ಲೋಕದರ್ಶನ ವರದಿ
ಬಳ್ಳಾರಿ 26: ನಗರದ ಬೆಂಗಳೂರು ರಸ್ತೆಯ ಎಸ್.ಕೆ.ಪಿ ಟೆಂಪಲ್ ಸ್ಟ್ರೀಟ್ ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಉಚಿತ ಅಸ್ತಿ(ಮೂಳೆ) ಸಾಂದ್ರತಾ ಮತ್ತು ದಂತ ಚಿಕಿತ್ಸೆ, ಗ್ಯಾಸ್ಟ್ರೀಕ್ ಹಾಗೂ ಮೂಳೆ ಮತ್ತು ಕಿಲು ನೋವಿನಿಂದ ಬಳಲುತ್ತಿರುವವರಿಗೆ ತಪಾಸಣಾ ಶಿಬಿರವನ್ನು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಯೋಜಿಸಿದ್ದರು.
ಇದರ ತಪಸಣೆಯನ್ನು ನುರಿತ ವೈದ್ಯರುಗಳಾದ ಡಾ.ಎಸ್.ರಮೇಶಕುಮಾರ್, ಡಾ.ವನ್ನಾರೆಡ್ಡಿ, ಡಾ.ಲಿಂಗರಾಜ, ಡಾ.ಕೌಶಿಕ್ ಸೇರಿದಂತೆ ಹಲವಾರು ರೋಗಗಳ ತಜ್ಞರು ಭಾಗವಹಿಸಿ ತಪಾಸಣೆಯನ್ನು ನಡೆಸಿದರು. ಜೊತೆಗೆ ಮದುಮೆಹ ಪರೀಕ್ಷೆ, ರಕ್ತ ಪರೀಕ್ಷೆ ತೈರಾಹಿಡ್ ಪರೀಕ್ಷೆಯನ್ನು ನಡೆಸಿದರು.
ಈ ಕಾರ್ಯಕ್ರಮದಲ್ಲಿ ನೂರಾರು ಜನ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದರು. ಜೊತೆಗೆ ವೆಂಕಟ ವರದಚಾರ್ಯ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಆರ್ಯವೈಶ್ಯ ಜನಾಂಗದ ವಿದ್ಯಾಥರ್ಿಗಳಾದ ಪಿ.ಸಾಯಿಸಿಂದುರ್ ಇವರು ವಿ.ಎಸ್.ಕೆ.ವಿ.ವಿಯಲ್ಲಿ ಎಂ.ಬಿ.ಎ ಕೊರ್ಸನಲ್ಲಿ ಐದನೇ ರ್ಯಾಂಕ್ ಪಡೆದಿದ್ದಕ್ಕಾಗಿ ಮತ್ತು ಪೃಥ್ವಿರಾಜ್ ಎಂ.ಸವಣುರು ಅವರು 10ನೇ ತರಗತಿ ಸಿಬಿಎಸ್ಸಿಯಲ್ಲಿ ನಾರಾಯಣ ಈ ಟೆಕ್ನೋ ಬೆಂಗಳೂರು ಶಾಲೆಯಲ್ಲಿ ಗಣಿತದಲ್ಲಿ 100/99 ಅಂಕಗಳನ್ನು ಪಡೆದು ಉತ್ತೀರ್ಣರಾದ ಈ ಇಬ್ಬರು ವಿದ್ಯಾಥರ್ಿಗಳಿಗೆ ಸನ್ಮಾನಿಸಿ ಗೌರವದನ ನೀಡಿದರು. ಜೊತೆಗೆ ಈ ತಪಾಸಣೆಗೆ ಬಂದ ಸಾರ್ವಜನಿಕರಿಗೆ ಬೆಳಗಿನ ಉಪಹಾರ ಮತ್ತು ಮದ್ಯಾಹ್ಯನ ಬೋಜನವನ್ನು ಉಚಿತವಾಗಿ ನೀಡಿದರು. ಅಂತಯೇ ಉಚಿತ ಔಷದಿಯನ್ನು ಸಹ ನೀಡಿದರು.
ಪ್ರತೀ ವರ್ಷವು ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ಉನ್ನತಮಟ್ಟಕ್ಕೆ ಹೊಗುತ್ತಿದ್ದು ಇದರ ಉಪಯೋಗವನ್ನು ನಮ್ಮ ಸಮಿತಿಯಿಂದ ಪ್ರತೀ ವರ್ಷವು ಆಯೋಜಿಸಲಾಗುತ್ತಿದೆ ಎಂದು ವೆಂಕಟ ವರದಚಾರ್ಯ ಸೇವಾಸಮಿತಿ ಟ್ರಷ್ಟ್ನ ಅಧ್ಯಕ್ಷ ವೆಂಕಟೇಶರುಲು, ಕಾರ್ಯದಶರ್ಿ ರಮೇಶ, ಖಜಾಂಚಿ ಪೋಲಾ ಬಸವರಾಜ, ನಮ್ಮ ಪ್ರತಿನಿದಿಗೆ ತಿಳಿಸಿದರು.