ಕನಕದುರ್ಗಮ್ಮ ದೇವಸ್ಥಾನ ಸಮೀಪದ ಅಂಡರ್ ಪಾಸ್ ಕಾಮಗಾರಿ ಸ್ಥಳಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಭೇಟಿ

ಕನಕದುರ್ಗಮ್ಮ ದೇವಸ್ಥಾನ

ಕನಕದುರ್ಗಮ್ಮ ದೇವಸ್ಥಾನ ಸಮೀಪದ ಅಂಡರ್ ಪಾಸ್ ಕಾಮಗಾರಿ ಸ್ಥಳಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಭೇಟಿ

ಬಳ್ಳಾರಿ 25 : ರಂದು  ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2023-24ರ ಮುಖ್ಯ ಮಂತ್ರಿಗಳ ವಿವೇಚನಾ ನಿಧಿಯ ಅನುದಾನದ ಅಡಿ ಆರಂಭಗೊಂಡಿರುವ ಕನಕದುರ್ಗಮ್ಮ ದೇವಸ್ಥಾನ ಸಮೀಪದ ಅಂಡರ್ ಪಾಸ್ ಕಾಮಗಾರಿ ಸ್ಥಳಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಭೇಟಿ ನೀಡಿ ಪರೀಶೀಲಿಸಿದರು. ಸೋಮವಾರ ಮಧ್ಯಾಹ್ನ ನಗರ ಸಂಚಾರ ನಡೆಸಿ, ಆಗಬೇಕಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಗುತ್ತಿಗೆದಾರ ಶ್ರೀಧರ್ ಮಾಹಿತಿ ನೀಡಿದರು. ಶಾಸಕ ನಾರಾ ಭರತ್ ರೆಡ್ಡಿ ಅಗತ್ಯ ಸಲಹೆ ನೀಡಿದರು.ಕನಕದುರ್ಗಮ್ಮ ದೇವಸ್ಥಾನದ ಬಳಿ ಬಸ್ ತಂಗುದಾಣದ ಪಕ್ಕ ಪುಟ್‌’ಪಾತ್ ಅಭಿವೃದ್ಧಿ ಪಡಿಸುವಂತೆ ಸೂಚಿಸಿದರು. ತದನಂತರ ಮೋತಿ ವೃತ್ತಕ್ಕೆ ಭೇಟಿ ನೀಡಿ ರಸ್ತೆ ಮಧ್ಯೆ ಇರುವ ಕೋನಾಕಾರ​‍್ಪಸ (ದುಬೈ ಗಿಡ) ಗಿಡಗಳನ್ನು ತೆರವುಗೊಳಿಸುವಂತೆ ಆದೇಶಿಸಿದರು. ಬಸ್ ನಿಲ್ದಾಣದ ಬಳಿಯಿರುವ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಬಳಿ ಅಕ್ರಮವಾಗಿ ಹಾಕಲಾಗಿರುವ ಹೋರ್ಡಿಂಗ್ಸ್‌ ಹಾಗೂ ಬ್ಯಾರಿಕೇಡ್ ತೆರವುಗೊಳಿಸಿ, ಪುಟ್‌’ಪಾತ್ ಅಭಿವೃದ್ಧಿಪಡಿಸುವಂತೆ ಸೂಚಿಸಿದರು.ತದ ನಂತರ ಎಪಿಎಂಸಿ ವೃತ್ತಕ್ಕೆ ಭೇಟಿ ನೀಡಿದ ಶಾಸಕ ನಾರಾ ಭರತ್ ರೆಡ್ಡಿಯವರು, ಉದ್ಧೇಶಿತ ಭಾರತ್ ಜೋಡೋ ವೃತ್ತದ ನಿರ್ಮಾಣ ಕಾಮಗಾರಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಇದಾದ ಬಳಿಕ ವಾಲ್ಮೀಕಿ ವೃತ್ತಕ್ಕೆ ಭೇಟಿ ನೀಡಿ ವಾಲ್ಮೀಕಿ ವೃತ್ತದ ನವೀಕರಣ ಹಾಗೂ ಅಗಲೀಕರಣದ ಕುರಿತು ಅಧಿಕಾರಿಗಳು ಹಾಗೂ ಗೃತ್ತಿಗೆದಾರರಿಂದ ಮಾಹಿತಿ ಪಡೆದು ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಸೂಚಿಸಿದರು.ಬಳಿಕ ಮೋಕ ರಸ್ತೆಯ ಕೆಇಬಿ ವೃತ್ತದ ಬಳಿ ನಡೆದಿರುವ ರಸ್ತೆ ಅಗಲೀಕರಣ ಹಾಗೂ ಸೌಂದರ್ಯೀಕರಣದ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಕೆಇಬಿ ವೃತ್ತದಿಂದ ಮೇಲು ಸೇತುವೆವರೆಗೆ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು.ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಖಲೀಲಸಾಬ, ಪಾಲಿಕೆಯ ಸದಸ್ಯ ಮಿಂಚು ಶ್ರೀನಿವಾಸ್, ಪಾಲಿಕೆಯ ಎಂಜಿನಿಯರ್‌’ಗಳು, ಗುತ್ತಿಗೆದಾರರು ಹಾಜರಿದ್ದರು.