ಲೋಕದರ್ಶನ ವರದಿ
ಬೆಳಗಾವಿ 10: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲು ಶಾಸಕ ಅಭಯ ಪಾಟೀಲ ನಿರ್ಧರಿಸಿದ್ದು, ಅಧಿಕಾರಿಗಳ ಜೋತೆ ವಿವಿಧ ರಸ್ತೆಗಳ ಸರ್ವೇ ಕಾರ್ಯ ಕೈಗೊಂಡರು.
ನಬಾರ್ಡ, ಸ್ಮಾರ್ಟಸಿ, ಸಿ.ಆರ್.ಎಫ್ ಹಾಗೂ ವಿಶೇಷ ಅನುದಾನಗಳು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪ್ರಮುಖ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿ ಅಭಿವೃಧ್ಧಿ ಪಡಿಸುವುದಾಗಿ ಅಭಯ ಪಾಟೀಲ ತಿಳಿಸಿದ್ದಾರೆ.
ಮೊದಲನೆ ಹಂತದಲ್ಲಿ ಹಳೇ ಪಿ.ಬಿ. ರಸ್ತೆಯ ರೈಲ್ವೇ ಮೇಲು ಸೇತುವೆ ಬದಗಿನ ಎಮ್ ಆರ್ ಎಫ್ ಶೋರೂಮ್ ಕ್ರಾಸ ವರೆಗಿನ ರಸ್ತೆ, ರೈಲ್ವೇ 1ನೇ ಗೇಟ್ ಶುಕ್ರವಾರ ಪೇಠದಿಂದ ಬಸವೇಶ್ವರ ವೃತ್ತದವರೆಗೆ ರಸ್ತೆ, ಕಾಂಗ್ರೇಸ್ ರಸ್ತೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನದ ಪಕ್ಕದಲ್ಲಿನ ರಸ್ತೆಯಿಂದ ಭಾತಖಂಡೆ ಶಾಲೆಯ ರಸ್ತೆಯ ಮೂಲಕ ಹಳೇ ಪಿ. ಬಿ. ರೋಡ ಕ್ರಾಸ ವರೆಗಿನ ಈ ಎಲ್ಲ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಡಿಸೆಂಬರ್ ತಿಂಗಳಿನಿಂದ ಕಾಮಗಾರಿಗಳನ್ನು ಆರಂಭಿಸಿ, ಮಾರ್ಚ ತಿಂಗಳವರೆಗೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಟೆಂಡರ ಪ್ರಕ್ರೀಯೆ ಜಾರಿಯಲ್ಲಿದ್ದು, ಮೊದಲ ಹಂತದಲ್ಲಿ ಈ ಕಾಮಗಾರಿಗಳು ಮುಗಿದ ಬಳಿಕ, 2ನೇ ಹಂತದಲ್ಲಿ ಶಹಾಪೂರ, ವಡಗಾವಿ, ಖಾಸಭಾಗ, ಅನಗೋಳ ಹಾಗೂ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಉಳಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಶಾಸಕ ಅಭಯ ಪಾಟೀಲ ಭರವಸೆ ನೀಡಿದರು.