ಬಾಗಲಕೋಟೆ : ಜಿಲ್ಲೆಯ ಆರ್ಥಿಕ ಗಣತಿಗೆ ಸಿದ್ಧತೆ: ಡಿಸಿ ರಾಮಚಂದ್ರನ್

ಬಾಗಲಕೋಟೆ 15: ಕೇಂದ್ರ ಸರ್ಕಾರದ್ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾರ್ಗಸೂಚಿ ಮತ್ತು ನಿರ್ದೇಶನಗಳ ಅನುಸಾರ, ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ಮತ್ತು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ 7ನೇ ಆರ್ಥಿಕ  ಗಣತಿಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಕೇಸ್ವಾನ್ ವಿಸಿ ಹಾಲ್ನಲ್ಲಿಂದು ಜರುಗಿದ ಆಥರ್ಿಕ ಗಣತಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಥರ್ಿಕ ಗಣತಿಯನ್ನು ಸಾಮಾನ್ಯವಾಗಿ 5 ವರ್ಷಗಳಿಗೊಮ್ಮೆ ಕೈಗೊಳ್ಳಲಾಗುತ್ತಿದ್ದು, ಗಣತಿ ಕಾರ್ಯ ಸುಗಮವಾಗಿ ಮತ್ತು ಸೂಸುತ್ರವಾಗಿ ನಡೆಯುವಂತಾಗಬೇಕು.  ಸಮಗ್ರ ಮತ್ತು ಸಂಪೂರ್ಣ ಗಣತಿ ಕಾರ್ಯ ಜರುಗುದ ಬಗ್ಗೆ ಪರಿಶೀಲನೆ ಕಾರ್ಯ ಕೈಗೊಂಡು ಗಣತಿ ಕ್ಷೇತ್ರ ಕಾಯರ್ಾಚರಣೆಯಲ್ಲಿ ನಿಖರವಾದ ಮಾಹಿತಿ ಸಂಗ್ರಹಿಸಲು ಕ್ರಮ ಜರುಗಿಸತಕ್ಕದ್ದೆಂದು ತಿಳಿಸಿದರು.

ಇದೇ ಪ್ರಥಮ ಬಾರಿಗೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಮೊಬೈಲ್ ಆಪ್ ಮೂಲಕ ಗಣಿ ಕಾರ್ಯಕೈಗೊಳ್ಳಲಾಗುತ್ತಿದೆ. ಆಥರ್ಿಕ ಗಣತಿ ಕ್ಷೇತ್ರ ಕಾರ್ಯಾ ಚರಣೆಯನ್ನು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ವಾರದಲ್ಲಿ ಆಯಾ ತಾಲೂಕಾ ಹಂತದಲ್ಲಿ ತರಬೇತಿ ಕಾಯರ್ಾಗಾರ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ನಗರ ಅಥವಾ ಗ್ರಾಮೀಣ ಪ್ರದೇಶಗಳು ಸೇರಿದಂತೆ ಒಂದು ಭೌಗೋಳಿಕ ಕ್ಷೇತ್ರ ವ್ಯಾಪ್ತಿಯಲ್ಲಿ ಜರುಗುತ್ತಿರುವ ಎಲ್ಲ ಆಥರ್ಿಕ ಚಟುವಟಿಕೆಗಳ ವಿವರಗಳನ್ನು ಆಥರ್ಿಕ ಗಣತಿ ಕ್ಷೇತ್ರ ಕಾಯರ್ಾಚರಣೆಯಲ್ಲಿ ಸಂಗ್ರಹಿಸಲಾಗುತ್ತಿರುವುದರಿಂದ ಗಣತಿ ಕಾರ್ಯದಲ್ಲಿ ತಹಶೀಲ್ದಾರರು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಗಣತಿದಾರರಿಗೆ ಬ್ಲಾಕ್ಗಳನ್ನು ಗುರುತಿಸಲು ನೇರವಾಗಬೇಕು. ಸಮಗ್ರ ಮತ್ತು ಸಂಪೂರ್ಣ ಗಣತಿ ಕಾರ್ಯ ಜರುಗುವ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕು. ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಗರ ಪ್ರದೇಶದಲ್ಲಿ ಗಣತಿದಾರರಿಗೆ ಬ್ಲಾಕ್ಗಳನ್ನು ಗುರುತಿಸಲು ನೆರವಾಗುವುದು. 

ಕೈಗಾರಿಕೆ ಮತ್ತು ವಾಣಿಜ್ಯ, ವಾಣಿಜ್ಯ ತೆರಿಗೆ, ಸಹಕಾರ ಸಂಘಗಳ ನಿಬಂಧಕರು ಹಾಗೂ ಕಾಮರ್ಿಕ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಉದ್ದಿಮೆಗಳಿಗೆ ಮತ್ತು ವಾಣಿಜ್ಯ ಘಟಕಗಳಿಗೆ ಗಣತಿ ಕಾರ್ಯದಲ್ಲಿ ಸಹಕರಿಸುವದರ ಜೊತೆಗೆ ನಿಖರವಾದ ಮಾಹಿತಿ ಸಂಗ್ರಹಣೆಯಾಗುವುದನ್ನು ಖಾತ್ರಿಪಡಿಸಿಕೊಳ್ಳಲು ತಿಳಿಸಿದರು. 

ಜಿಲ್ಲಾ ಅಂಕಿ ಸಂಖ್ಯೆ ಇಲಾಖೆಯ ಅಧಿಕಾರಿ ಗಂಗಾಧರ ದಿವಟರ ಆಥರ್ಿಕ ಗಣತಿಯಿಂದ ಆಯಾ ಪ್ರದೇಶದಲ್ಲಿ ವಾಸವಿರುವ ಜನತೆಯ ಆಥರ್ಿಕ ಸ್ವಾವಲಂಬನೆಯ ಚಿತ್ರಣ, ದೇಶದ, ರಾಜ್ಯದ ಜಿಲ್ಲೆಯ ಆಂತರಿಕ ಉತ್ಪಾದನೆಯನ್ನು ಅಂದಾಜು ಮಾಡಲು ನೆರವಾಗುತ್ತದೆ. ಸುಸ್ಥಿರ ಆರ್ಥಿಕ  ನೀತಿಯನ್ನು ರೂಪಿಸಲು ಸಹಕಾರಿಯಾಗುವದರ ಜೊತೆಗೆ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ ಉದ್ದಿಮೆಗಳನ್ನು ಉತ್ತೇಜಿಸಲು ಯೋಜನೆಗಳನ್ನು ರೂಪಿಸಲು ನೆರವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜಿಸಲು ತಳಹದಿಯಾಗಿರುತ್ತದೆ ಎಂದು ತಿಳಿಸದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಎಚ್.ಜಯಾ, ಇಕ್ರಮ ಸೇರಿದಂತೆ ಆಯಾ ತಾಲೂಕಾ ತಹಶೀಲ್ದಾರರು, ಜಿ.ಪಂ ಕಾರ್ಯನಿರ್ವಾಹಕ  ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು/ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.