ಕೊಣ್ಣೂರ ಗ್ರಾಪಂ ಅಧ್ಯಕ್ಷೆಯಾಗಿ ಬಸಮ್ಮ ಮಾದರ ಅವಿರೋಧ ಆಯ್ಕೆ

Basamma Madara elected unopposed as Konnur Grama Panchayat President

ಕೊಣ್ಣೂರ ಗ್ರಾಪಂ ಅಧ್ಯಕ್ಷೆಯಾಗಿ ಬಸಮ್ಮ ಮಾದರ ಅವಿರೋಧ ಆಯ್ಕೆ

ತಾಳಿಕೋಟಿ: ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತ್ ಇದರ ತೆರವಾದ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಬಸಮ್ಮ ಬಸಪ್ಪ ಮಾದರ ಇವರು ಅವಿರೋಧವಾಗಿ ಆಯ್ಕೆಯಾದರು. ಕೊಣ್ಣೂರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಬಸಮ್ಮ ಬಸಪ್ಪ ಮಾದರ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಾಪಂ ಇಒ ನಿಂಗಪ್ಪ ಮಸಳಿ ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿ ತಾಪಂ ನ ಬಸನಗೌಡ ಚೌಧರಿ, ಮಹಾಂತಗೌಡ ದೊರೆಗೋಳ, ಪಿಡಿಒ ಶ್ರೀಮತಿ ಎಸ್‌.ಎಸ್‌. ಬಿರಾದಾರ, ಕಾರ್ಯದರ್ಶಿ ಪಿ.ಎ.ಕರಾಟೆ ಕಾರ್ಯನಿರ್ವಹಿಸಿದರು. ಒಟ್ಟು 16 ಜನ ಸದಸ್ಯ ಬಲ ಹೊಂದಿರುವ ಈ ಪಂಚಾಯತ್ ನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 12 ಜನ ಸದಸ್ಯರು ಭಾಗವಹಿಸಿದ್ದರು. ವಿಜಯೋತ್ಸವ: ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಶ್ರೀಮತಿ ಬಸಮ್ಮ ಮಾದರ ಇವರ ಹೆಸರು ಘೋಷಣೆ ಯಾಗುತ್ತಿದ್ದಂತೆಯೇ ಅವರ ಅಪಾರ ಬೆಂಬಲಿಗರು ಸೇರಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶಂಕರಗೌಡ ಲಿಂಗದಳ್ಳಿ ಮಾತನಾಡಿ ಗ್ರಾಪಂ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಅಧ್ಯಕ್ಷರ ಆಯ್ಕೆ ಮಾಡಿದ್ದೇವೆ.ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷ ಸಾಹೇಬಲಾಲ ಟಕ್ಕಳಕಿ,ಮುಖಂಡರಾದ ಶಂಕರಾಯ ಬಿರಾದಾರ,ಸಂಗನಗೌಡ ಢವಳಗಿ,ಬಸಪ್ಪ ಮಾದರ,ಶಾಂತಗೌಡ ಜಾಲಿಕಟ್ಟಿ,ಎಲ್ಲಪ್ಪ ಮಾದರ,ಶಂಕರಗೌಡ ವಜ್ಜಲ್, ಶಿವನಗೌಡ ಕೋನಾಳ, ಶರಣಯ್ಯ ಹಿರೇಮಠ, ಸೋಮನಾಥ ಮಾದರ, ಗ್ರಾಪಂ ಸದಸ್ಯರಾದ ರೇಣುಕಾ ಟಿ.ಮಾದರ, ತಪಸ್ಸುಮ್ ಎಲ್‌. ವಾಲಿಕಾರ, ಯಂಕಮ್ಮ ಹ. ಅಂಗಡಗೇರಿ,ಮಹಾದೇವಿ ಹಡಪದ, ಶಂಕರಗೌಡ ಲಿಂಗದಳ್ಳಿ, ಸೋಮನಗೌಡ ಹಡಲ್ಗೇರಿ, ನಾಗಮ್ಮ ಹತ್ತೂರ, ಶಿವಾನಂದ್ ತಾಳಿಕೋಟಿ, ಅಶೋಕ್ ನಾಯ್ಕೋಡಿ, ಭಾಗ್ಯಶ್ರೀ ಯಾಳವಾರ, ಬಸಪ್ಪ ಎಂ.ನಾಯ್ಕೋಡಿ ಇದ್ದರು.