ಅಯೋಧ್ಯೆ ರಾಮ ಮಂದಿರ ಮಾದರಿ ಪ್ರದರ್ಶನ ಆರಂಭ

Ayodhya Ram Mandir model exhibition begins

ಅಯೋಧ್ಯೆ ರಾಮ ಮಂದಿರ ಮಾದರಿ ಪ್ರದರ್ಶನ ಆರಂಭ  

 ತಾಳಿಕೋಟೆ, 05; ಸ್ಥಳೀಯ ಆರ್ಯವೈಶ್ಯ ಸಮಾಜದ ನಗರೇಶ್ವರ ದೇವಸ್ಥಾನದ ಸಹಯೋಗದೊಂದಿಗೆಪಟ್ಟಣದ ವಾಸವಿ ಕಲ್ಯಾಣ ಮಂಟಪ, ನಗರೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆ ರಾಮ ಮಂದಿರ ಮತ್ತು ಬಾಲರಾಮನ ಮಾದರಿ ಪ್ರದರ್ಶನ ಪ್ರಾರಂಭವಾಗಿದ್ದು ಮಾ.12ರವರೆಗೆ ಪ್ರತಿದಿನ ಬೆಳಿಗ್ಗೆ 10.00 ಗಂಟೆಯಿಂದ ರಾತ್ರಿ 8.30ರವರೆಗೆ ಪ್ರದರ್ಶನವು ಭಕ್ತಾದಿಗಳಿಗೆ ಲಭ್ಯವಿದೆ. ಮಾದರಿ ನಿಜವಾದ ರಾಮಮಂದಿರವನ್ನೆ ನೋಡಿದಂತಾಗುತ್ತಿದೆ. ಜೊತೆಗೆ ಒಳಗೆ ಬಾಲರಾಮನನ್ನು ಪ್ರತಿಷ್ಠಾಪಿಸಿರುವುದು ವಿಶೇಷ ಎಂದು ಆನಂದ ಕುಲಕರ್ಣಿ ಹಾಗೂ ಪ್ರಶಾಂತ ಜನಾದ್ರಿ ತಿಳಿಸಿದರು. 

 ಮಂಗಳವಾರದಂದು ಸಂಜೆ ಸಾಯಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆದಿತ್ತು. ಆರ್ಯವಂಶ ಸಮಾಜದ ಅಧ್ಯಕ್ಷ ಡಾ.ಎಲ್‌.ಎನ್‌.ಶೆಟ್ಟಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆ ಗ್ರಾಮದ ವಿನಯರಾಮ ಅವರು ರಾಜ್ಯಾದ್ಯಂತ 108 ಸ್ಥಳಗಳಲ್ಲಿ ಅಯೋಧ್ಯೆ ರಾಮ ಮಂದಿರ ಮಾದರಿ ಪ್ರದರ್ಶನ ಮಾಡಲು ಸಂಕಲ್ಪಿಸಿದ್ದರು. ಈಗಾಗಲೇ ರಾಜ್ಯದ 11 ಜಿಲ್ಲೆಗಳಲ್ಲಿ33 ವಿವಿಧ ಮಠಮಾನ್ಯಗಳು ಸೇರಿದಂತೆ 78 ಸ್ಥಳಗಳಲ್ಲಿ ಪ್ರದರ್ಶನ ಮಾಡಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈ ಪ್ರದರ್ಶನದ ಹಿಂದೆ ಐದು ಉದ್ದೇಶಗಳಿವೆ. ಸನಾತನ ಧರ್ಮದ ಅರಿವು ಮೂಡಿಸುವ ಪ್ರಯತ್ನ. ರಾಮಾವತಾರದ ಉದ್ದೇಶ ಧರ್ಮ ಶಿಕ್ಷಣ, ಆತ್ಮಜ್ಞಾನದ ಉಪದೇಶವಾಗಿತ್ತು. ರಾಮನ ಆದರ್ಶ ಗುಣಗಳು ಯಾವುದೇ ಜಾತಿ, ಧರ್ಮಕ್ಕೆ, ಪಕ್ಷಕ್ಕೆ ಸೀಮಿತವಲ್ಲ. ಸೂರ್ಯ ಎಲ್ಲರಿಗೂ ಬೆಳಕು ಕೊಟ್ಟಂತೆ ಸೂರ್ಯವಂಶದ ರಾಮನ ಆದರ್ಶ ಎಲ್ಲರಿಗೂ ಬೇಕು. ಸಮಾನತೆ ಹಂಚುವಲ್ಲಿ ಪಂಚತತ್ವದ ಪಾತ್ರ ಮತ್ತು ಅನುಕೂಲ ಇಲ್ಲದವರು, ವಯೋವೃದ್ಧರು ರಾಮ ಮಂದಿರವನ್ನು ಅಲ್ಲಿಗೆ ಹೋಗಿ ನೋಡಲಾಗದವರಿಗೆ ಅವರ ಸ್ಥಳದಲ್ಲಿಯೇ ನೋಡುವ ಸೌಭಾಗ್ಯ ಕಲ್ಪಿಸುವ ಉದ್ದೇಶದಿಂದ ಇದನ್ನು ಮಾಡುತ್ತಿರುವೆ ಎಂದರು.