ಬಳ್ಳಾರಿ 30: ಉತ್ತರ ಕನರ್ಾಟಕ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳನ್ನು ಹೊರತೆಗೆಯಬೇಕೆಂಬುದು ಜಯ ಕರ್ನಾಟಕ ಸಂಘಟನೆ ಮನವಿ ಸಲ್ಲಿಸಿತು. ಭತ್ತದ ಕಣಜ ಎನಿಸಿಕೊಂಡಿರುವ ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ತುಂಗಭದ್ರಾ ಜಲಾಶಯ. ಈ ಜಲಾಶಯ ಕರ್ನಾಟಕ ರೈತರಿಗಷ್ಟೇ ಅಲ್ಲದೆ, ಹೊರ ರಾಜ್ಯಗಳ ರೈತರ ಜೀವನಾಡಿಯಾಗಿದೆ.
133 ಟಿ.ಎಂ.ಸಿ. ನೀರು ಸಂಗ್ರಹದ ಸಾಮಥ್ರ್ಯವುಳ್ಳ ತುಂಗಭದ್ರಾ ಜಲಾಶಯದಲ್ಲಿ 33 ಟಿ.ಎಂ.ಸಿ ಯಷ್ಟು ಹೂಳು ತುಂಬಿದೆ ಎಂದರೆ ನಮ್ಮ ದುರುದೃಷ್ಟವೇ ಸರಿ ಈ ಜಲಾಶಯ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳು, ಆಂಧ್ರಪ್ರದೇಶದಲ್ಲಿರುವಕಣ್ಕಾ ನ್ಪುರಲೂ , ಕಡಪ, ಅನಂತಪುರ ಜಿಲ್ಲೆಗಳು, ತೆಲಂಗಾಣ ರಾಜ್ಯ ಮೆಹಬೂಬ್ ನಗರ ಜಿಲ್ಲೆ ಈ ರೀತಿಯಾಗಿ ಮೂರು ರಾಜ್ಯಗಳ ಏಳು ಜಿಲ್ಲೆಗಳ 12 ಲಕ್ಷ ಎಕರೆ ಜಮೀನಿಗೆ ನೀರುಣಿಸುತ್ತಾ ಬಂದಿದೆ.
ಸುಮಾರು 70 ವರ್ಷಗಳಿಂದ ಇಷ್ಟು ಜಮೀನಿಗೆ ನೀರು ನೀಡಿರುವ ತುಂಗಭದ್ರಾ ಜಲಾಶಯದ ಒಡದಲ್ಲಿ 33 ಟಿಎಂಸಿ ಹೂಳು ತುಂಬಿರುವುದರಿಂದ ಈಗ್ಗೆ 20 ವರ್ಷಗಳಿಂದ ರೈತರಿಗೆ ಒಂದು ಬೆಳೆಗಳಿಗೆ ಸಹ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಜತೆಗೆ ಜನ ಜಾನುವಾರುಗಳಿಗೂ ತೊಂದರೆಯಾಗಿದೆ. ಈ ಜಲಾಶಯದಿಂದ ಪ್ರಮುಖ ನಗರಗಳಿಗೆ ಕುಡಿಯುವ ನೀರು ಸಹ ನೀಡಲಾಗುತ್ತಿದೆ. ಆದರೆ 20 ವರ್ಷಗಳಿಂದ ತುಂಬಿರುವ ಹೂಳನ್ನು ತೆಗೆಯುವ ಕಾರ್ಯ ಮಾತ್ರ ಪ್ರಗತಿ ಕಂಡಿಲ್ಲ. ಈಗಲೇ ಜನ ಜಾನುವಾರುಗಳು ಈಗಲೇ ನೀರಿಲ್ಲದೆ ಹನಿ ಹಾಗೂ ಪರದಾಡುತ್ತಿದ್ದಾರೆ. ಇದೇ ರೀತಿಯಾಗಿ ಮುಂದುವರಿದರೆ ಇನ್ನುಷ್ಟು ಕಷ್ಟವನ್ನು ಎದುರಿಸುವ ದಿನಗಳು ಬಹಳ ದೂರವೇನಿಲ್ಲ ಎಂಬುದನ್ನು ಅರಿಯಬೇಕಾಗಿದೆ. 33 ಟಿಎಂಸಿ ಹೂಳು ತುಂಬಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆಗಾಲವಾದರೆ, ಕೇವಲ 100 ಟಿಎಂಸಿ ಮಾತ್ರ ನೀರು ಸಂಗ್ರಹವಾಗುತ್ತದೆ. ಆಗ ರಾಜ್ಯದ ಮೂರು ಜಿಲ್ಲೆಗಳಷ್ಟೇ ಅಲ್ಲದೆ, ಆಂದ್ರ ಮತ್ತು ತೆಲಂಗಾಣ ಜಿಲ್ಲೆಗಳ 4-5 ಜಿಲ್ಲೆಗಳಿಗೆ ನೀರು ಪೂರೈಸಲು ಸಾಧ್ಯವೇ? ಆಗ ನಮ್ಮ ರೈತರು ನೀರು ಬಿಡಲು ಬಿಡುವರೇ? ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಮತ್ತು ಕೇಂದ್ರ ಸಕರ್ಾರಗಳು
ತುಂಬಿರುವ ಹೂಳನ್ನು ಹೊರತೆಗೆದು ಜಲಾಶಯದಲ್ಲಿ ಈ ಹಿಂದಿನಂತೆ 133 ಟಿಎಂಸಿ ನೀರು ಸಂಗ್ರಹವಾಗುವಂತೆ ಕಾಪಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೀಗ ಕುಡಿಯುವ ನೀರಿಗೆ ಬರ ಎದುರಾಗಿದ್ದು, ಮುಂದಿನ ದಿನಗಳಲ್ಲಿ ತಿನ್ನುವ ಅನ್ನಕ್ಕೂ ಬರ ಬಂದೀತು ಎಂಬ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ಕೇಂದ್ರ ಮತ್ತು ರಾಜ್ಯ ಸಾರ್ಕರಗಳು ತಕ್ಷಣವೇ ಈ ಬಗ್ಗೆ ಎಚ್ಚೆತ್ತುಕೊಂಡು ಹೂಳು ತೆಗೆಯುವ ಕಾರ್ಯಕ್ಕೆ ಮುಂದಡಿ ಇಡದೇ ಇದ್ದರೆ ಮುಂದಿನ ದಿನಗಳಲ್ಲಿ ಜಯಕನರ್ಾಟಕ ಸಂಘಟನೆಯ ರೈತರೊಂದಿಗೆ ಒಗ್ಗೂಡಿ ಉಗ್ರ ಹೋರಾಟ ರೂಪಿಸಬೇಕಾದೀತು ಎಂಬ ಎಚ್ಚರಿಕೆ ನೀಡಲು ಬಯಸುತ್ತದೆ ಎಂದು ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ, ರಾಜ್ಯ ಪ್ರಧಾನ ಕಾರ್ಯದಶರ್ಿಯಾದ ಎಚ್.ರಾಮಚಂದ್ರಯ್ಯ, ಬಳ್ಳಾರಿಯ ಪ್ರಧಾನ ಕಾರ್ಯದಶರ್ಿಯಾದ ಮಹದೇವ್ ಕುಮಾರ್, ಬಳ್ಳಾರಿಯ ಕಾರ್ಯಧ್ಯಕ್ಷರಾದ ಸುದರ್ಶನ್, ಬಳ್ಳಾರಿಯ ಜಿಲ್ಲಾಧ್ಯಕ್ಷರಾದ ಜಯರಾಮ್ ಚೌಧರಿ, ಜಿಲ್ಲಾ ಗೌರವಧ್ಯಕ್ಷರಾದ ಮಲ್ಲಿಕಾಜರ್ುನ ಸ್ವಾಮಿ, ಹಾಗೂ ಜಿಲ್ಲಾ ಪದಾಧಿಕಾರಿಗಳಾದ ನಾಗರಾಜ, ಪ್ರಮೋದ್ ಕುಮಾರ್, ಶಂಕರ ಬಸಪ್ಪ, ಶಿವುಸ್ವಾಮಿ, ರಾಧಕೃಷ್ಣ, ಶ್ರೀನಿವಾಸ, ಶಿವಕುಮಾರ.ಎಂ (ತಾಲ್ಲೂಕು ಅದ್ಯಕ್ಷರು ಬಳ್ಳಾರಿ) ಅಪ್ಪು ಬಸವರಾಜ, ಪವನಕುಮಾರ್, ಲೋಕೇಶ್ (ಸಂಡೂರು ತಾಲೂಕು ಅಧ್ಯಕ್ಷರು) ಬಿ.ರಾಘವೇಂದ್ರ (ಕೂಡ್ಲಿಗಿ ತಾಲೂಕು ಅಧ್ಯಕ್ಷರು), ರೆಡ್ಡಿ ಮಂಜುನಾಥ (ಕೂಡ್ಲಿಗಿ ಕಾರ್ಯಧ್ಯಕ್ಷರು)ರು ಭಾಗವಹಿಸಿದ್ದರ