ಮಾಂಜರಿ 06: ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಯಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೀರದೇವರ ಪಲ್ಲಕ್ಕಿ ಮೆರವಣಿಗೆ ಮತ್ತು 111 ಸುಮಂಗಲೆಯರಿಂದ ಕುಂಭಮೇಳದ ಮೆರವಣಿಗೆ ಜರುಗಿತು.
ಗ್ರಾಮದ ಬೀರದೇವರ ಮಂದಿರದಲ್ಲಿ ಕುಂಭಮೇಳಕ್ಕೆ ಚಾಲನೆ ದೊರಕಿತು. ನಂತರ ಪಟ್ಠಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಕುಂಭಮೇಳ ಜರುಗಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಂಭಮೇಳಕ್ಕೆ ಮೆರಗು ತಂದರು. ನಂತರ ಮೆರವಣಿಗೆಯು ಕರ್ಲಹೊಂಡಲಿಂಗೇಶ್ವರ ಮಂದಿರಕ್ಕೆ ತೆರಳಿ ಮಂಗಲಗೊಂಡಿತು. ನಂತರ ರುದ್ರಾಭಿಷೇಕ ಮತ್ತು ನೈವೆದ್ಯ ಕಾರ್ಯಕ್ರಮ ಜರುಗಿತು.
ಮಹೇಶ ಬಾಕಳೆ, ಮಲ್ಲಪ್ಪಾ ಗಿಡ್ಡ, ಮಹಾಂತೇಶ ಕಬಾಡೆ, ಮಲ್ಲಪ್ಪಾ ಕಬಾಡೆ, ಶ್ರವಣ ರಾಯಮಾನೆ, ಭಾಲಚಂದ್ರ ಸಪ್ತಸಾಗರೆ, ಅಜೀತ ನಾವಲಗೇರ, ರವಿ ಹಿಟಣೆ, ಪುಂಡಲಿಕ ಸಾತ್ವರ, ಅಂಕುಶ ಮಾಳಿ, ಮಹಾಂತೇಶ ವಸ್ತ್ರದ, ಭೀಮು ಬಾಕಳೆ, ರಾಹುಲ ನಾಯಿಕ, ನವೀನ ಹುನ್ನರಗಿ, ಸೇರಿದಂತೆ ಗ್ರಾಮಸ್ಥರು, ಅನ್ನದಾನ ಸಮೀತಿ ಹಾಗೂ ಯಾತ್ರಾ ಸಮಿತಿಯ ಸದಸ್ಯರು, ವಿವಿಧ ಯುವಕ ಮಂಡಳದ ಸದಸ್ಯರು, ಮಹೀಳೆಯರು ಪಲ್ಲಕ್ಕಿ ಮೆರವಣಿಗೆ ಮತ್ತು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು.