ಲೋಕದರ್ಶನ ವರದಿ
ಕೂಡ್ಲಿಗಿ 23:ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯ ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಪತ್ರಿಕೆ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನ,ವಾರ,ಪಾಕ್ಷಿಕ,ಮಾಸಿಕ ಇತರೆ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆಗೈಯ್ಯುತ್ತಿರುವವರು,ಆಸಕ್ತ ವರದಿಗಾರರು ಕನರ್ಾಟಕ ಪ್ರೆಸ್ಸ್ ಕ್ಲಬ್(ರಿ)ರಾಜ್ಯಾಧ್ಯಂತ ಸದಸ್ಯರನ್ನೊಳಗೊಂಡಿದ್ದು,ನೊಂದಣಿಗೆ ಕೂಡ್ಲಿಗಿ ತಾಲೂಕಿನಆಸಕ್ತ ವರದಿಗಾರರಿಂದ ಆಹ್ವಾನಿಸಲಾಗಿದೆ.
ಈಕುರಿತು ಕನರ್ಾಟಕ ಪ್ರೆಸ್ಸ್ ಕ್ಲಬ್ ರಾಜ್ಯಾಧ್ಯಕ್ಷ ಟಿ.ಶಿವಕುಮಾರವರು ಪತ್ರಿಕೆ ಹೇಳಿಕೆಯನ್ನು ನೀಡಿದ್ದು,ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಂಘಟನೆಯು ರಾಜ್ಯಾಧ್ಯಂತ ಸದಸ್ಯತ್ವ ನೊಂದಣಿ ಮಾಡಿಕೊಳ್ಳುತ್ತಿದ್ದು, ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ಪತ್ರಕರ್ತರು ನೊಂದಾಯಿಸಿಕೊಳ್ಲುತ್ತಿದ್ದಾರೆ, ಅದರಂತೆ ಬಳ್ಳಾರಿಜಿಲ್ಲೆಯಲ್ಲಿಯೂ ನೊಂದಣಿಗೆ ಅಜರ್ಿ ಆಹ್ವಾನಿಸಿದ್ದು, ಬಳ್ಳಾರಿಜಿಲ್ಲೆಯ ವಿವಿದ ತಾಲೂಕುಗಳಲ್ಲಿ ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಯಾವುದೇ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸಂಘಟನೆಯಲ್ಲಿ ನೊಂದಣಿ ಮಾಡಿಸುವ ವರದಿಗಾರರು ನೊಂದಣಿ ಮಾಡಿಸಬಹುದಾಗಿದೆ. "ಕನರ್ಾಟಕ ಪ್ರೆಸ್ಸ್ ಕ್ಲಬ್ಹೆಸರಲ್ಲಿ 500ರೂಗಳ ನೊಂದಣಿ ಶುಲ್ಕವನ್ನು ಡಿಡಿ ರೂಪದಲ್ಲಿ ತೆರಸಿ, ರಸೀದಿಯೊಂದಿಗೆ ಸೂಕ್ತ ದಾಖಲುಗಳಸಮೇತ ನಿಗಧಿತ ಅಜರ್ಿನಮೂನೆಯನ್ನು ತುಂಬಿ ನೇರವಾಗಿ ಸಂಘಟನೆಯರಾಜ್ಯ ಕೇಂದ್ರ ಕಛೇರಿಗೆ ಅಥವಾ ನಿಗದಿತ ಪತ್ರಕರ್ತ ಮುಖಂಡರಲ್ಲಿ ಸಲ್ಲಿಸಬೇಕೆಂದು ಟಿ.ಶಿವಕುಮಾರವರು ಅವರು ಕೋರಿದ್ದಾರೆ.ಸಂಘಟನೆಯು ಪ್ರಕರ್ತರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಕರ್ಾರದಿಂದ ಒದಗಿಬರಲಿರುವ ಎಲ್ಲಾ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿ ಪತ್ರಕರ್ತರ ಕುಟುಂಬ ವರ್ಗದ ಅಭಿವೃದ್ದಿಗೆ ಸೂಕ್ತ ಭದ್ರತೆಗಾಗಿ ಅಗತ್ಯ ಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಕರ್ಾರದ ಮೇಲೆ ಪ್ರಭಾವ ಬೀರುವಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ಬಳ್ಳಾರಿ ಜಿಲ್ಲೆ ವಿವಿದ ತಾಲೂಕುಗಳಲ್ಲಿ ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ವಿವಿದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರು ಸಂಘಟನೆಯಲ್ಲಿನೊಂದಣಿ ಮಾಡಿಸುವಲ್ಲಿ ಆಸಕ್ತಿಹೊಂದಿದ್ದಲ್ಲಿ ಕೂಡಲೇ ಕೂಡ್ಲಿಗಿಯ ಹಿರಿಯ ವರದಿಗಾರ ವಿ,ಜಿ.ವೃಷಭೆಂದ್ರ ಅವರನ್ನು ನೇರವಾಗಿ ಬೆಟ್ಟಿಯಾಗಬಹುದು ಅಥವಾ ಮೊ ನಂ 9008937428 ಸಂಪಕರ್ಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಮತ್ತು ನೊಂದಣಿ ಅಜರ್ಿ ನಮೂನೆಗಾಗಿ ಕೂಡ್ಲಿಗಿ ಪಟ್ಟಣದ ಕೋಟರ್್ ಎದುರುಗಡೆಯಿರುವ ಬಳ್ಳಾರಿ ಬೆಳಗಾಯಿತು ಕಛೇರಿ ಅಮಪಕರ್ಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಲ್.ಎಸ್.ಬಷೀರ್ ಅಹಮ್ಮದ್,ವಿ.ಜಿ.ವೃಷಭೇಂದ್ರ, ಟಿ.ಇಬ್ರಾಹೀಂ ಖಲೀಲ್, ಬಡಿಗೇರ ನಾಗರಾಜ, ಎಲೆನಾಗರಾಜ, ಸಂಘಟನೆಯ ಸಾಂಸೃತಿಕಬಳಗದ ಆರ್ಯನ್, ಹಡಗಲಿ ಪತ್ರಕರ್ತರಾದ ಸುರೇಶ ಮುಂತಾದವರುಉಪಸ್ಥಿತರಿದ್ದರು.