ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮನವಿ

 ಬೈಲಹೊಂಗಲ 08: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ನಾಡಿನ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು  ತುಘಲಕ ಮಾದರಿ ಆಡಳಿತ ನಡೆಸುತ್ತಿದೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಆರೋಪಿಸಿದರು. 

       ಅವರು ಸೋಮವಾರ ಬೈಲಹೊಂಗಲ ಮಂಡಲ ಬಿಜೆಪಿ ಘಟಕದ ವತಿಯಿಂದ ರಾಜ್ಯ ಸಕರ್ಾರ ತೈಲ ಬೆಲೆ ಏರಿಸಿರುವದನ್ನು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಪುಟ್ಟರಂಗಶೆಟ್ಟಿ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,   ರಾಜ್ಯ ಸಕರ್ಾರ  ತನ್ನ ಸಂಪನ್ಮೂಲ ಕ್ರೋಡಿಕರಣ ಸಲುವಾಗಿ ತೈಲ ಬೆಲೆಯನ್ನು ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ.  ಸಕರ್ಾರದ ಸಚಿವರು ಸ್ವಚ್ಚ ಆಡಳಿತ ನೀಡುವ  ಬದಲಾಗಿ  ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಅಂತಹವರನ್ನು ಸಕರ್ಾರ ರಕ್ಷಿಸುತ್ತಿದೆ ಎಂದು ಆಪಾದಿಸಿದರು. 

        ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತನ ಹತ್ತಿರ  ಶಕ್ತಿಸೌಧ ವಿಧಾನಸೌಧದ ದ್ವಾರದ ಬಳಿ ರೂ. 25 ಲಕ್ಷ ಕಿಕ್ ಬ್ಯಾಕ ಹಣ ಸಿಕ್ಕಿದ್ದರೂ ಕೂಡಾ ಕಾಂಗ್ರೇಸ್ ಅಧ್ಯಕ್ಷರು, ಮುಖ್ಯಮಂತ್ರಿಗಳು ಅವರ ರಕ್ಷಣೆಗೆ ನಿಂತಿರುವದು ದುರದುಷ್ಟಕರ ಸಂಗತಿ. ಪುಟ್ಟರಂಗಶೆಟ್ಟಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿದರು. 

       ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸಕರ್ಾರ ದೇಶದ ಹಿತ ರಕ್ಷಣೆಗಾಗಿ ಕಂಕಣಬದ್ಧವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತಿದ್ದು ಅದನ್ನು ಜನರಿಗೆ ತಲುಪಿಸುವಲ್ಲಿ ರಾಜ್ಯ ಸಕರ್ಾರ ವಿಫಲವಾಗಿದೆ. ತೆರಿಗೆ ಕಟ್ಟುವ ಜನರಿಗೆ ಟ್ಯಾಕ್ಸ ಕಟ್ಟಲು ಹೊರಟಿರುವ ಕುಮಾರಸ್ವಾಮಿ ನೇತೃತ್ವದ ಸಕರ್ಾರ ಶುಕ್ರವಾರವಷ್ಟೇ ಡಿಸೈಲ್ ಮತ್ತು ಪೆಟ್ರೋಲ್ ದರವನ್ನು ಪರಿಷ್ಕರಿಸಿ ದರವನ್ನು ಹೆಚ್ಚಳ ಮಾಡಿ  ಗ್ರಾಹಕರಿಗೆ ಹೊಸ ವರ್ಷದ ಬಿಸಿ ಮುಟ್ಟಿಸಿದೆ. ಇದರ ಬೆನ್ನಲ್ಲೆ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡುವ ನಿರೀಕ್ಷೆ ಇದ್ದು ಇದರಿಂದ ರಾಜ್ಯದ ಬಡ, ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಆಥರ್ಿಕ ಹೊರೆಯಾಗಲಿದೆ ಎಂದರು. 

       ಸಚಿವ ಪುಟ್ಟರಂಗಶೆಟ್ಟಿ ಅವರು ವಿಧಾನಸೌಧದಲ್ಲಿಯೇ 25 ಲಕ್ಷ ರೂಪಾಯಿಗಳ ಕಿಕ್ ಬ್ಯಾಕ್ ಹಣ ಪಡೆದಿರುವದು ಸಾಬೀತಾದರೂ ಸಹ ಸಕರ್ಾರ ಅವರ ಬೆನ್ನಿಗೆ ನಿಂತು ಅವರನ್ನು ರಕ್ಷಿಸುತ್ತಿದೆ. ಶಾಸನ ರೂಪಿಸಬೇಕಾದ ಸಚಿವರೇ ಭ್ರಷ್ಟಾಚಾರದಲ್ಲಿ ತೊಡಗಿರುವದು ದುರದುಷ್ಟಕರ ಸಂಗತಿ. ಕೂಡಲೇ ರಾಜ್ಯಪಾಲರು  ಮಧ್ಯ ಪ್ರವೇಶ ಮಾಡಿ  ರಾಜ್ಯ ಸಕರ್ಾರ ಪರಿಷ್ಕರಣೆ ಮಾಡಿರುವ  ತೈಲ ಬೆಲೆ ದರ ಏರಿಕೆ  ಹಾಗೂ ಬಸ್ ಪ್ರಯಾಣ ದರ ಏರಿಕೆ ಮಾಡಲು ಉದ್ದೇಶಿಸಿರುವದನ್ನು ಕೈ ಬಿಡಬೇಕೆಂದು ಸೂಚನೆ ನೀಡಿ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಿರುವ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವದಾಗಬೇಕು. ಇಲ್ಲವಾದಲ್ಲಿ ಮುಂಬರುವ  ದಿನಗಳಲ್ಲಿ ಸಕರ್ಾರದ ವಿರುದ್ದ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಪ್ರತಿಭಟಣೆ ಮಾಡಲಾಗುವದು. ಎಂದು ಈ ಮೂಲಕ ಸಕರ್ಾರಕ್ಕೆ ಎಚ್ಚರಿಕೆ ನೀಡಿದರು.  

     ಪ್ರತಿಭಟನಾಕಾರರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಟೈರಗೆ ಬೆಂಕಿ ಹಚ್ಚಿ ಸಚಿವ ಪುಟ್ಟರಂಗಶೆಟ್ಟಿ ಹಾಗೂ ಸಕರ್ಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ವಾಹನ ಸವಾರರು ಟ್ರಾಫಿಕ್ ಜಾಮನಿಂದ ಪರದಾಡಿದರು. 

         ಸೋಮನಾಥ ಸೊಪ್ಪಿಮಠ, ರಾಜು ಕುಡಸೋಮನ್ನವರ, ಗುರುಪಾದ ಕಳ್ಳಿ,  ಬಸನಗೌಡ ಪಾಟೀಲ, ಶ್ರೀಶೈಲ ಯಡಳ್ಳಿ, ಮಹೇಶ ಹರಕುಣಿ, ಮಾರುತಿ ತಿಗಡಿ, ಬಸವರಾಜ ನೇಸರಗಿ, ಉಳವಪ್ಪ ಬೋರಕನವರ, ಬಸನಗೌಡ ಸಂಗನಗೌಡರ, ಗಂಗಪ್ಪ ಹೋಟಿ, ಸುರೇಶ ಯರಗಟ್ಟಿ, ಸಂಜಯ ಗಿರೆಪ್ಪಗೌಡರ, ಮುರಿಗೆಪ್ಪ ಗುಂಡ್ಲೂರ, ಈಶ್ವರ ಕೊಪ್ಪದ, ದೀಪಕ ಚುಳಕಿ, ಆರ್.ಎ.ಪಾಟೀಲ, ಶ್ರೀಶೈಲ ಅಂದಾನಿ, ಆಶೀಫ ಗೋವೆ, ಉಮೇಶ ಕಾದ್ರೊಳ್ಳಿ, ಜಗದೀಶ ಜಗಜಂಪಿ, ಬಸ್ಸು ಪಾಟೀಲ, ಈರಪ್ಪ ಜಿರಳಿ ಹಾಗೂ ನೂರಾರು ಕಾರ್ಯಕರ್ತರು ಇದ್ದರು.