ಬೆಳಗಾವಿ ಶಿವಗಿರಿ ಸೊಸೈಟಿಯರಜತ ಮಹೋತ್ಸವ
ಬೆಳಗಾವಿ 11 : ಮಹಾದ್ವಾರ ರಸ್ತೆಯ ಶಿವಗಿರಿ ಕೋ ಆಪರೇಟಿವ್‌ಕ್ರೆಡಿಟ್ ಸೊಸೈಟಿ 25ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿರಜತ ಮಹೋತ್ಸವವನ್ನು ಭಾಗ್ಯನಗರದರಾಮನಾಥ ಮಂಗಲ ಕಾರ್ಯಾಲಯದಲ್ಲಿರವಿವಾರ ಹಮ್ಮಿಕೊಳ್ಳಲಾಗಿತ್ತು.
ಮಾಜಿಅಧ್ಯಕ್ಷಗಂಗಾಧರ್ ಎಂ ಅವರು, ಸಂಸ್ಥೆ ನಡೆದು ಬಂದ ಹಾದಿಯನ್ನು ಸ್ಮರಿಸಿ ಮುಂದೆಯೂಎಲ್ಲರೂಒಟ್ಟಾಗಿ ಸಂಸ್ಥೆಯನ್ನುಇನ್ನಷ್ಟು ಅಭಿವೃದ್ಧಿಗೊಳಿಸಿ ಎಂದರು.ಉಪಾಧ್ಯಕ್ಷ ಸುನೀಲ್ ಪೂಜಾರಿ ಮಾತನಾಡಿ, ಸಂಸ್ಥೆಯ ಏಳ್ಗೆಗಾಗಿ ಎಲ್ಲಾರೂ ಶ್ರಮಿಸೋಣ.ಸಂಸ್ಥೆ ವತಿಯಿಂದಇನ್ನಷ್ಟು ಸಾಮಾಜಿಕ ಸೇವೆ ಮಾಡೋಣಎಂದರು.ಅಧ್ಯಕ್ಷ ಸುಜನ್‌ಕುಮಾರ್ ಮಾತನಾಡಿ, ಇಲ್ಲಿಯವರೆಗೆ ಸಂಸ್ಥೆಯ ಕೆಲಸ ಕಾರ್ಯಗಳಿಗೆ ಸಹಕಾರ ನೀಡಿದಎಲ್ಲರಿಗೂಅಭಿನಂದನೆ ಸಲ್ಲಿಸಿ ಮುಂದೆಯೂಎಲ್ಲರ ಸಹಕಾರವನ್ನುಕೋರಿದರು.
ನಿಪ್ಪಾಣಿ ಓಂಶಕ್ತಿ ದೇವಸ್ಥಾನ ಪೀಠದ ಮಹಾಕಾಳಿ ಮಹಾ ಸಂಸ್ಥಾನದಶ್ರೀ ಅರುಣಾನಂದತೀರ್ಥ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ ಶುಭ ಹಾರೈಸಿದರು.ಶಾಖಾ ವ್ಯವಸ್ಥಾಪಕಚಂದ್ರ ಪೂಜಾರಿಅವರು ಸಂಸ್ಥೆಯಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಂಸ್ಥೆಯ ಏಳಿಗೆಗೆ ಶ್ರಮ ವಹಿಸಿದ ಮಾಜಿಅಧ್ಯಕ್ಷರು, ನಿರ್ದೇಶಕರನ್ನುಸನ್ಮಾನಿಸಲಾಯಿತು.ಮಾಜಿ ಸಿಬ್ಬಂದಿಗಳು ಹಾಗೂ ಪ್ರಸ್ತುತಕಾರ್ಯನಿವಹಿಸುತ್ತಿರುವ ಸಿಬ್ಬಂದಿ, ನಿರ್ದೇಶಕರನ್ನು ಹಾಗೂ ಪಿಗ್ಮಿ ಸಂಗ್ರಹಕಾರರನ್ನುಗೌರವಿಸಲಾಯಿತು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿಗೌರವಿಸಲಾಯಿತು.ಸಂಸ್ಥೆಯ ಅಡಿ ಕಾರ್ಯ ನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳ ಸದಸ್ಯರನ್ನು ಸ್ಮರಣಿಕೆ ನೀಡಿಗೌರವಿಸಲಾಯಿತು.ಹಲವಾರುಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಉದ್ಯಮಿ ವಿಠ್ಠಲ ಹೆಗ್ಡೆ, ಬಂಟರ ಸಂಘದಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಹೋಟೆಲ್ ಮಾಲೀಕರ ಸಂಘದ ಮಾಜಿಅಧ್ಯಕ್ಷ ವಿಜಯ ಸಾಲಿಯನ್ ಉಪಸ್ಥಿತರಿದ್ದರು.ಹುಕ್ಕೇರಿ ಮಹಾವೀರಉದ್ಯೋಗ ಸಮೂಹ ಸಂಸ್ಥೆಯಅಧ್ಯಕ್ಷ ಮಹಾವೀರ ನಿಲಜಗಿ, ಬೆಳಗಾವಿಯ ಆಶೀರ್ವಾದ ಗ್ರೂಪ್‌ಆಫ್ ಹೋಟೆಲ್‌ಯುವಉದ್ಯಮಿ ಪ್ರಭಾಕರ ಶೆಟ್ಟಿ, ಬೆಳಗಾವಿಯ ರಾಷ್ಟ್ರದೇಹದಾರ್ಢ್ಯ ಸಂಘಟನೆಯಅಂತರಾಷ್ಟ್ರೀಯತೀರ್ುಗಾರಅಜಿತ ಸಿದ್ದಣ್ಣವರ ಅವರನ್ನು ಸನ್ಮಾನಿಸಲಾಯಿತು.
ಸೊಸೈಟಿಯರಜತ ಮಹೋತ್ಸವ ಪ್ರಯುಕ್ತ ಹೊರತರಲಾಗುವ ಸ್ಮರಣ ಸಂಚಿಕೆಯ ಮುಖಪುಟವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.ಸಂಸ್ಥೆಯಎಲ್ಲಾ ನಿರ್ದೇಶಕರು ಸಿಬ್ಬಂದಿ ವರ್ಗದವರು ಹಾಗೂ ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು.ಪ್ರದೀಪ ಪೂಜಾರಿ ನಿರೂಪಿಸಿ ವಂದಿಸಿದರು.