ಲೋಕದರ್ಶನ ವರದಿ
ಬಳ್ಳಾರಿ 11: ಜಿಲ್ಲೆಯ ಜೋಳದರಾಶಿಯ ದೊಡ್ಡನಗೌಡರದು ಅದ್ಭುತ ದೈತ್ಯ ಪ್ರತಿಭೆಯಷ್ಟೇ ಅಲ್ಲ ಗುರುಶಿಷ್ಯ ಪರಂಪರೆಯಲ್ಲಿ ಅಪ್ರತಿಮ ಸಾಂಸ್ಕೃತಿಕ ವ್ಯಕ್ತಿಯಾಗಿದ್ದರು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ನುಡಿದರು.
ಜೋಳದರಾಶಿ ದೊಡ್ಡನಗೌಡರ 25ನೇ ಪುಣ್ಯತಿಥಿ ಹಾಗೂ ನೆನಪಿನ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಾಟಕ ನನ್ನ ಬೆಂಬಿಡದ ಬ್ರಹ್ಮರಾಕ್ಷಸವೆನ್ನುತ್ತ ರಂಗಭೂಮಿಗೆ ಬಂದ ದೊಡ್ಡನಗೌಡರು ಆ ಕಾಲದ ನಾಲ್ಕು ನೂರು ಎಕರೆಯ ದೊಡ್ಡ ಜಮೀನ್ದಾರ. ಮನೆತನದ ಗೌಡಕೀಯ ಮಾಡದೇ ಇಡೀ ಗ್ರಾಮದ ಅಭಿವೃದ್ಧಿ ಗೈದ ಅಪರೂಪದ ವ್ಯಕ್ತಿ. ಗ್ರಾಮಕ್ಕೆ ಪ್ರಪ್ರಥಮ ಬಾರಿಗೆ ಆಸ್ಪತ್ರೆ, ಶಾಲೆ, ಪೋಸ್ಟ್ ಆಫೀಸು ತಂದುದಲ್ಲದೇ ಊರಿನ ಶ್ರೀ ರಾಮೇಶ ದೇವಸ್ಥಾನವನ್ನು ಶ್ರೀರಾಮೇಶ ಟ್ರಸ್ಟ್ ರಚಿಸುವ ಮೂಲಕ ಪೂಜಾ ಮಂದಿರವನ್ನು ಸಾಂಸ್ಕೃತಿಕ ಕಲಾ ಮಂದಿರವನ್ನಾಗಿ ಮಾಡಿದ್ದಷ್ಟೇ ಅಲ್ಲದೇ ಅನೂಚಾನವಾಗಿ ಸಾಹಿತ್ಯ, ನಾಟಕ, ಬಯಲಾಟ, ಪ್ರವಚನ, ಗ್ರಂಥ ಪ್ರಕಟಣೆ ನಡೆಯಲು ಸ್ವಂತದ 25 ಎಕರೆ ದಾನ ಮಾಡಿದ ಹೃದಯವಂತ ದೊಡ್ಡನಗೌಡರು ಎಂದು ಅವರು ತಿಳಿಸಿದರು.
ಆಗ ದೇಶ ವಿದೇಶಗಳಲ್ಲಿ ರಂಗಭೂಮಿ ಮೂಲಕ ಪ್ರಸಿದ್ಧರಾಗಿದ್ದ ಬಳ್ಳಾರಿ ರಾಘವಾಚಾರ್ಯರ ಗರಡಿಯಲ್ಲಿ ಅಂತರಂಗದ ಶಿಷ್ಯರಾಗಿ ಬೆಳೆದ ದೊಡ್ಡನಗೌಡರು ಕನ್ನಡ ತೆಲುಗು ಭಾಷೆಗಳಲ್ಲಿ ಸಂಗೀತ, ಸಾಹಿತ್ಯ, ನಾಟಕ ರಚಿಸಿದರಲ್ಲದೇ ಗುರುಗಳ ಸ್ಮರಣೆಗಾಗಿ ಬಳ್ಳಾರಿ ನಗರದಲ್ಲಿ ರಾಘವ ಮೆಮೋರಿಯಲ್ ಆಸೋಸಿಯೇಷನ್ ಸ್ಥಾಪಿಸಿ ರಾಘವ ಕಲಾಮಂದಿರ ಆರಂಭಕ್ಕೂ ಕಾರಣೀಭೂತರಾಗಿದ್ದಾರೆ. ಈ ಗುರುಶಿಷ್ಯ ಪರಂಪರೆ ಇಂದಿಗೂ ಮಾದರಿಯಾಗಿದೆ ಎಂದು ಸಿದ್ಧಲಿಂಗಪ್ಪನವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಗೌರವಾಧ್ಯಕ್ಷ ಬಿ.ಸಿದ್ಧನಗೌಡರು ನಗರದಲ್ಲಿ ದೊಡ್ಡನಗೌಡರ ಸುಂದರ ಕಂಚಿನ ಪ್ರತಿಮೆಯನ್ನು ಬರುವ ಜುಲೈ-27ರ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದ್ದು ನಗರದ ಕಲಾಭಿಮಾನಿಗಳು, ಸಾರ್ವಜನಿಕರು ಉದಾರ ಸಹಾಯ ಸಹಕಾರ ನೀಡಬೇಕು ಎಂದರು. ವೇದಿಕೆಯಲ್ಲಿ ದೊಡ್ಡನಗೌಡರ ಸುಪುತ್ರಿ ಪಾರ್ವತಮ್ಮ ಹಾಜರಿದ್ದರು. ರಂಗತೋರಣದ ಕಾರ್ಯದರ್ಶಿ ಸ್ವಾಗತಿಸಿದರು. ರಾಮೇಶ ಟ್ರಸ್ಟ್ನ ಅಧ್ಯಕ್ಷರ ಜೋಳದರಾಶಿ ಪೊಂಪನಗೌಡ ವಂದಿಸಿದರು. ಜೋಳದರಾಶಿಯ ಯರ್ರೆಪ್ಪಗೌಡ ದೊಡ್ಡನಗೌಡರ ಹೋಗಿ ಬರ್ತೇನ್ರಿಯ್ಯ ನಮ್ಮೂರಿಗೆ ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ಕಟ್ಟಿ ಹಾಕಿದರು.
ಅಕ್ಷರಶಃ ಜನಮನ ಸೂರೆಗೊಂಡ ಕುರುಕ್ಷೇತ್ರ. ಕುರುಕ್ಷೇತ್ರ, ರಕ್ತರಾತ್ರಿ ನಾಟಕಗಳು ಅಂದಿನ ಅಭಿಜಾತ ಕಲಾವಿದರ ದೈತ್ಯ ಪ್ರತಿಭೆಯ ಸಾಕ್ಷಿಯಾಗಿ ಇಂದಿಗೂ ಉಳಿದು ಬಂದಿವೆ. ಗ್ರಾಮೀಣ ಭಾಗಗಳಲ್ಲಿ ಆಗೀಗ ನಡೆಯುವ ಇಂತಹ ನಾಟಕಗಳಲ್ಲಿ ಈಗಲೂ 70-80 ವಯಸ್ಸಿನ ಹಿರಿಯ ಕಲಾವಿದರೇ ಭಾಗವಹಿಸುತ್ತಿದ್ದು ಅವರ ಪರಂಪರೆಯ ಅನೂಚುರಿನ ಮುಂದುವರಿಕೆಯಂತೆಯೇ ಸಿದ್ಧವಾಗಿ ಇಡೀ ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿರುವ ಯುವ ಕಲಾವಿದರೇ ಅಭಿನಯಿಸಿರುವ 'ಕುರುಕ್ಷೇತ್ರ ನಾಟಕ ದೊಡ್ಡನಗೌಡ ರಂಗಮಂದಿರದಲ್ಲಿ ಪ್ರದಶರ್ಿತವಾಗಿ ಅಕ್ಷರಶಃ ಜನಮೆಚ್ಚುಗೆ ಗಳಿಸಿದ್ದು ಹಿರಿಯ ಪರಂಪರೆ ಮತ್ತು ಮುಂದುವರೆದಿರುವ ಸಂತೋಷ ನಾಟಕ ವೀಕ್ಷಿಸಿದ ಹಿರಿಯ ಕಲಾವಿದರಾದ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರು, ಗೆಣಿಕೆಹಾಳು ತಿಮ್ಮನಗೌಡ, ಚನ್ನಬಸಪ್ಪ, ಡಾ. ಪಿ.ಎಲ್. ಗಾದಿಲಿಂಗನಗೌಡ ಪ್ರತಿಕ್ರಿಯೆಯಲ್ಲಿ ವ್ಯಕ್ತವಾಯಿತು.
ಉದ್ದುದ್ದದ ಸಂಭಾಷಣೆಗಳನ್ನು ಆರ್ಭಟದಲ್ಲಿ ನುಡಿಯುವುದು, ಸಂಗೀತಮಯ ಹಾಡುಗಳನ್ನು ಕಲಾವಿದರೇ ಸೊಗಸಾಗಿ ಹಾಡುವುದು, ಬಣ್ಣದ ಪರದೆ-ಸಿಂಹಾಸನ ಸೆಟ್ ಬಳಸಿಯೂ ಸಿನಿಮೀಯ ರೀತಿಯಲ್ಲಿ ಕೃಷ್ಣ ಏಕಕಾಲಕ್ಕೆ ಇಬ್ಬರು ಕೃಷ್ಣರಾಗಿ ರಂಗದಲ್ಲಿ ಕಾಣಿಸಿಕೊಳ್ಳುವ ರೀತಿ ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಕೃಷ್ಣ ಪಾತ್ರಧಾರಿ ಸಿರಿಗೇರಿಯ ಮಂಜುನಾಥ ಹಾಗೂ ಸಿರಿಗೇರಿಯ ಶರಣಬಸವ ಅವರು ಮಿಂಚಿದರು. ಪ್ರತಿಯೊಂದು ದೃಶ್ಯಕ್ಕೂ ಪ್ರೇಕ್ಷಕರು ಮೆಚ್ಚಿ ಚಪ್ಪಾಳೆಯೊಂದಿಗೆ ಹರ್ಷ ವ್ಯಕ್ತಪಡಿಸಿ