ಕದಂಬ ಕನ್ನಡ ಜಿಲ್ಲೆಯ ಬೇಡಿಕೆಯ ಹಿಂದೆ ರಿಯಲ್ ಎಸ್ಟೇಟ್ ದಂಧೆಯ ಹುನ್ನಾರಿದೆ : ಕರವೇ ಆರೋಪ

Behind the demand of Kadamba Kannada district is real estate racket: Karaway alleges

ಕದಂಬ ಕನ್ನಡ ಜಿಲ್ಲೆಯ ಬೇಡಿಕೆಯ ಹಿಂದೆ ರಿಯಲ್ ಎಸ್ಟೇಟ್ ದಂಧೆಯ ಹುನ್ನಾರಿದೆ : ಕರವೇ ಆರೋಪ

ಕಾರವಾರ 30: ಕದಂಬ ಕನ್ನಡ ಜಿಲ್ಲೆಯ ಬೇಡಿಕೆಯ ಹಿಂದೆ ರಿಯಲ್ ಎಸ್ಟೇಟ್ ದಂಧೆಯ ಹುನ್ನಾರಿದೆ ಎಂದು ಕರವೇ ನಾರಾಯಣ ಗೌಡ ಬಣದ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪ ಮಾಡಿದರು. 

ಕಾರವಾರದಲ್ಲಿ ಅಡಿಶನಲ್ ಎಸ್ಪಿ ಎಂ.ಜಗದೀಶ್ ಅವರಿಗೆ ಸೋಮವಾರ ಲಿಖಿತ ಮನವಿ ನೀಡಿದ ಅವರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿ,ಮಾತನಾಡಿದರು. ಅನಂತಮೂರ್ತಿ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಹೆಗಡೆ ರಿಯಲ್ ಎಸ್ಟೇಟ್ ವ್ಯಾಪಾರಿ . ಅವರ ಜಿಲ್ಲಾ ವಿಭಜನೆ ಬೇಡಿಕೆಯ ಹಿಂದೆ ಪಕ್ಕದ ಮಹಾರಾಷ್ಟ್ರ ರಾಜ್ಯದ ಎಂಇಎಸ್ ಮತ್ತು ಗೋವಾ ರಾಜ್ಯದ ಕೊಂಕಣಿ ಮಂಚ್ ಗಳ ಹಿತಾಸಕ್ತಿ ಇದೆ.  

ಅನಂತ ಮೂರ್ತಿ ಬೇಡಿಕೆಯಂತೆ ಜಿಲ್ಲಾ ವಿಭಜನೆಯಾದರೆ, ಮುಂದಿನ ದಿನಗಳಲ್ಲಿ ಕಾರವಾರ ನಮಗೆ ಸೇರಲಿ ಎಂದು ಎಂಇ ಎಸ್ ಕೇಳಲಿದೆ. ಅನಂತಮೂರ್ತಿ ಹೆಗಡೆ ಅವರೊಂದಿಗೆ ಸೇರಿಕೊಂಡು, ಉತ್ತರ ಕನ್ನಡ ಜಿಲ್ಲೆಯ ವಿಭಜನೆಗೆ ಪ್ರಯತ್ನ ಮಾಡುತ್ತಿದ್ದಾರೋ ಎಂಬ ಅನುಮಾನ ನಮಗೆ ಇದೆ. ಅನಂತಮೂರ್ತಿ ಜಿಲ್ಲೆಯ ವಿಭಜನೆಯ ಹುನ್ನಾರು ನಮಗೆ ತಿಳಿಯಬೇಕಾಗಿದೆ ಎಂದ ಭಾಸ್ಕರ ಪಟಗಾರ , ಅನಂತಮೂರ್ತಿ ಹೆಗಡೆಯನ್ನು ಪೊಲೀಸರು ಕರೆದು ವಿಚಾರಣೆ ಮಾಡಿ ಮುಚ್ಚಳಿಕೆ ಬರೆಯಸಿಕೊಳ್ಳಬೇಕಿದೆ ಎಂದು ಹೇಳಿದರು. ಜಿಲ್ಲೆ ಅಖಂಡವಾಗಿರಬೇಕು. ವಿಭಜನೆ ಯಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಲಾಭ ಇದೆ. ಅವರ ಹೋರಾಟದ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ. ಜನರ ಹಿತ ಅಡಗಿಲ್ಲ ಎಂದು ಭಾಸ್ಕರ ಹೇಳಿದರು. ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು....