ಬ್ಯಾಟಿಂಗ್ ತಂತ್ರಗಾರಿಕೆ ಮರೆತಿಲ್ಲ: ಶಿಖರ್ ಧವನ್

ನವದೆಹಲಿ, ಡಿ. 24- ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಶಿಖರ್ ಧವನ್ ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳಿದ್ದಾರೆ. ತಮ್ಮ ಭರ್ಜರಿ ಬ್ಯಾಟಿಂಗ್ ನಿಂದಲೇ ಹೆಸರುವಾಸಿಯಾಗಿರುವ ಶಿಖರ್ ಮುಂದಿನ ವರ್ಷದಲ್ಲಿ ನಡೆಯಲಿರುವ ಸರಣಿಗೆ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. 

ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸೀಸ್ ವಿರುದ್ಧ ಬ್ಯಾಟ್ ಮಾಡುವಾಗ ಶಿಖರ್ ಬೆಟ್ಟಿಗೆ ಗಾಯ ಮಾಡಿಕೊಂಡಿದ್ದರು. ಇದಾದ ಬಳಿಕ ತಂಡಕ್ಕೆ ಮರಳಿದ ಶಿಖರ್ ದೇಶಿಯ ಟೂರ್ನಿಯ ಬ್ಯಾಟಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ರಣಜಿ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ತಂಡದಲ್ಲಿ ಕೆಲವು ಪಂದ್ಯಗಳಲ್ಲಿ ಆಡಿರಲಿಲ್ಲ. ಈಗ ಧವನ್ ಫಿಟ್ ಆಗಿದ್ದು, ಮೂರನೇ ಪಂದ್ಯದಲ್ಲಿ ತಂಡ ಸೇರಿಕೊಂಡಿದ್ದಾರೆ. 

 ಈ ಬಗ್ಗೆ ಮಂಗಳವಾರ ಮಾತನಾಡಿರುವ ಅವರು “ಹೊಸ ಆರಂಭವನ್ನು ಬಯಸುತ್ತೇನೆ. ಆದರೆ, ಬ್ಯಾಟಿಂಗ್ ತಂತ್ರಗಾರಿಕೆಯನ್ನು ಮರೆತಿಲ್ಲ. ಗ ಮತ್ತೆ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಲು ಪ್ಲಾನ್ ಮಾಡಿಕೊಂಡಿದ್ದೇನೆ. ಸಿಕ್ಕ ಅವಕಾಶ ಎರಡೂ ಕೈಗಳಿಂದ ಬಳಿಸಿಕೊಂಡಿರುವ ಕೆ.ಎಲ್ ರಾಹುಲ್ ಅಮೋಘ ಬ್ಯಾಟಿಂಗ್ ನಡೆಸಿದ್ದು, ರನ್ ಕಲೆ ಹಾಕಿ ವಿಶ್ವಾಸ ಮೂಡಿಸಿದ್ದಾರೆ” ಎಂದು ಹೇಳಿದ್ದಾರೆ. 

ಆಟಗಾರರಿಗೆ ಗಾಯದ ಸಮಸ್ಯೆ ಸಾಮಾನ್ಯ. ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬ್ಯಾಟಿಂಗ್ ತಂತ್ರಗಾರಿಕೆಯನ್ನು ಮರೆತಿಲ್ಲ.  ನನ್ನಲಿನ ಕ್ಷಮತೆಯನ್ನು ತೋರಿಸಲು ಇದು ನನಗೆ ಒಳ್ಳೆಯ ಅವಕಾಶ. ತವರಿನಲ್ಲಿ ನಡೆಯುವ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಲು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.