ಬಾಬಾನಗರ: ಸಮಾಜ ಕಾರ್ಯ ಶಿಬಿರದ ಸಮಾರೋಪ

Babanagar: Social work camp concludes

ಬಾಬಾನಗರ: ಸಮಾಜ ಕಾರ್ಯ ಶಿಬಿರದ ಸಮಾರೋಪ  

ವಿಜಯಪುರ 15: ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಕ್ಷೇತ್ರಕಾರ್ಯಗಳಲ್ಲಿ ತೊಡಗಿದರೆ ಭವಿಷ್ಯದಲ್ಲಿ ಉತ್ತಮ ಉದ್ಯೋಗ ಅವಕಾಶಗಳನ್ನು ಸಂಪಾದಿಸಬಹುದು ಎಂದು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಮಾಲೋಚಕ ಕಲ್ಲಪ್ಪ ನಂದರಗಿ ಹೇಳಿದರು.  ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಹಾಗೂ ಬಾಬಾನಗರ ಗ್ರಾಮ ಪಂಚಾಯತ ಇವರ ಸಹಯೋಗದಲ್ಲಿ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.  ಏಳು ದಿನಗಳ ಕಾಲ ಶಿಬಿರಾರ್ಥಿಗಳೊಂದಿಗೆ ಕಳೆದ ಅನುಭವ ನನಗೆ ಅಪರೂಪದ ಸಂತೋಷವನ್ನೇ ನೀಡಿತು. ಶಿಬಿರದ ವೇಳೆ ಗ್ರಾಮೀಣ ಸಮೀಕ್ಷೆ, ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ದೊರೆತದ್ದು ನನ್ನ ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ ಎಂದರು. ಗ್ರಾಮ ಪಂಚಾಯತ ಸಿಬ್ಬಂದಿ ನಾರಾಯಣ ಶಿಂದೆ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಇಂತಹ ಶಿಬಿರಗಳು ಅತ್ಯಂತ ಅಗತ್ಯವಿದೆ. ಶಿಬಿರಾರ್ಥಿಗಳು ನಮ್ಮ ಗ್ರಾಮ ಪಂಚಾಯ್ತಿಗೆ ಬಂದು ಏಳು ದಿನಗಳ ಕಾಲ ಊರಿನಲ್ಲಿ ವಾಸ್ತವ್ಯ ಮಾಡಿದ್ದು ಅತ್ಯಂತ ಪ್ರಶಂಸನೀಯ. ತಮ್ಮ ಅಧ್ಯಯನದ ಭಾಗವಾಗಿ ಈ ಶಿಬಿರದ ಮೂಲಕ ಹಲವಾರು ಮಹತ್ವದ ವಿಷಯಗಳನ್ನು ಕಲಿತುಕೊಂಡಿರುವರೆಂಬ ನಂಬಿಕೆ ನನಗಿದೆ ಎಂದರು. ಈ ಏಳು ದಿನಗಳ ಕಾಲ ನಡೆದ ಶಿಬಿರದಲ್ಲಿ ಯೋಗ ಧ್ಯಾನ, ಚಿಂತನ ಮಂಥನ, ಶ್ರಮದಾನ ಕಾರ್ಯಕ್ರಮ, ಎರಡು ದಿನ ಶಿಬಿರಾರ್ಥಿಗಳು ಗ್ರಾಮದ ಒಟ್ಟು 250 ಕುಟುಂಬಗಳನ್ನು ಸಮೀಕ್ಷೆ, ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.   ಶಿಬಿರದಲ್ಲಿ  ಮಹಿಳಾ  ವಿವಿಯ ವಿದ್ಯಾರ್ಥಿನಿಯರು, ಊರಿನ ಹಿರಿಯರು, ಗ್ರಾಮ ಪಂಚಾಯತಿಯ ಪದಾಧಿಕಾರಿಗಳು, ಅಧ್ಯಕ್ಷೆ ಸಾಹೇರಾಭಾನು ಏಳಾಪುರ, ಉಪಾಧ್ಯಕ್ಷ ಅಯ್ಯಗೌಡ ರುದ್ರಗೌಡರ, ಸದಸ್ಯರಾದ ಸಿದಗೊಂಡ ರುದ್ರಗೌಡ ರುದ್ರಗೌಡರ, ಅಶೋಕ ನಿಂಗನಗೌಡ ಬಿರಾದಾರ, ಪ್ರಕಾಶ ಸಿದ್ರಾಮ ಆಯತವಾಡ, ಮಹಮದಲೀಫ ಅಮೀನಸಾಬ ಮಕಾಂದಾರ, ಶ್ರೀಕಾಂತ ಭಜಂತ್ರಿ, ರಾಜಕುಮಾರ ರಾಮಣ್ಣ ವಾಲಿಕಾರ, ಕಲ್ಲಪ್ಪ ನಂದರಗಿ, ಸಂತೋಷಕುಮಾರ, ಜಾಕೀರ ಏಳಾಪುರ ಹಾಗೂ ಶಿಬಿರದ ನಿರ್ದೆಶಕಿ ಡಾ. ಕಲಾವತಿ ಕಾಂಬಳೆ, ಶಿಬಿರದ ಸಹಾಯಕರಾದ ಶ್ರೀನಾಥ ಪಾಟೀಲ, ಮಂಜುಳಾ ಮುದಿಗೌಡರ, ಶಿಬಿರಾರ್ಥಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕಿ ಡಾ.ಕಲಾವತಿ ಎಚ್‌. ಕಾಂಬಳೆ ವರದಿ ವಾಚನ ಮಾಡಿದರು. ಭೂಮಿಕಾ ಕೊಣ್ಣೂರ ಸ್ವಾಗತಿಸಿದರು. ಲಕ್ಷ್ಮೀ ಹಿರೇಮಠ ನಿರೂಪಿಸಿದರು. ಶ್ರೀನಾಥ ಪಾಟೀಲ ವಂದಿಸಿದರು.