ಬಸಲಿಂಗಪ್ಪ ಯಲಿಗಾರಗೆ ಕವಿವಿ ಪಿಎಚ್‌.ಡಿ. ಪದವಿ

Basalingappa Yaligara awarded PhD degree as a poet

ಬಸಲಿಂಗಪ್ಪ ಯಲಿಗಾರಗೆ ಕವಿವಿ ಪಿಎಚ್‌.ಡಿ. ಪದವಿ 

ಹಾವೇರಿ, 13 : ನಗರದ ಪ್ರತಿಷ್ಠಿತ ಕೆ.ಎಲ್‌.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಬಸಲಿಂಗಪ್ಪ ನಾಗಪ್ಪ ಯಲಿಗಾರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ದೊರೆತಿದೆ. ಧಾರವಾಡ ಕವಿವಿಯ ಸ್ನಾತಕೋತ್ತರ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಅರವಿಂದ ಎ. ಮೂಲಿಮನಿ ಅವರ ಮಾರ್ಗದರ್ಶನದಲ್ಲಿ “ಎವಲೂಷನ್ ಆಫ್ ಟೌನ್ಸ್‌ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಫೆಸಿಲೀಟೀಸ್ ಇನ್ ಹಾವೇರಿ ಡಿಸ್ಟ್ರಿಕ್ಸ್‌: ಎ ಸ್ಪ್ಯಾಶಿಯಲ್ ಅನಾಲಿಸಿಸ್‌” ವಿಷಯದ ಮಹಾಪ್ರಬಂಧ ಮಂಡಿಸಿದ್ದರು. ಪದವಿ ಪಡೆದ ಶ್ರೀಯುತರಿಗೆ ಬೆಳಗಾವಿ ಕೆ.ಎಲ್‌.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಬಿ. ಕೋರೆ ಹಾಗೂ ನಿರ್ದೇಶಕ ಮಂಡಳಿ, ಕಾಲೇಜು ಸ್ಥಾನಿಕ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಸಮೂಹ ಪ್ರಕಟಣೆಯ ಮೂಲಕ ಅಭಿನಂದನೆಗಳನ್ನು ತಿಳಿಸಿದೆ.