ಬಾಗಲಕೋಟೆ: ಸರಕಾರಿ ಆಸ್ಪತ್ರೆಗಳ ಸೂಸ್ಥಿತಿಗೆ ಬದ್ದ: ಸಿಇಓ ಮಾನಕರ

ಲೋಕದರ್ಶನ ವರದಿ

ಬಾಗಲಕೋಟೆ 16: ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಸರಕಾರಿ ಆಸ್ಪತ್ರೆಗಳಿಗೆ ಕೊರತೆ ನಿಗಿಸಿ ಸೂಸ್ಥಿತಿಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ  ಆಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಆರೋಗ್ಯ ಇಲಾಖೆಯ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರಿ ಆಸ್ಪತ್ರೆಗಳು ಬರುವ ರೋಗಿಗಳು ನೋಡಿದಾಕ್ಷಣ ಅರ್ಧ ರೋಗ ವಾಸಿಯಾಗುವಂತಹ ವಾತಾವರಣ ನಿರ್ಮಾಣವಾಗಬೇಕು ಆಸ್ಪತ್ರೆಗೆ ಬೇಕಾಗುವ ಚಿಕ್ಕ ಯಂತ್ರಗಳಿಂದ ಡಯಾಲಿಸಿಸ್ ಹಾಗೂ ಎಮ್.ಆರ್.ಆಯ್ ಸೇವೆ ಒದಗಿಸುವಲ್ಲಿ ಜಿಲ್ಲಾಡಳಿತ ತಯಾರಿದ್ದು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಇಚ್ಚಾಶಕ್ತಿ ಹೊಂದಬೇಕು ಎಂದರು. 

ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯಬಹುದಾದಂತ ಸೌಲಭ್ಯಗಳು ದೊರೆತರೆ ರೋಗಿಗಳು ಅನ್ಯ ಆಸ್ಪತ್ರೆಗಳ ಮೊರೆಹೋಗುವದಿಲ್ಲ. ಆಸ್ಪತ್ರೆ ಆಕರ್ಷಣೆಗಾಗಿ ಆವರಣ ಸ್ವಚ್ಚತೆ ಸಿಸ್ತುಬದ್ದವಾದ ವಾಡರ್ುಗಳು ಉತ್ತಮ ಹಾಸಿಗೆ ಹೊಂದಿರಬೇಕು. ಚಿಕ್ಕ ಮಕ್ಕಳ ವಿಭಾಗದಲ್ಲಿ ಮಕ್ಕಳಿಗೆ ಆಕರ್ಷಕವಾಗುವಂತಹ ಮತ್ತು ಗರ್ಭಿಣಿಯರಿಗೆ ಪೂರಕವಾದಂತ, ಅಂಗವಿಕಲರಿಗೆ ಅಶಕ್ತರಿಗೆ ಬಾಗಿಲಲ್ಲಿಯೇ ವ್ಹೀಲ್ ಚೇರ್ ವ್ಯವಸ್ಥೆ ಮಾಡುವದರ ಜೊತೆಗೆ ರೋಗಿಯು ಔಷದ ಹಾಗೂ ಮಾತ್ರೆಗಳಿಗಾಗಿ ಬೆರೆಕಡೆ ಹೊಗದಂತಾಗಬಾರದು ಎಂದರು. 

ಜಿಲ್ಲೆಯಲ್ಲಿ ಇಂತಹ ವಾತಾವರಣ ಒದಗಿಸಿಕೊಟ್ಟಂತ ಹುನುಗುಂದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕುಸುಮಾ ಮಾಗಿ ಅವರ ಕಾರ್ಯವನ್ನು ಶ್ಲಾಘೀಸಿದರು. ಬಾದಾಮಿ ಸರಕಾರಿ ಆಸ್ಪತ್ರೆಯ ಡಾ.ರೇವಣಸಿದ್ದಪ್ಪ ಬಿ.ಎ ಅವರು ಕೂಡ ತಮ್ಮ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಗರ್ಭಿಣಿ  ಸ್ತ್ರೀಯರಿಗೆ ಹಾಗೂ ಚಿಕ್ಕ ಮಕ್ಕಳಿಗೆ ರಕ್ತದ ಕೊರತೆ ನಿಗಿಸುವಲ್ಲಿ ಪ್ರಥಮ ಆದ್ಯತೆ ನೀಡಲಾಗುವದು. ಇದಕ್ಕಾಗಿ ಜಿಲ್ಲೆಯ ಪ್ರತಿಯೊಂದು ಗ್ರಾ.ಪಂ.ದಲ್ಲಿ ರಕ್ತದಾನ ಶಿಬಿರ ನಡೆಸಲು ಮುಖ್ಯ ಕಾರ್ಯನಿವರ್ಾಹ ಅಧಿಕಾರಿಗಳು ಅನುಮತಿ ನೀಡಿರುವರಲ್ಲದೆ ಸ್ವತಃ ಅವರು ಹಾಗೂ ಅವರ ಪತಿಯವರು ರಕ್ತದಾನ ಮಾಡಿ ಮಾದರಿ ಆಗಿದ್ದಾರೆ ಎಂದರು

ಮಾರಕ ರೋಗಗಳದ ಡೆಂಗ್ಯೂ ಮಲೇರಿಯಾ ಹರಡುವ ಸೊಳ್ಳೆಗಳನ್ನು ಹಿಡಿದು ತರಲಾಗಿತ್ತು ಅವೂಗಲ ಬಗ್ಗೆ ವಿವರಣೆ ನೀಡಿದ ಸಿ.ಇ.ಒ ಅವರು ಇಡಿಸ್ ಸೊಳ್ಳೆಗಳನ್ನು ತಿಂದು ಹಾಕುವ ಗಫಿಲಾರ್ವಾಹಾರಿ ಮೀನಿನ ಮರಿಗಳನ್ನು ವಿಕ್ಷೀಸಿ ಮೀನುಗಳು ಸೊಳ್ಳೆಗಳನ್ನು ತಿಂದು ಹಾಕುವ ಪರಿಗಳನ್ನು ವಿವರಿಸುತ್ತಾ, ಇಂತಹ ಮೀನುಗಳನ್ನು ತಮ್ಮ ಮನೆಯ ನೀರಿನ ಕೊಳದಲ್ಲಿ ಹಾಕಿ ಡೆಂಗ್ಯೂ ಮಲೇರಿಯಾ ರೋಗ ಬಾರದಂತೆ ಜಾಗೃತ ವಹಿಸಬೇಕು ಎಂದು ಡಾ.ದೇಸಾಯಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಕುಟುಂಬ ಕಲ್ಯಾಣಾಧಿಕಾರಿ ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಮಲೇರಿಯಾ ಅಧಿಕಾರಿ ಜಯಶ್ರೀ ಯಮ್ಮಿ, ಡಾ.ವಿಜಯ ಕಂಠಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ವೈದ್ಯಾದಿಕಾರಿಗಳು ಉಪಸ್ಥಿತರಿದ್ದರು. ಈ ಮೊದಲು ರಾಷ್ಟ್ರೀಯ ಡೆಂಗಿ ದಿನಾಚರಣೆ ನಿಮತ್ಯ ಜಿಲ್ಲಾ ಆಸ್ಪತ್ರೆಯಿಂದ ವಿದ್ಯಾಗಿರಿ ಸರ್ಕಲ್ ವರೆಗೆ ಜಾಗೃತಿ ಜಾಥಾ ನಡೆಯಿತು. ಜಾಥಾಕ್ಕೆ ಜಿ.ಪಂ ಸಿಇಓ ಚಾಲನೆ ನೀಡಿದರು. 

ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಸರ್ಮಪಕ ಔಷದೋಪಚಾರ ಮಾಡುವದರ ಜೊತೆಗೆ ಮಗುವಿನ ತಾಯಿಗೂ ಪ್ರತಿದಿನ 175 ರೂ. ಹಾಗೂ ಊಟೋಪಚಾರ 14 ದಿನಗಳ ವರೆಗೆ ಕೊಡಲಾಗುವದು. ಇದರಿಂದ ದುಡಿಮೆಗೆ ಅವಲಂಬಿತರಾದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರ್ಥಿಕ ಸಹಾಯ ಒದಗಿಸಿದಂತಾಗುವದು. ಇದು ಪ್ರತಿಯೊಂದು ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ 198 ಗ್ರಾಮ ಪಂಚಾಯತಿಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ರೋಗಿಗಳಿಗೆ ರಕ್ತದ ಕೊರತೆ ನಿಗಿಸುವಲ್ಲಿ ಸಹಕಾರಿಯಾಗಲಿದೆ. ಆರೋಗ್ಯ ಸಚಿವರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರಿಂದ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುವ್ಯವಸ್ಥಿತವಾಗಿ ಇರಬೇಕಾಗಿದೆ. ವೈದ್ಯರಿಗೆ ರೋಗಿಯ ರೋಗವಾಸಿ ಆಗಿ ಮುಖದಲ್ಲಿ ಅರಳುವ ಮಂದಹಾಸಕ್ಕಿಂತ ಬೇರೆ ಪ್ರಶಸ್ತಿಗಳಿಲ್ಲ. ಇದನ್ನು ಪ್ರತಿಯೊಬ್ಬ ವೈದ್ಯರು ಈ ಸತ್ಯವನ್ನು ಅರಿಯಬೇಕು.

ಗಂಗೂಬಾಯಿ ಮಾನಕರ, ಸಿಇಓ, ಜಿಲ್ಲಾ ಪಂಚಾಯತ