ಜಿಲ್ಲಾಧಿಕಾರಿಗಳಿಂದ ಬಾಡ ಅರಮನೆ ಹಾಗೂ ಹಾನಗಲ್ ತಹಶೀಲ್ದಾರ ಕಚೇರಿ ಭೇಟಿ
ಹಾವೇರಿ 18: ಶಿಗ್ಗಾಂವ ತಾಲೂಕು ಬಾಡ ಗ್ರಾಮದ ಕನಕದಾಸ ಅರಮನೆಗೆ ಹಾಗೂ ಹಾನಗಲ್ ತಹಶಿಲ್ದಾರ ಕಚೇರಿಗೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರೀಶೀಲಿಸಿದರು.
ಅರಮನೆಯು ಸಾರ್ವಜನಿಕರಿಗೆ ಮುಕ್ತವಾಗಿರಬೇಕು, ಹೆಚ್ಚು ಹೆಚ್ಚು ಜನರು ಅರಮನೆ ವೀಕ್ಷಿಸಿಸುವಂತಾಗಬೇಕು. ಅರಮನೆಯು ಸುಂದರ ಪ್ರವಾಸಿತಾಣವಾಗಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಸಲಹೆ ನೀಡಿದರು.ಕನಕದಾಸ ಅರಮನೆ, ಯಾತ್ರಿ ನಿವಾಸ, ಕಲಾಭವನ, ಸಂಗೀತ ನೃತ್ಯ ಕಾರಂಜಿ, ಬಯಲು ರಂಗಮಂದಿರ ಮತ್ತು ಉದ್ಯಾನವನ ಸ್ವಚ್ಛತೆ ಪರೀಶೀಲನೆ ನಡೆಸಿದ ಅವರು, ಅರಮನೆ ಆವರಣ ಸೇರಿದಂತೆ ಎಲ್ಲ ಸ್ಥಳಗಳನ್ನು ಸ್ವಚ್ಛತೆ ಜೊತೆಗೆ ಅಚ್ಚುಕಟ್ಟಾಗಿ ನಿರ್ವಹಣೆಗ ಮಾಡುಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಹಾನಗಲ್ ತಾಲೂಕಿನ ತಹಶೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಚೇರಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಪರೀಶೀಲಿಸಿದರು. ಕಚೇರಿಯ ಕಾರ್ಯನಿರ್ವಹಣೆ ಪರೀಶೀಲಿಸಿದ ಅವರು, ಸಾರ್ವಜನಿಕ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಹಾಗೂ ಕಚೇರಿಗೆ ಬರುವಂತ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.
ಕಚೇರಿಯಲ್ಲಿ ಸಿಬ್ಬಂದಿಗಳು ವಿನಾಕಾರಣ ಕಾಲಹರಣ ಮಾಡದೇ ನಿಗದಿತ ಸಮಯದೊಳಗೆ ಸಾರ್ವಜನಿಕ ಕುಂದು ಕೊರತೆಗಳ ವಿಲೇಮಾಡಬೇಕು ಎಂದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಇದೆ ಸಂದರ್ಭದಲ್ಲಿ ಹಾನಗಲ್ ತಾಲೂಕಿನ ಹರವಿ ಗ್ರಾಮದ ರಿಸನಂ: 80/5 ಕ್ಷೇತ್ರ 2ಎ-17ಗುಂ ನೇದ್ದರ ಜಮೀನಿಗೆ ಸಂಗಪ್ಪ ಬಸವಣ್ಣೆಪ್ಪ ಬಾಣದ ಅವರಿಗೆ ಜಿಲ್ಲಾಧಿಕಾರಿಗಳು ಭೂ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಫಾರ್ಮ ನಂ-10 ವಿತರಣೆ ಮಾಡಿದರು.