ದಲಿತ ಸಂಘಟನೆಗಳ ನಡುವೆ ಒಡೆದಾಳುವ ನೀತಿ ಅನುಸರಿಸಿದರೆ ಎಚ್ಚರಿಕೆ ; ಮಲ್ಲಿಕಾರ್ಜುನ್ ಪೂಜಾರ್
ಕೊಪ್ಪಳ 06: ಬಲ್ದೋಟ ಕಂಪನಿಯವರಿಗೆ ದಲಿತರು ಒತ್ತಿ ಬಿದ್ದಿಲ್ಲ ಕಾರ್ಖಾನೆ ಮಾಲಿಕರು ದಲಿತ ಸಂಘಟನೆ ಮುಖಂಡರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾದಿಗ ಮಹಾಸಭಾ ಮುಖಂಡ ಮಲ್ಲಿಕಾರ್ಜುನ ಪೂಜಾರ್ ಎಚ್ಚರಿಕೆ ನೀಡಿದರು.
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಖಾನೆ ಬೇಕು ಎನ್ನುವವರು ಕೆಲ ಗಂಗಾವತಿ ಭಾಗದ ದಲಿತ ಮುಖಂಡರು ಹಾಗೂ ನಮ್ಮ ವಿರುದ್ದ ಕಾರ್ಖಾನೆಯವರು ಎತ್ತಿಕಟ್ಟುವ ಕೆಲಸ ನಡೆಸಿದ್ದಾರೆ ಈ ಕುತಂತ್ರ ನಡೆಯದು ಎಂದರು.ದಲಿತರ ಮುಖಂಡರ ಹೆಸರಿನಲ್ಲಿ ಕಾರ್ಖಾನೆಯ ಪರ ಇರುವವರು ಬಲ್ಡೋಟಾ ಇಲ್ಲಿರುವ ದಲಿತರು ಹಾಗೂ ಬೇರೆ ಸಮುದಾಯದ ಯುವಕರಿಗೆ ಎಷ್ಟು ಉದ್ಯೋಗ ನೀಡಿದೆ , ಕಾರ್ಖಾನೆಯ ಮೋಸವನ್ನು ಎಲ್ಲರು ಸೂಕ್ಷ್ಮವಾಗಿ ಗಮನಿಸಬೇಕು ಎಂದರು.
ಕೊಪ್ಪಳದ ಎಲ್ಲಾ ದಲಿತ ಮುಖಂಡರು ಕಾರ್ಖಾನೆ ಬೇಡ ಎನ್ನುವ ನಿಲುವಿಗೆ ಬದ್ಧರಿದ್ದೇವೆ , ಅಗತ್ಯ ಬಿದ್ದರೆ ಗವಿಶ್ರೀಗಳು ಹೇಳಿದರೆ ಉಗ್ರ ಹೋರಾಟಕ್ಕು ಸಿದ್ದರಿದ್ಧೇವೆ ಎಂದರು.ಈ ಸಂದರ್ಭದಲ್ಲಿ ದಲಿತ ವಿವಿಧ ಸಂಘಟನೆಯ ಮುಖಂಡರಾದ ಸಿದ್ದು ಮಣ್ಣಿನವರ, ಮುಕಪ್ಪ ಮೇಸ್ತ್ರಿ , ಖಾಜಾ ಸಾಬ್ ಹೊಸಳ್ಳಿ ಇತರರು ಉಪಸ್ಥಿತರಿದ್ದರು.