ನವದೆಹಲಿ 22 ಬ್ಯಾಂಕುಗಳ ವಿಲೀನ ಹಾಗೂ ಜನ ವಿರೋಧಿ ಬ್ಯಾಂಕಿಂಗ್ ಸುಧಾರಣಾ ನೀತಿ ವಿರೋಧಿಸಿ ಬ್ಯಾಂಕ್ ನೌಕರರು ಡಿಸೆಂಬರ್ 10 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಸಕರ್ಾರದ ಈ ನೀತಿಯ ವಿರುದ್ಧ ಬ್ಯಾಂಕ್ ನೌಕರರು ಅಂದು ಸಂಸತ್ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ತೀಮರ್ಾನಿಸಿದ್ದಾರೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಮಂಡಲ ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಜಂಟಿಯಾಗಿ ಈ ಮುಷ್ಕರಕ್ಕೆ ಕರೆಕೊಟ್ಟಿವೆ. ಬ್ಯಾಂಕ್ ಗಳನ್ನು ವಿಲೀನಗೊಳಿಸುವ ಸಕರ್ಾರದ ಕ್ರಮ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್ ನೌಕರರ ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.