ಬಳ್ಳಾರಿ ಜಿಲ್ಲೆಗೆ ನೀರೀಕ್ಷೆಯ ಬಜೆಟ್ ಸಿಕ್ಕಿಲ್ಲ: ಜನ ಸಾಮಾನ್ಯರು ಬೇಸರ

Bellary district has not received the expected budget: Common people are upset

ಬಳ್ಳಾರಿ ಜಿಲ್ಲೆಗೆ ನೀರೀಕ್ಷೆಯ ಬಜೆಟ್ ಸಿಕ್ಕಿಲ್ಲ: ಜನ ಸಾಮಾನ್ಯರು ಬೇಸರ

ಬಳ್ಳಾರಿ 07: ಬಳ್ಳಾರಿಯಲ್ಲಿ ಅತ್ಯಾಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆ, ಸಿರಿವಾರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮತ್ತು ಅಪಾರಲ್ ಪಾರ್ಕ್ಗಾಗಿ ವಿಶೇಷ ಅನುದಾನ ಘೋಷಣೆಯ ನೀರೀಕ್ಷೆಗಳಿದ್ದವು. ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರೆಸ್ಟ್ಗೇಟ್ಗಳನ್ನು ಅಳವಡಿಸುವ ವಿಷಯಗಳು ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ.ಸಂಕಷ್ಟದಲ್ಲಿರುವ ಪತ್ರಕರ್ತರ ಮಾಶಾಸನವನ್ನು ಹೆಚ್ಚಳ ಮಾಡಿ, ಪಡೆದಿರುವ ಪತ್ರಕರ್ತರು ಮತ್ತು ಅವರ ಕುಟಂಬಗಳಿಗಾಗಿ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಬಳ್ಳಾರಿ ಜಿಲ್ಲೆಯ ಕೈಗಾರಿಕೆ, ಕೃಷಿ, ವೈದ್ಯಕೀಯ, ವಿಜ್ಞಾನ, ಶಿಕ್ಷಣ, ಮಾರುಕಟ್ಟೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಮತ್ತು ಜನ ಪ್ರತಿನಿಧಿಗಳು ನೀರೀಕ್ಷಿಸಿದ್ದ ಅಭಿವೃದ್ಧಿ ಯೋಜನೆಗಳು ಯಾವುವೂ ಘೋಷಣೆಯಾಗದಿರುವುದು ಎಲ್ಲರಲ್ಲೂ ಬೇಸರ ಮೂಡಿಸಿದೆ.