ಕೆಲಸ. ಅವರ ಸಾಹಿತ್ಯದಲ್ಲಿ ನಮ್ಮ ಸಂಪ್ರದಾಯ, ಬದುಕಿನ ಹೋರಾಟ, ಇವತ್ತಿನ ಜಾತಿ ವ್ಯವಸ್ಥೆ, ಹಿಂದು ಧರ್ಮದ ಕಲ್ಪನೆ ಮುಂತಾದವುಗಳ ಕುರಿತು ಸಂಶೋಧನಾತ್ಮಕವಾಗಿ ಬರೆದಿದ್ದಾರೆ. ಇಂದಿನ ನಾಗಾರಾಧನೆ ವೇದ ಕಾಲದಲ್ಲಿ ಹೇಗಿತ್ತು. ಯಾಕೆ ಈ ರೀತಿ ಪ್ರಕೃತರ್ಿಯಲ್ಲಿರುವಂತಹ ಜೀವಿಗಳನ್ನೆಲ್ಲ ಪೂಜಿಸುವ ಪರಂಪರೆ ನಮ್ಮಲ್ಲಿ ಬಂತು ಎಂಬುದಕ್ಕೆ ವಿವರವಾಗಿ ಬರೆದಿದ್ದಾರೆ. 'ಅಸಂತೋಷವೇ ಏಳ್ಗೆಯ ಮೂಲ' ಎಂಬ ಕೃತಿಯಲ್ಲಿ ಯಾವನು ತನ್ನ ಸಾಧನೆಯ ಕುರಿತು ಹೆಚ್ಚಿಗೆ ಅತೃಪ್ತನಾಗಿರುತ್ತಾನೆಯೋ ಅವನು ಹೆಚ್ಚಿಗೆ ಬೆಳೆಯಲು ಸಾಧ್ಯ ಅಥಾವಾ ಯಾರು ಹೆಚ್ಚಿಗೆ ಬೆಳೆದಿದ್ದಾರೋ ಅವರು ತುಂಬ ಅತೃಪ್ತರಾಗಿರುತ್ತಾರೆ ಎಂಬುದರ ಕುರಿತು ವಿವರವಾಗಿ ಬರೆದಿದ್ದಾರೆ. ಹೀಗೆ ಕತೆಗಳು, ವ್ಯಕ್ತಿಚಿತ್ರಣಗಳನ್ನು ಬರೆದಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಎಲ್. ಎಸ್. ಶಾಸ್ತ್ರಿಯವರು ಬೇಂದ್ರೆ ಹಾಗೂ ಶಂ.ಬಾ. ಅವರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಇದ್ದುದು ನಿಜ. ಬೇಂದ್ರೆಯವರು ಜೀವನದ ಕೊನೆ ಕಾಲದಲ್ಲಿ ಶಂ.ಬಾ.ರವರು ಬೇಂದ್ರೆಯವರನ್ನು ಭೇಟಿಯಾಗಿ ಮಾತನಾಡುವ ಇಚ್ಛೆ ವ್ಯಕ್ತಪಡಿಸಿದರು. ಇಬ್ಬರದ್ದೂ ಭೇಟಿಯಾಯಿತು. ಕೈ ಹಿಡಿದುಕೊಂಡು ಕಣ್ಣೀರು ತಂದರು. ದೊಡ್ಡವರು ಯಾವಾಗಲೂ ದೊಡ್ಡವರೇ. ಮುಂದಿನ ಪೀಳಿಗೆಯವರು ಹಿರಿಯ ಸಾಹಿತಿಗಳ ಪರಿಚಯ ಮಾಡಿಕೊಳ್ಳಬೇಕಾದುದು ಅತ್ಯವಶ್ಯವಾಗಿದೆ ಎಂದು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಅಶೋಕ ಮಳಗಲಿ ಅವರು ಮಾತನಾಡಿ ಧೀಡಿರನೇ ಪ್ರಸಿದ್ಧಿ ಹೊಂದುವ ಮನಸ್ಸನ್ನು ಕವಿಗಳು ಇಟ್ಟುಕೊಳ್ಳಬಾರದು. ನೀವು ಬರೆದ ಕವಿತೆಯನ್ನು ಮತ್ತೆ ಮತ್ತೆ ನೀವೇ ಓದಿನೋಡಿ. ಸ್ವವಿಮರ್ಶಕರಾದಾಗ ಒಳ್ಳೆಯ ಕವಿತೆಗಳನ್ನು ರಚಿಸಲು ಸಾಧ್ಯವೆಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪಿ. ಬಿ. ಸ್ವಾಮಿ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತ ನಡೆದು ಬಂದ ದಾರಿಯನ್ನು ಪರಿಚಯಿಸಿದರು.
ಚುಟುಕು ಕವಿಗೋಷ್ಠಿಯಲ್ಲಿ ಗುಂಡೇನಟ್ಟಿ ಮಧುಕರ, ಡಾ. ನೀತಾ ರಾವ್, ಡಾ. ರೇಣುಕಾ ಕಠಾರೆ, ಶಾಲನಿ ಚಿನವಾರ, ಡಾ. ಹೇಮಾವತಿ ಸೊನೊಳ್ಳಿ, ಸುನಂದಾ ಹಾಲಬಾವಿ, ಸುನಂದ ಮುಳೆ ಜಯಶೀಲಾ ಬ್ಯಾಕೋಡ, ಭಾರತಿ ಮಠದ, ಇಂದಿರಾ ಮೋಟೆಬೆನ್ನೂರ, ಜಿ. ಎಸ್. ಸೋನಾರ, ಪ್ರಭಾ ಕಾಕತಿಕರ, ದೀಪಿಕಾ ಚಾಟೆ, ಕೆ. ತಾನಾಜಿ, ಜ್ಯೋತಿ ಬದಾಮಿ, ವಾಸಂತಿ ಮೆಳೆದ, ಶೈಲಾ ನಾಯಕ, ಸುಧಾ ಪಾಟೀಲ, ಪ್ರಭಾ ಪಾಟೀಲ, ರಾಜೇಶ್ವರಿ ಹಿರೇಮಠ, ಶೈಲಜಾ ತಳವಾರ, ಶಿವಾನಂದ ಬಿಚ್ಚುಗತ್ತಿ, ಡಾ. ನಿರ್ಮಲಾ ಬಟ್ಟಲ, ಸುನಂದಾ ಮುಳೆ, ನಂದಾ ಘಾಗರ್ಿ ತಮ್ಮ ಸ್ವರಚಿತ ಕವನ ಹನಿಗವನಗಳನ್ನು ಓದಿದರು.
ಇದೇ ಸಂದರ್ಭದಲ್ಲಿ ಮಂಜುನಾಥ ಭಟ್ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಸುನಂದ ಮುಳೆ ಪ್ರಾಥರ್ಿಸಿದರು.. ದೀಪಿಕಾ ಚಾಟೆ ಸ್ವಾಗತಿಸಿದರು. ಡಾ. ನಿರ್ಮಲಾ ಬಟ್ಟಲ ನಿರೂಪಿಸಿದರು.