ಬಸ್ತವಾಡ: 4.48 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ

Bastawada: Bhoomi Puja for Rs. 4.48 crore worth of work

ಬಸ್ತವಾಡ: 4.48 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ

ಬೆಳಗಾವಿ, 12 :  ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದಲ್ಲಿ ನೀರು ನಿರ್ವಹಣಾ ಘಟಕ ನಿರ್ಮಾಣದ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಸುಮಾರು 4.48 ಕೋಟಿ ರೂ. ಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯ ಮೂಲಕ ಗ್ರಾಮದಲ್ಲಿನ ಕೊಳಚೆ ನೀರನ್ನು ನೀರು ನಿರ್ವಹಣಾ ಘಟಕಕ್ಕೆ ವರ್ಗಾಯಿಸಿ, ಫಿಲ್ಟರ್ ಮಾಡುವ ಮೂಲಕ ನೀರನ್ನು ರೈತರ ಹೊಲಗದ್ದೆಗಳಿಗೆ ಬಿಡುಗಡೆಗೊಳಿಸುವ ಗುರಿ ಹೊಂದಲಾಗಿದೆ. ಈ ಕಾಮಗಾರಿಯಿಂದ ಗ್ರಾಮದ ನೈರ್ಮಲ್ಯದ ಜೊತೆಗೆ ಸ್ವಚ್ಚತೆ ಕಾಪಾಡಲು ಸಹಕಾರಿಯಾಗಲಿದೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿಲ್ಪಾ ಪ ಪಾಟೀಲ, ಉಪಾಧ್ಯಕ್ಷರಾದ ವಿಠ್ಠಲ ಗ ಸಾಂಬ್ರೇಕರ್, ಮನೋಹರ ಮುಚ್ಚಂಡಿ, ತವನಪ್ಪ ಬಡಿಗೇರ, ಭರಮಪ್ಪ ಗೌಡಕೆಂಚಪ್ಪಗೋಳ, ರಾಮಾ ಕಾಕತ್ಕರ್, ಜ್ಯೋತಿಬಾ ಚೌಗುಲೆ, ಸಮೀರ್ ಸನದಿ, ಲಕ್ಷ್ಮೀ ಸಾಂಬ್ರೇಕರ್, ಅರ್ಜುನ ಪಾಟೀಲ, ರಮೇಶ ಹುಣಶೀಮರದ, ಮನೋಹರ ಬಾಂಡಗಿ, ಬಾಳಾರಾಮ ಪಾಟೀಲ, ಶಿವಾಜಿ ಕಾಕತ್ಕರ್, ಈರ​‍್ಪ ಚೌಗುಲೆ, ಗುಂಡು ಪಾಟೀಲ, ಮಹಾವೀರ ಸಂಕೇಶ್ವರಿ, ಪದ್ಮರಾಜ ಪಾಟೀಲ, ಭರತೇಶ ಸಂಕೇಶ್ವರಿ, ದೇವಪ್ಪ ಬಡವಣ್ಣವರ, ಅಶೋಕ ಜಕ್ಕಣ್ಣವರ, ಬಸೀರಸಾಬ್ ಕಿಲ್ಲೇದಾರ್, ಮೆಹಬೂಬ್ ಮುಲ್ಲಾ, ಕೃಷ್ಣ ಕೋಲಕಾರ, ಮಾಣಿಕ್ಯ ಕೋಲಕಾರ, ಮಹಾಂತೇಶ ಹಿರೇಮಠ್, ಸಾಗರ ತಹಶಿಲ್ದಾರ, ಡಿ.ಎಂ.ಬನ್ನೂರ್, ಶ್ವೇತಾ ಡಿ.ಆರ್, ಪಿಡಿಓ, ಗುತ್ತಿಗೆದಾರರು, ಗ್ರಾಮದ ಅನೇಕರು ಉಪಸ್ಥಿತರಿದ್ದರು.