ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನೆ

BJP protests against the anti-people attitude of the government

ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನೆ  

ತಾಳಿಕೋಟಿ 05: ಸರ್ಕಾರಿ ಬಸ್ ಗಳ ಪ್ರಯಾಣದರ ಶೇ.15 ಏರಿಕೆ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಜನ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ನಗರ ಘಟಕದ ವತಿಯಿಂದ ರವಿವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂಗಳನ್ನು ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ(ಕೂಚಬಾಳ)  ಮಾತನಾಡಿ ಗ್ಯಾರೆಂಟಿಗಳ ಸುಳ್ಳು ಭರವಸೆಗಳಿಂದಾಗಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕಳೆದ 2 ವರ್ಷಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಈಗಾಗಲೇ ಹಲವಾರು ವಸ್ತುಗಳ ಬೆಲೆಗಳನ್ನು ಏರಿಸಿ ಸಾಮಾನ್ಯ ಜನರ ಬದುಕು ಮೂರಾಬಟ್ಟಿ ಮಾಡಿದ ಈ  ಸರ್ಕಾರ ಇದೀಗ ಸರ್ಕಾರಿ ಬಸ್ ಗಳ ದೂರ ಶೇ.15 ರಷ್ಟು ದುಬಾರಿಯಾಗಿ ಏರಿಸಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ, ಸರ್ಕಾರದ ಹಣಕಾಸಿನ ಸ್ಥಿತಿ ಹಾಳಾಗಿ ಹೋಗಿದ್ದು ಸರ್ಕಾರಿ ನೌಕರರಿಗೆ ಕಳೆದ ಐದು ತಿಂಗಳ ಗಳಿಂದ ಸಂಬಳ ನೀಡಿಲ್ಲ ಆರ್ಥಿಕ ಸ್ಥಿತಿಯ ಕುರಿತು ಶ್ವೇತ ಪತ್ರ ಹೊರಡಿಸುವ ಶಕ್ತಿ ಈ ಸರ್ಕಾರಕ್ಕಿಲ್ಲ ಇದೊಂದು ಹೊಣೆಗೇಡಿ ಸರಕಾರವಾಗಿದ್ದು ರಾಜ್ಯದ ಜನರು ಈ ಸರ್ಕಾರದ ಮೇಲೆ ಹಿಡಿ ಶಾಪ ಹಾಕುತ್ತಿದ್ದಾರೆ ಸರ್ಕಾರದ ಈ ಕೆಟ್ಟ ಧೋರಣೆಗಳನ್ನು ವಿರೋಧಿಸಿ ನಮ್ಮ ಪಕ್ಷವು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದೆ ಆದಷ್ಟು ಬೇಗ ಈ ಜನ ವಿರೋಧಿ ನಿರ್ಣಯವನ್ನು ಹಿಂಪಡೆಯಬೇಕು ಇಲ್ಲದೆ ಹೋದರೆ ಇನ್ನಷ್ಟು ಉಗ್ರವಾದ ಹೋರಾಟವನ್ನು ನಡೆಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ನಗರ ಘಟಕ ಅಧ್ಯಕ್ಷ ರಾಘವೇಂದ್ರ ಚವಾಣ್,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ,ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುವರ್ಣಾ ಬಿರಾದಾರ,ಮಂಡಲ ಕಾರ್ಯದರ್ಶಿ ಮಹಾಂತೇಶ ಮುರಾಳ,ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ, ಪುರಸಭೆ ಸದಸ್ಯ ಮುದುಕಪ್ಪ ಬಡಿಗೇರ, ಜೈಸಿಂಗ್ ಮೂಲಿಮನಿ, ಬಿಜೆಪಿ ಸಾಮಾಜಿಕ ಜಾಲತಾಣ ನಿರ್ವಾಹಕ ಈಶ್ವರ್ ಹೂಗಾರ,ವಿಠ್ಠಲ್ ಮೋಹಿತೆ,ರವಿ ಕಟ್ಟಿಮನಿ,ರಾಘು ಮಾನೆ, ನಾಗರಾಜ್ ಬಳಿಗಾರ ಹಾಗೂ ಪಕ್ಷದ ಪದಾಧಿಕಾರಿಗಳು ಇದ್ದರು.