ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಿ.17 ರಂದು ಬೆಳಗಾವಿ ಸುವರ್ಣಸೌಧ ಚಲೋ ಕಾರ್ಯಕ್ರಮ ಜರುಗಲಿದೆ
ಗದಗ:11:ಸದಾಶಿವ ಆಯೋಗದ ಒಳ ಮೀಸಲಾತಿ ವರದಿ ಮರಣ ಶಾಸನವಾಗಿದ್ದು, ಕೊರಮ,ಕೊರಚ ಲಂಬಾಣಿ, ಭೋವಿ ಈ ಎಲ್ಲ ಸಮುದಾಯಗಳು ಬಹಳ ಕಷ್ಟದ ಕೆಲಸ ಮಾಡುತ್ತಾ ಬಂದಿದ್ದು,ಶಿಕ್ಷಣ ದಿಂದ ದೂರವಿದ್ದು, ಈ ಸಮುದಾಯಗಳು ಕೊಳಚೆ ಪ್ರದೇಶದಲ್ಲಿ ವಾಸವಿದ್ದು,ಚಿಕ್ಕ ಚಿಕ್ಕ ಮನೆ ಹೊಂದಿದ್ದು, ಸರಕಾರದ ವರದಿಯಲ್ಲಿ ಬಹಳಷ್ಟು ಮುಂದೆ ಇದ್ದು ಒಳ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿದ್ದು,ರಾಜ್ಯದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿರುವ ಸಮುದಾಯ ಕೇವಲ 50 ಸಾವಿರ ಜನರು ಶಿಕ್ಷಣ ಹೊಂದಿ ಮುಂದೆ ಬಂದಿದೆ ಎಂದು ಹೋರಾಟದ ರೂವಾರಿ ಚಂದ್ರಕಾಂತ ಚವ್ಹಾಣ ತಿಳಿಸಿದರು. ಗದಗ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಿ.17 ರಂದು ಬೆಳಗಾವಿ ಸುವರ್ಣಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರ ಪರವಾಗಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ಈಗ 15ಅ ಪ್ರತಿಶತ ಮೀಸಲಾತಿ ಇದ್ದು ಅದರಲ್ಲಿಯೇ ನಮ್ಮ "ಕೊಲಂಭೋ" ಸಮುದಾಯ ಮುಂದೆ ಬಂದಿಲ್ಲ. ಆದರೆ ಒಳ ಮೀಸಲಾತಿಯಿಂದ ಶೇಕಡಾವಾರು ಪ್ರತಿಷತ ಕಡಿಮೆ ಇದ್ದು, ಒಳ ಮೀಸಲಾತಿ ಬಳಕೆ ಪದ ನ್ಯಾಯಾಂಗದಲ್ಲಿ ಇಲ್ಲ. ಆದರೆ ಯಾರದ್ದೋ ಕುಮ್ಮಕ್ಕಿನಿಂದ ಒಳ ಮೀಸಲಾತಿ ಜಾರಿಗೆ ತಂದು ಮೀಸಲಾತಿಯಿಂದ ನಮ್ಮನ್ನ ದೂರ ಮಾಡುತ್ತಿದ್ದಾರೆ ಎಂಬ ನೋವು ನಮ್ಮ ಸಮುದಾಯಗಳದ್ದು ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಚವ್ಹಾಣ ತಿಳಿಸಿದರು. ಇದೇ ಸಂದರ್ಭದಲ್ಲಿ ಭೋವಿ ಸಮಾಜದ ಯುವ ಮುಖಂಡ ಆಂಜನೇಯ ಕಟಗಿ ಮಾತನಾಡಿ ಕೊರಮ,ಕೊರಚ, ಲಂಬಾಣಿ,ಭೋವಿ ಸಮುದಾಯ ಸರಕಾರದ ಸೌಲಭ್ಯಗಳಿಂದ ವಂಚಿತವಾಗಿ ಈಗಾಗಲೇ ಸಂಪೂರ್ಣವಾಗಿ ಆಳದ ನೀರಿನಲ್ಲಿ ಮುಳಗಿದ್ದು ಇನ್ನೇನು ಕಣ್ಣ ರೆಪ್ಪೆ ಕಾಣುವಷ್ಟು ಉಳಿದಿದೆ. ಆದ್ದರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿದ್ದು, ಡಿ.17 ರಂದು ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿರುವುದಾಗಿ ಅದಕ್ಕಾಗಿ ಎಲ್ಲ ಸಮುದಾಯಗಳು ಒಕ್ಕೊರಲಿನಿಂದ ಒಂದಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಬೇಕೆಂದರು. ಪಕ್ಷ ಮುಖ್ಯವಲ್ಲ ಸಮಾಜ ಮುಖ್ಯ, ಮೀಸಲಾತಿ ಮುಖ್ಯ ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ ನಮ್ಮನ್ನ ನಾವು ಸಂಪೂರ್ಣವಾಗಿ ಸಮರೆ್ಣ ಮಾಡಿದಲ್ಲಿ ಮಾತ್ರ ನಮ್ಮ ಮುಂದಿನ ಪಿಳಿಗೆಗೆ ಮೀಸಲಾತಿ ಅವಕಾಶ ಕಲ್ಪಿಸಿದಂತೆ ಆಗುತ್ತದೆ. ಆಯೋಗದ ವರದಿ ತಯಾರಿಸಿದ ಅಧಿಕಾರಿಗಳು ತಾಂಡಾ,ಹಟ್ಟಿಗಳಲ್ಲಿ ವಾಸಿಸುವ ಗುಡಿಸಲುಗಳ ಸಮೀಪ ಬಂದು ತನಿಖೆ ನಡೆಸಲಿ ಆಗ ವರದಿ ಅಂತಿಮ ಗೊಳಿಸಲಿ ಎಂದು ಸರಕಾರಕ್ಕೆ ಮನವಿ ಮಾಡಿದ ಅವರು ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಅಧಿಕ ಜನರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕೆಂದರು. ಪ್ರತಿ ಗ್ರಾಮದಲ್ಲಿ ಸಭೆ ನಡೆಸಿ ಎಲ್ಲರೂ ಒಗ್ಗಟ್ಟಾಗಿ ಡಿ.17 ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳೋಣ ಹೋರಾಟ ಯಶಸ್ವಿಗೊಳಿಸೋಣ ಎಂದರು. ಹಿರಿಯ ನ್ಯಾಯವಾದಿ ಮೋಹನ್ ಭಜಂತ್ರಿ ಮಾತನಾಡಿ ಒಳ ಮೀಸಲಾತಿಯಲ್ಲಿ ಒಡೆದು ಮೀಸಲಾತಿ ನೀಡಬೇಕು ಅಂತಾ ಯಾವ ನ್ಯಾಯಾಲಯದಲ್ಲಿ ಆದೇಶ ಇಲ್ಲ. ಇದನ್ನ ಕೈಬರಹದ ಮೂಲಕ ಬರೆದಿದ್ದು, ಸಂವಿಧಾನದಲ್ಲಿ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಕೆಲವು ಹಿತಾಸಕ್ತಿಗಳು ಮೀಸಲಾತಿಯಲ್ಲಿ ಕೈಯಾಡಿಸಿ ಒಡೆದು ಆಳುವ ವ್ಯವಸ್ಥೆಗೆ ಸಂಚು ನಡೆಸಲು ಮುಂದಾಗಿದ್ದಾರೆ. ಜಸ್ಟಿಸ್ ನಾಗಮೋಹನದಾಸ ವರದಿ ಮೇಲೆ ನಮಗೆ ಭರವಸೆ ಇಲ್ಲ.ಅದಕ್ಕಾಗಿ ವರದಿ ಮರು ಪರೀಶೀಲನೆ ಆಗಬೇಕು. ಸದಾಶಿವ ಆಯೋಗದ ವರದಿಯಿಂದ ನಾವು ಬೆಸತ್ತಿರುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಎಚ್ ವಾಯ್ ಸಂದಕದ, ಸಹದೇವ ಕೋಟಿ, ಶ್ರೀನಿವಾಸ ಭಂಡಾರಿ, ಪಾಂಡು ಚವ್ಹಾಣ,ಅನಿಲ ಕಾರಬಾರಿ,ಜಾನು ಲಮಾಣಿ, ಪರಮೇಶ ಲಮಾಣಿ,ರಮೇಶ ರಾಠೋಡ, ಕೆ ಸಿ ನಬಾಪೂರ, ಬಸವರಾಜ ಭಜಂತ್ರಿ, ನಾಗರಡ್ಡಿ ನಿಡಗುಂದಿ, ಸೋಮು ಲಮಾಣಿ, ಶ್ರೀನಿವಾಸ ಬೇವಿನಕಟ್ಟಿ, ಕಾಳಪ್ಪ ನಾಯಕ, ವಿಜಯ ಮುಳಗುಂದ, ರಾಜು ಪೂಜಾರ, ತುಕಾರಾಮ ಲಮಾಣಿ,ಮುತ್ತಪ್ಪ ಸಂದಕದ,ಲಕ್ಷ್ಮಣ ಪೂಜಾರ,ಪರಶುರಾಮ ಕಟಗಿ,ರಾಘವೇಂದ್ರ ಶಾಂತಗೇರಿ ಸೇರಿದಂತೆ "ಕೊಲಂಭೋ" ಸಮುದಾಯದ ಹಿರಿಯರು,ಮುಖಂಡರು, ಯುವಕರು ಭಾಗಿಯಾಗಿದ್ದರು.