ಬಳ್ಳಾರಿ: ನೂತನ ಜಿಲ್ಲಾಧಿಕಾರಿಯಾಗಿ ಎಸ್.ಎಸ್.ನಕುಲ್ ನೇಮಕ

ಲೋಕದರ್ಶನ ವರದಿ

ಬಳ್ಳಾರಿ 18; ಕಳೆದ ಮೂರು ವರ್ಷಗಳಿಂದ ಜಿಲ್ಲಾಧಿಕಾರಿಗಳಾಗಿದ್ದ ಡಾ. ರಾಮ್ಪ್ರಸಾತ್ ಮನೋಹರ್ ಅವರು ವರ್ಗಾವಣೆಯಾಗಿದ್ದು  ನಂತರ ನೂತನ ಜಿಲ್ಲಾಧಿಕಾರಿಯಾಗಿ ಎಸ್.ಎಸ್.ನಕುಲ್ ಅವರನ್ನು ಸರ್ಕಾರ  ನೇಮಕ ಮಾಡಿದೆ. ಇವರು ಬೆಂಗಳೂರಿನಲ್ಲಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ  ಎಸ್.ಎಸ್.ನಕುಲ್ ಅವರು ಈ ಹಿಂದೆ ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ರಾಮ್ಪ್ರಸಾತ್ ಮನೋಹರ್ ಅವರನ್ನು ಬೆಂಗಳೂರಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾಹಿಸಲಾಗಿದೆ